ಶಶಿಕಿರಣ್‌ ಟಿಕ್ಕಾ ನಿರ್ದೇಶನದಲ್ಲಿ ಅಡವಿ ಸೇಶ್‌ ಅಭಿನಯಿಸಿರುವ ‘ಮೇಜರ್‌’ ಹಿಂದಿ – ತೆಲುಗು ದ್ವಿಭಾಷಾ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಜೀವನ, ಸಾಧನೆ ಆಧರಿಸಿದ ಚಿತ್ರವಿದು. ಟ್ರೈಲರ್‌ನಲ್ಲಿ ಮುಂಬಯಿ 26/11 ತಾಜ್‌ ಹೋಟೆಲ್ ಉಗ್ರರ ಸಂಘರ್ಷದ ಸನ್ನಿವೇಶಗಳು ದಟ್ಟವಾಗಿ ಕಾಣಿಸುತ್ತವೆ.

2008ರ ಮುಂಬಯಿ 26/11 ತಾಜ್ ಹೋಟೆಲ್‌ ಉಗ್ರರ ಸಂಘರ್ಷದಲ್ಲಿ ಜನರನ್ನು ರಕ್ಷಿಸದವರು NSG ಕಮ್ಯಾಂಡೋ ಮೇಜರ್ ಉನ್ನಿಕೃಷ್ಣನ್‌. ಚಿತ್ರದಲ್ಲಿ ಸಂದೀಪ್ ಉನ್ನಿಕೃಷ್ಣನ್‌ ಅವರು ಭಾರತೀಯ ಸೈನ್ಯಕ್ಕೆ ಸಲ್ಲಿಸಿದ ಸೇವೆ ಮತ್ತು ಅವರ ವೈಯಕ್ತಿಕ ಬದುಕಿನ ವಿವರಗಳೂ ಇರಲಿವೆ ಎನ್ನಲಾಗಿದೆ. ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಿರುವ ಚಿತ್ರದ ಟ್ರೈಲರ್‌ ಇಂದು ಬಿಡುಗಡೆಯಾಗಿದೆ. ಪ್ರಕಾಶ್‌ ರೈ ಮತ್ತು ರೇವತಿ ಅವರು ಸಂದೀಪ್‌ ಪೋಷಕರಾಗಿ ನಟಿಸಿದ್ದು, ಅವರ ಮಾತುಗಳ ಮೂಲಕ ಕತೆ ಸಾಗುವುದು ಟ್ರೈಲರ್‌ ಮೂಲಕ ತಿಳಿದುಬರುತ್ತದೆ. ಶೋಭಿತಾ ಧುಲಿಪಾಲಾ ಚಿತ್ರದ ನಾಯಕಿ. ಜೂನ್‌ 3ರಂದು ಸಿನಿಮಾ ತೆರೆಕಾಣಲಿದೆ.

”ಸಂದೀಪ್ ಎಂತಹ ಯೋಧ ಎನ್ನುವುದು ಜನರಿಗೆ ಗೊತ್ತಿದೆ. ಅವರ ಶೈರ್ಯಕ್ಕೆ 26/11 ಘಟನೆಯೊಂದೇ ಪ್ರಮುಖ ಉದಾಹರಣೆಯಲ್ಲ. ಕಾರ್ಗಿಲ್‌ ಯುದ್ಧದಲ್ಲಿ ಕ್ಯಾಪ್ಟನ್ ಆಗಿ ಅವರು ಹೋರಾಡಿದ್ದರು. ಹೈದರಾಬಾದ್‌ನಲ್ಲಿ ಕಾರ್ಯ ನಿರ್ವಿಹಿಸಿದ್ದ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ತೆರಳಿದರು. ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್‌ನಲ್ಲಿ ಅವರು ತರಬೇತಿ ಅಧಿಕಾರಿಯಾಗಿದ್ದರು. ಅವರ ಬದುಕು ಕೂಡ ಆದರ್ಶಪ್ರಾಯವಾಗಿದೆ” ಎಂದು ನಟ ಅಡಿವಿ ಸೇಶ್ ಹೇಳುತ್ತಾರೆ. ಸಾಯಿ ಮಂಜ್ರೇಕರ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿರುವ ಸಿನಿಮಾ ಮಲಯಾಳಂ ಡಬ್ಬಿಂಗ್‌ ಅವತರಣಿಕೆಯಲ್ಲೂ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here