ಅನನ್ಯ ಬ್ಯಾನರ್ಜಿ ಮತ್ತು ಗೌರವ್‌ ಚಾವ್ಲಾ ನಿರ್ದೇಶನದ ‘ಅಧೂರಾ’ ಹಾರರ್‌ ಹಿಂದಿ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಇಶ್ವಕ್‌ ಸಿಂಗ್‌, ಪೂಜನ್‌ ಛಾಬ್ರಾ, ರಸಿಕಾ ದುಗಾಲ್‌ ನಟನೆಯ ಸರಣಿ ಜುಲೈ 7ರಿಂದ ಅಮೇಜಾನ್‌ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮ್‌ ಆಗಲಿದೆ.

‘ಅಧೂರಾ’ ಹಾರರ್‌ ಹಿಂದಿ ಸರಣಿಯ ಟ್ರೈಲರ್‌ ಬಂದಿದೆ. ಊಟಿಯ ಪ್ರತಿಷ್ಠಿತ ಬೋರ್ಡಿಂಗ್‌ ಸ್ಕೂಲ್‌ನಲ್ಲಿ 2007 ಮತ್ತು 2022ರ ಎರಡು ಟೈಮ್‌ಲೈನ್‌ನಲ್ಲಿ ನಡೆಯುವ ಕತೆ. ಶಾಲೆಯಲ್ಲಿ ಓದುತ್ತಿದ್ದಾಗ ಅಧಿರಾಜ್‌ (ಇಶ್ವಕ್‌ ಸಿಂಗ್‌) ಮಾಡಿದ ತಪ್ಪುಗಳು ಮುಂದೆ ಹೇಗೆಲ್ಲಾ ಕಾಡುತ್ತವೆ? ಯಾರೆಲ್ಲಾ ಇದಕ್ಕೆ ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎನ್ನುವುದು ಸರಣಿಯ ಕಥಾವಸ್ತು. ಟ್ರೈಲರ್‌ನಲ್ಲಿ ಸಾಕಷ್ಟು ಭಯಪಡಿಸುವಂತಹ ದೃಶ್ಯಗಳಿದ್ದು ವಿಭಿನ್ನ ಕತೆಯ ಸುಳಿವು ಸಿಗುತ್ತದೆ. ಅನನ್ಯ ಬ್ಯಾನರ್ಜಿ ಮತ್ತು ಗೌರವ್‌ ಕೆ ಚಾವ್ಲಾ ನಿರ್ದೇಶನದ ಸರಣಿಯ ಪ್ರಮುಖ ಪಾತ್ರಗಳಲ್ಲಿ ಇಶ್ವಕ್‌ ಸಿಂಗ್‌, ರಸಿಕಾ ದಗಾಲ್‌, ಶ್ರೇಣಿಕ್‌ ಅರೋರಾ, ರಾಹುಲ್‌ ದೇವ್‌, ಪೂಜಾ ಛಾಬ್ರಾ, ಸಾಹಿಲ್‌ ಸಲಾತಿಯಾ ಇದ್ದಾರೆ. ಪಾತ್ರಗಳ ಸಂಖ್ಯೆಯೂ ದೊಡ್ಡದಿದೆ. ‘ತುಂಬಾ ಇಂಟೆನ್ಸ್‌ ಆದ ಪಾತ್ರ. ಸೂಪರ್‌ನ್ಯಾಚುರಲ್‌ ಮತ್ತು ಮನುಷ್ಯನ ಮನಸ್ಸಿನ ಕಾಂಪ್ಲೆಕ್ಸಿಟಿಗಳು ಕತೆಯಲ್ಲಿ ಬೆರೆತಿವೆ. ವೀಕ್ಷಕರನ್ನು ಸರಣಿ ಹಿಡಿದು ಕೂರಿಸಲಿದೆ’ ಎನ್ನುತ್ತಾರೆ ನಟ ಇಶ್ವಕ್‌ ಸಿಂಗ್‌. ‘ಅಧೂರಾ’ ಜುಲೈ 7ರಿಂದ Primeನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here