ಅಭಿಷೇಕ್‌ ಚುಬೆ ನಿರ್ದೇಶನದ ಡಾರ್ಕ್‌ ಕಾಮಿಡಿ ವೆಬ್‌ ಸರಣಿಯಲ್ಲಿ ಮನೋಜ್‌ ಬಾಜಪೈ ಮತ್ತು ಕೊಂಕಣ ಸೇನ್‌ ಶರ್ಮಾ ನಟಿಸುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿರುವ ಈ ಸರಣಿಯ BTS ವೀಡಿಯೋ ಫೂಟೇಜ್‌ ರಿಲೀಸ್‌ ಆಗಿದೆ.

ಅಮೇಜಾನ್‌ ಪ್ರೈಮ್‌ ವೀಡಿಯೋ ವೆಬ್‌ ಸರಣಿ ‘ದಿ ಫ್ಯಾಮಿಲಿ ಮ್ಯಾನ್‌’ ನಟ ಮನೋಜ್‌ ಬಾಜಪೈ ಅವರಿಗೆ ಹೆಸರು ತಂದುಕೊಟ್ಟಿತ್ತು. ಮತ್ತೊಂದೆಡೆ ನಟಿ ಕೊಂಕಣ ಸೇನ್‌ ಶರ್ಮಾ ಅವರು ನೆಟ್‌ಫ್ಲಿಕ್ಸ್‌ನ ‘ಅಜೀಬ್‌ ದಾಸ್ತಾನ್ಸ್‌’ ಸರಣಿಯಲ್ಲಿ ಮಿಂಚಿದ್ದರು. ನೆಟ್‌ಫ್ಲಿಕ್ಸ್‌ನಲ್ಲೇ ಸ್ಟ್ರೀಮ್‌ ಆಗಿದ್ದ ‘ಡಾಲಿ ಕಿಟ್ಟಿ ಔರ್‌ ವೋ ಚಮಕ್ತೇ ಸಿತಾರೆ’ ಸರಣಿಯಲ್ಲಿ ನಟಿ ಭೂಮಿ ಪಡ್ನೇಕರ್‌ ಜೊತೆ ಕೊಂಕಣ ನಟಿಸಿದ್ದರು. ನಿಖಿಲ್‌ ಅಡ್ವಾನಿ ನಿರ್ದೇಶನದ ‘ಮುಂಬೈ ಡೈರೀಸ್‌ 26/11’ ಸರಣಿಯೊಂದಿಗೆ ಡಿಜಿಟಲ್‌ ಡೆಬ್ಯೂ ಮಾಡಿದ್ದ ಕೊಂಕಣ OTTಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಮನೋಜ್‌ ಬಾಜಪೈ ಮತ್ತು ಕೊಂಕಣ ಜೋಡಿ ನೆಟ್‌ಫ್ಲಿಕ್ಸ್‌ನ ಡಾರ್ಕ್‌ ಕಾಮಿಡಿ ಸರಣಿಯಲ್ಲಿ ನಟಿಸಲಿದ್ದಾರೆ. ಅಭಿಷೇಕ್‌ ಚುಬೆ ನಿರ್ದೇಶನದ ಸರಣಿಯ BTS ವೀಡಿಯೋ ಬಿಡುಗಡೆಯಾಗಿದೆ.

ನಿರ್ದೇಶಕ ಅಭಿಷೇಕ್‌ ಚುಬೆ ನೈಜ ಘಟನೆ ಆಧರಿಸಿ ಡಾರ್ಕ್‌ ಕಾಮಿಡಿ ಸರಣಿಗೆ ಕತೆ ಹೆಣೆದಿದ್ದಾರೆ. ಇಲ್ಲಿ ನಟಿ ಕೊಂಕಣ ಅವರು ‘ಸ್ವಾತಿ ಶೆಟ್ಟಿ’ ಪಾತ್ರ ನಿರ್ವಹಿಸುತ್ತಿದ್ದಾರೆ. ಅಷ್ಟೇನೂ ಅಡುಗೆ ಗೊತ್ತಿಲ್ಲದ ಸ್ವಾತಿ ಶೆಟ್ಟಿಗೆ ರೆಸ್ಟೋರೆಂಟ್‌ ಮಾಲೀಕಳಾಗುವ ಕನಸಿದೆ. ಪತ್ನಿಯ ಕೆಲಸದ ಮೇಲೆ ನಂಬಿಕೆಯಿಲ್ಲದ ಪತಿ ಪ್ರಭಾಕರ್‌ (ಮನೋಜ್‌ ಬಾಜಪೈ) ಪತ್ನಿಗೆ ನೆರವಾಗಲು ಒಪ್ಪುವುದಿಲ್ಲ. ಈ ತಿಕ್ಕಾಟಗಳ ಮಧ್ಯೆ ನಡೆಯುವ ಘಟನಾವಳಿಗಳು ಸರಣಿಯ ವಸ್ತು. ತಮ್ಮ ಸರಣಿ ಕುರಿತಾಗಿ ಮಾತನಾಡುವ ನಿರ್ದೇಶಕ ಅಭಿಷೇಕ್‌ ಚುಬೆ, “ನೆಟ್‌ಫ್ಲಿಕ್ಸ್‌ಗೆ ಡಾರ್ಕ್‌ ಕಾಮಿಡಿ ಸರಣಿ ನಿರ್ದೇಶಿಸುತ್ತಿರುವುದು ಎಕ್ಸೈಟಿಂಗ್‌ ವಿಷಯ. ಹೊಸದೊಂದು ಕತೆ, ಅನುಭವಿ ಕಲಾವಿದರೊಂದಿಗೆ ಜಾಗತಿಕ ವೀಕ್ಷಕರನ್ನು ತಲುಪಲಿದ್ದೇವೆ” ಎನ್ನುತ್ತಾರೆ.

Previous articleಟೀಸರ್‌ | ಕಿರೀಟಿ ಚೊಚ್ಚಲ ಚಿತ್ರಕ್ಕೆ ತಾರಾಮೆರುಗು; ನಿರ್ದೇಶಕ ರಾಜಮೌಳಿ ಮೆಚ್ಚುಗೆ
Next articleಟ್ರೈಲರ್‌ | ಅರುಣೋದಯ ಸಿಂಗ್‌ ‘ಅಪಹರಣ್‌ 2’; Voot Select ನಲ್ಲಿ ಮಾರ್ಚ್‌ 18ರಿಂದ

LEAVE A REPLY

Connect with

Please enter your comment!
Please enter your name here