‘ರಿಚ್ಚಿ’ ಸಿನಿಮಾಗಾಗಿ ಬಾಲಿವುಡ್‌ನ ಕುನಾಲ್‌ ಗಾಂಜಾವಾಲ ಹಾಡಿದ್ದ ಸಾಂಗ್‌ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಜುಲೈ ಮೊದಲ ವಾರ ಅಂಕಿತ ಕುಂಡು ಹಾಡಿರುವ ಚಿತ್ರದ ಎರಡನೇ ವೀಡಿಯೋ ಸಾಂಗ್‌ ರಿಲೀಸ್‌ ಆಗಲಿದೆ. ಇದು ರಿಚ್ಚಿ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ಸಿನಿಮಾ.

ಬಹುದಿನಗಳ ನಂತರ ಬಾಲಿವುಡ್‌ನ ಖ್ಯಾತ ಗಾಯಕ ಕುನಾಲ್‌ ಗಾಂಜಾವಾಲಾ ಸ್ಯಾಂಡಲ್‌ವುಡ್‌ಗೆ ಬಂದಿದ್ದರು. ‘ರಿಚ್ಚಿ’ ಸಿನಿಮಾಗಾಗಿ ಅವರು ಹಾಡಿದ್ದ ಸಾಂಗ್‌ ಇತ್ತೀಚೆಗೆ ರಿಲೀಸ್‌ ಆಗಿತ್ತು. ಕುನಾಲ್‌ ಹಾಡಿರುವ ಈ ಚಿತ್ರದ ‘ಕಳೆದು ಹೋಗಿರುವೆ’ ಸಾಂಗ್‌ A2 musicನಲ್ಲಿ ಬಿಡುಗಡೆಯಾಗಿ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಈಗ ಚಿತ್ರದ ಎರಡನೇ ಹಾಡನ್ನು ಜುಲೈ ಮೊದಲ ವಾರ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಗಾಯಕಿ ಅಂಕಿತಾ ಕುಂಡು ಈ ಹಾಡಿಗೆ ದನಿಯಾಗಿದ್ದಾರೆ. ವಿನೋದ್ ಅವರು ಈ‌ ಹಾಡು ಬರೆದಿದ್ದು ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜಿಸಿದ್ದಾರೆ.

ರಿಚ್ಚಿ ಅವರು ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದಾರೆ. ಅವರೇ ಹೆಸರೇ ಚಿತ್ರದ ಶೀರ್ಷಿಕೆಯೂ ಆಗಿದೆ. ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ‌ಕಥಾಹಂದರದ ಸಿನಿಮಾ ಕನ್ನಡ ಮತ್ತು ಹಿಂದಿಯಲ್ಲಿ ತಯಾರಾಗಿದೆ. ಸೋನು ನಿಗಮ್, ಕುನಾಲ್ ಗಾಂಜಾವಾಲ ಹಾಗೂ ಅಂಕಿತ ಕುಂಡು ಹಾಡಿದ್ದಾರೆ. ಗೌಸ್ ಫಿರ್, ಆನಂದ್ ಹಾಗೂ ವಿನೋದ್ ಹಾಡುಗಳನ್ನು ಬರೆದಿದ್ದಾರೆ. ಹಿಂದಿ ಭಾಷೆಯಲ್ಲಿ ಈ ಚಿತ್ರದ ಹಾಡುಗಳನ್ನು ಜಾವೇದ್ ಅಲಿ, ಪಲಾಕ್ ಮುಚ್ಚಲ್ ಹಾಗೂ ಕುನಾಲ್ ಗಾಂಜಾವಾಲ ಹಾಡಿದ್ದಾರೆ. ‘ಕನ್ನಡತಿ’ ಸೀರಿಯಲ್‌ ಖ್ಯಾತಿಯ ರಮೋಲ ಚಿತ್ರದ ನಾಯಕಿ. ಅಜಿತ್ ಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿಪ್ರಕಾಶ್, ಧನಂಜಯ ಹಾಗೂ ಭೂಷಣ್ ನೃತ್ಯ ನಿರ್ದೇಶನ ಹಾಗೂ ವಿಕ್ರಮ್ ಮೋರ್, ಡಿಫರೆಂಟ್ ಡ್ಯಾನಿ ಸಾಹಸ ಚಿತ್ರಕ್ಕಿದೆ.

Previous article‘ಶಾನುಭೋಗರ ಮಗಳು’ | ಕಾದಂಬರಿ ಆಧಾರಿತ ಸ್ವಾತಂತ್ರ್ಯಪೂರ್ವದ ಕತೆ
Next article‘ಅಧೂರಾ’ ಟ್ರೈಲರ್‌ | ಜುಲೈ 7ರಿಂದ Amazon Primeನಲ್ಲಿ ಹಾರರ್‌ ಹಿಂದಿ ಸರಣಿ

LEAVE A REPLY

Connect with

Please enter your comment!
Please enter your name here