ಬರ್ತ್‌ಡೇ ವಿಶೇಷವೆಂದು ನಟಿ ಸಾಯಿ ಪಲ್ಲವಿ ತಮ್ಮ ‘ಗಾರ್ಗಿ’ ಬಹುಭಾಷಾ ಸಿನಿಮಾದ ಗ್ಲಿಮ್ಸಸ್‌ ವೀಡಿಯೋ ಹಂಚಿಕೊಂಡಿದ್ದಾರೆ. ಜುಲೈ 1ರಂದು ತೆರೆಕಾಣಲಿರುವ ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ರಾಣಾ ದಗ್ಗುಬಾಟಿ, ಪ್ರಿಯಾಮಣಿ, ನಂದಿತಾ ದಾಸ್‌ ಅಭಿನಯಿಸಿದ್ದಾರೆ.

ನಟಿ ಸಾಯಿ ಪಲ್ಲವಿ ಇಂದು 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇ ವಿಶೇಷವೆಂದು ತಮ್ಮ ‘ಗಾರ್ಗಿ’ ಸಿನಿಮಾದ ಚಿತ್ರೀಕರಣ ಸಂದರ್ಭದ ಗ್ಲಿಮ್ಸಸ್‌ ವೀಡಿಯೋ ಹಂಚಿಕೊಂಡಿದ್ದಾರೆ. ಈ ಫೂಟೇಜ್‌ನಲ್ಲಿ ಅವರ ಪಾತ್ರದ ಪರಿಚಯ ಸಿಗುತ್ತದೆ. ಗಟ್ಟಿಗಿತ್ತಿ ಯುವತಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದು, ಕಾನೂನು ಹೋರಾಟಕ್ಕೆ ಸಂಬಂಧಿಸಿದ ಕತೆ ಇದ್ದಂತಿದೆ. ಈ ಸಿನಿಮಾ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು ಮತ್ತು ತೆಲುಗು ಅವರಿಗೆ ಗೊತ್ತಿರುವ ಭಾಷೆ. ಕನ್ನಡ ಹೊಸತು. ಕನ್ನಡ ಕಲಿತು ಡಬ್‌ ಮಾಡುವ ವೀಡಿಯೋ ತುಣುಕು ಇಲ್ಲಿದೆ. “I waited months to talk about this film, And finally!!! my birthday is when the stubborn team decided to give in and release this Presenting to you, GARGI, @prgautham83 ’s brain child! (sic),” ಎನ್ನುವ ಸಂದೇಶದೊಂದಿಗೆ ಅವರು ಟ್ವಿಟರ್‌ನಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.

ಗೌತಮ್‌ ರಾಮಚಂದ್ರನ್‌ ಅವರು ‘ಗಾರ್ಗಿ’ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ನಿವಿನ್‌ ಪೌಲಿ ನಟನೆಯ ‘ರಿಚಿ’ (2017) ಚಿತ್ರದೊಂದಿಗೆ ಅವರು ಸ್ವತಂತ್ರ ನಿರ್ದೇಶಕರಾದವರು. ಇನ್ನು ಸಾಯಿ ಪಲ್ಲವಿ ತಮ್ಮ ‘ವಿರಾಟ ಪರ್ವಂ’ ತೆಲುಗು ಸಿನಿಮಾ ಬಿಡುಗಡೆ ಎದುರು ನೋಡುತ್ತಿದ್ದಾರೆ. ಉಡುಗುಲ ವೇಣು ನಿರ್ದೇಶನದ ಸಿನಿಮಾ ಕೋವಿಡ್‌ನಿಂದಾಗಿ ತಡವಾಗಿದೆ. ಜುಲೈ 1ರಂದು ತೆರೆಕಾಣಲಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಾಣಾ ದಗ್ಗುಬಾಟಿ, ಪ್ರಿಯಾಮಣಿ, ನಂದಿತಾ ದಾಸ್‌ ನಟಿಸಿದ್ದಾರೆ.

Previous articleಗಿಲ್ಟಿ ಮೈಂಡ್ಸ್: ವಾಸ್ತವಿಕ‌ ಕೋರ್ಟು ಕಲಾಪ, ರಂಜಿಸುವ ಕಥಾ ವಿಶೇಷ
Next articleಅಡವಿ ಸೇಶ್‌ ‘ಮೇಜರ್‌’ ಟ್ರೈಲರ್‌; ಸಂದೀಪ್‌ ಉನ್ನಿಕೃಷ್ಣನ್‌ ಬಯೋಪಿಕ್‌

LEAVE A REPLY

Connect with

Please enter your comment!
Please enter your name here