‘BiggBoss’ ಖ್ಯಾತಿಯ ನಟ ರಾಜೀವ್‌ ಮತ್ತು ಶ್ರೀಜಿತಾ ಅಭಿನಯದ ‘ಉಸಿರೇ ಉಸಿರೇ’ ಚಿತ್ರದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ. ಕೆ ಕಲ್ಯಾಣ್‌ ರಚನೆ, ವಿವೇಕ್‌ ಚಕ್ರವರ್ತಿ ಸಂಗೀತ ಸಂಯೋಜನೆಯ ಈ ಹಾಡಿಗೆ ವಾಸುಕಿ ವೈಭವ್‌ ದನಿಯಾಗಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಸುದೀಪ್‌ ನಟಿಸಿದ್ದಾರೆ ಎನ್ನುವುದು ವಿಶೇಷ.

‘ಇದೊಂದು ನವೀರದ ಪ್ರೇಮಕಥೆ. ಪ್ರೀತಿಗೆ ಜಾತಿಯಿಲ್ಲ ಎಂದು ಸಾರುವ ಕಥೆ. ಎಲ್ಲರೂ ಸಾಮಾನ್ಯವಾಗಿ ಮೊದಲು ಡ್ಯುಯೆಟ್ ಸಾಂಗ್ ಬಿಡುಗಡೆ ಮಾಡುತ್ತಾರೆ. ಆದರೆ ನಾವು ಪ್ಯಾತೋ ಸಾಂಗ್ ಬಿಡುಗಡೆ ಮಾಡಿದ್ದೇವೆ. ಹಾಡಿನಲ್ಲಿ ಇಡೀ ಚಿತ್ರದ ಕಥೆಯಿದೆ. ಹಾಡನ್ನು ಗಮನವಿಟ್ಟು ಕೇಳಿದಾಗ ನಮ್ಮ ಚಿತ್ರದ ಕಥೆ ಅರ್ಥವಾಗುತ್ತದೆ’ ಎನ್ನುತ್ತಾರೆ ‘ಉಸಿರೇ ಉಸಿರೇ’ ಚಿತ್ರದ ಹೀರೋ ರಾಜೀವ್‌. ಅವರ ‘ಉಸಿರೇ ಉಸಿರೇ’ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ. ಕೆ ಕಲ್ಯಾಣ್‌ ರಚಿಸಿರುವ ಈ ಹಾಡಿಗೆ ವಿವೇಕ್‌ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದು, ವಾಸುಕಿ ವೈಭವ್‌ ಹಾಡಿದ್ದಾರೆ. ‘BiggBoss’ ಖ್ಯಾತಿಯ ರಾಜೀವ್‌ ಹೀರೋ ಆಗಿ ನಟಿಸಿರುವ ಈ ಸಿನಿಮಾದ ವಿಶೇಷ ಪಾತ್ರದಲ್ಲಿ ನಟ ಸುದೀಪ್‌ ಇದ್ದಾರೆ. ಸುದೀಪ್‌ ಅವರು ಆಸ್ಥೆಯಿಂದ ನಡೆಸುವ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (CCL) ಕ್ರಿಕೆಟ್‌ ತಂಡದ ಸಕ್ರಿಯ ಸದಸ್ಯ ರಾಜೀವ್‌. ‘ಉಸಿರೇ ಉಸಿರೇ’ ಸಿನಿಮಾ ಅವರ ಬದುಕಿಗೆ ಟರ್ನಿಂಗ್‌ ಪಾಯಿಂಟ್‌ ಆಗಲಿದೆ ಎನ್ನುವ ವಿಶ್ವಾಸ ಸುದೀಪ್‌ ಅವರದ್ದು.

ನಿರ್ಮಾಪಕ ಪ್ರದೀಪ್‌ ಯಾದವ್‌ ಅವರು ನಟ ಸುದೀಪ್‌ ನೆರವನ್ನು ಸ್ಮರಿಸುತ್ತಾರೆ. ‘ಇದು ನನ್ನ ಮೊದಲ ನಿರ್ಮಾಣದ ಚಿತ್ರ.‌ ಚಿತ್ರ ನಿರ್ಮಾಣ ಮಾಡಲು ಕಿಚ್ಚ ಸುದೀಪ್ ಅವರೇ ಸ್ಪೂರ್ತಿ. ಅವರು ನನ್ನ ಬೆನ್ನೆಲುಬಾಗಿ ನಿಂತರು ಹಾಗೂ ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಸುದೀಪ್ ಅವರ ಅಭಿನಯದ ಸನ್ನಿವೇಶಗಳು ಸುಮಾರು 18 ನಿಮಿಷಗಳು ಬರುತ್ತದೆ‌’ ಎನ್ನುತ್ತಾರೆ ಪ್ರದೀಪ್‌ ಯಾದವ್‌. ಶ್ರೀಜಿತಾ ಚಿತ್ರದ ನಾಯಕನಟಿ. ಖ್ಯಾತ ತೆಲುಗು ನಟ ಬ್ರಹ್ಮಾನಂದಂ ಚಿತ್ರದಲ್ಲಿ ಅಭಿನಯಿಸಿದ್ದಾರೆ. ದೇವರಾಜ್, ಸಾಧುಕೋಕಿಲ, ಮಂಜು ಪಾವಗಡ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಶೈನಿಂಗ್ ಸೀತಾರಾಮು ಚಿತ್ರದ ಇತರೆ ಪ್ರಮುಖ ಕಲಾವಿದರು. ಮುಂದಿನ ತಿಂಗಳಲ್ಲಿ ಚಿತ್ರದನ್ನು ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.

Previous articleನವೀನ್‌ ಶಂಕರ್‌ – ಅರ್ಚನಾ ಜೋಯಿಸ್‌ ‘ಕ್ಷೇತ್ರಪತಿ’ | ಆಗಸ್ಟ್‌ 18ರಂದು ಸಿನಿಮಾ ತೆರೆಗೆ
Next article‘ಕಮ್ಯಾಂಡೋ’ ಟ್ರೈಲರ್‌ | ಅದಾ ಶರ್ಮಾ ಹಿಂದಿ ವೆಬ್‌ ಸರಣಿ DisneyPlus Hotstarನಲ್ಲಿ

LEAVE A REPLY

Connect with

Please enter your comment!
Please enter your name here