ಡಿಸ್ನೀ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿರುವ ‘ರುದ್ರ’ ಸರಣಿಯ ಶೂಟಿಂಗ್ ಶುರುವಾಗಿದೆ. ಬಾಲಿವುಡ್ ನಟ ಅಜಯ್ ದೇವಗನ್ ಈ ಸೀರೀಸ್‌ನೊಂದಿಗೆ ಡಿಜಿಟಲ್ ಡೆಬ್ಯೂ ಮಾಡುತ್ತಿದ್ದಾರೆ. ಇಶಾ ಡಿಯೋಲ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕ್ರೈಂ-ಡ್ರಾಮಾ ಸರಣಿಯಿದು.

ಈ ವರ್ಷದ ಆರಂಭದಲ್ಲಿ ನಟ ಅಜಯ್ ದೇವಗನ್‌ ಡಿಸ್ನೀ ಪ್ಲಸ್‌ ಹಾಟ್‌ಸ್ಟಾರ್‌ನ ‘ರುದ್ರ’ ಸರಣಿ ಮೂಲಕ ಡಿಜಿಟಲ್‌ ಜಗತ್ತಿಗೆ ಪ್ರವೇಶಿಸುವುದಾಗಿ ಹೇಳಿದ್ದರು. ಕೋವಿಡ್‌ನಿಂದಾಗಿ ವಿಳಂಬವಾಗಿದ್ದ ಚಿತ್ರೀಕರಣಕ್ಕೆ ಈಗ ಚಾಲನೆ ಸಿಕ್ಕಿದೆ. ಮುಂಬಯಿ ಬಳಿಯ ಎಲ್ಲೋರಾ ಸ್ಟುಡಿಯೋದಲ್ಲಿ ಈ ಸರಣಿಗಾಗಿ ಬೃಹತ್ ಸೆಟ್ ಹಾಕಲಾಗಿದ್ದು, ಒಂದು ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. ಇದೊಂದು ಕ್ರೈಂ – ಥ್ರಿಲ್ಲರ್ ಕಥಾನಕ. ಗೋಪ್ಯತೆ ಕಾಪಾಡಲು ಶೂಟಿಂಗ್‌ ಸೆಟ್‌ನಲ್ಲಿ ‘ನೋ ಫೋನ್‌’ ಪಾಲಿಸಿ ಇರುತ್ತದೆ ಎನ್ನಲಾಗಿದೆ. ಜನಪ್ರಿಯ ಬ್ರಿಟೀಷ್ ಸರಣಿ ‘ಲೂಥರ್‌’ ಭಾರತೀಯ ಅವತರಣಿಕೆ ‘ರುದ್ರ’. ಬಾಲಿವುಡ್ ನಟಿ ಇಶಾ ಡಿಯೋಲ್‌ ಸರಣಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 52 ವರ್ಷದ ಆಕ್ಷನ್ ಹೀರೋ ಅಜಯ್ ದೇವಗನ್‌ ಇಮೇಜಿಗೆ ಹೊಂದುವಂತಹ ಪಾತ್ರ ಇಲ್ಲಿದೆ. “ಸಾಕಷ್ಟು ಕುತೂಹಲ ಮತ್ತು ಅಚ್ಚರಿಗಳು ಸರಣಿಯಲ್ಲಿ ಇರಲಿವೆ. ನನ್ನ ಪಾತ್ರವನ್ನು ವಿಶೇಷವಾಗಿ ರೂಪಿಸಿದ್ದಾರೆ” ಎಂದು ನಟ ಅಜಯ್‌ ತಮ್ಮ ಹೊಸ ಪ್ರಾಜೆಕ್ಟ್‌ ಬಗ್ಗೆ ಉತ್ಸಾಹದಿಂದ ಮಾತನಾಡಿದ್ದಾರೆ. ಬಿಬಿಸಿ ಸ್ಟುಡಿಯೋಸ್ ಮತ್ತು ಅಪ್ಲೌಸ್‌ ಎಂಟರ್‌ಟೇನ್‌ಮೆಂಟ್ ಜೊತೆಗೂಡಿ ಸರಣಿ ನಿರ್ಮಿಸುತ್ತಿವೆ.

LEAVE A REPLY

Connect with

Please enter your comment!
Please enter your name here