ಮುರುಗೇಶ್‌ ಕಣ್ಣಪ್ಪ ನಿರ್ದೇಶನದ ‘ಅಗ್ರಸೇನಾ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ತಂದೆ – ಮಗನ ಕತೆಯ ಜೊತೆಗೆ ಗ್ರಾಮ ಮತ್ತು ಸಿಟಿ ಬದುಕಿನ ವೈರುಧ್ಯಗಳನ್ನೂ ನಿರ್ದೇಶಕರು ಚಿತ್ರದಲ್ಲಿ ಹೇಳುತ್ತಿದ್ದಾರೆ. ಅಮರ್‌ ವಿರಾಜ್‌, ಅಗಸ್ತ್ಯ ಬೆಳಗೆರೆ, ರಚನಾ ದಶರಥ್‌, ಭಾರತಿ ಹೆಗಡೆ ಚಿತ್ರದ ಮುಖ್ಯಭೂಮಿಕೆಯ ಕಲಾವಿದರು.

‘ಈ ಸಿನಿಮಾದ ಕತೆ ಡಬಲ್ ಟ್ರ್ಯಾಕ್‌ನಲ್ಲಿ ಸಾಗುತ್ತದೆ. ತಂದೆ – ಮಗನ ಸಂಬಂಧದ ಕತೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೊಂದು ಟ್ರಾಕ್‌ನಲ್ಲಿ ಸಾಗುತ್ತದೆ’ ಎನ್ನುತ್ತಾರೆ ‘ಅಗ್ರಸೇನಾ’ ಚಿತ್ರದ ನಿರ್ದೇಶಕ ಮುರುಗೇಶ್‌ ಕಣ್ಣಪ್ಪ. ಇದೇ ತಿಂಗಳ 23ರಂದು ಸಿನಿಮಾ ತೆರೆಕಾಣಲಿದ್ದು, ಟ್ರೈಲರ್‌ ಬಿಡುಗಡೆಯಾಗಿದೆ. ನಟ ಧನಂಜಯ ಅವರು ಟ್ರೈಲರ್‌ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ನಿರ್ದೇಶಕ ತಮ್ಮೂರು ಅರಸೀಕೆರೆಯವರು ಎನ್ನುವ ಅಭಿಮಾನ ಧನಂಜಯ ಅವರಿಗೆ. ‘ಹೊಸಬರ ತಂಡಕ್ಕೆ ಮಾರೆಲ್‌ ಸಪೋರ್ಟ್‌ ತುಂಬಾ ಮುಖ್ಯ. ಹಾಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ’ ಎನ್ನುತ್ತಾರೆ ಧನಂಜಯ. ಹಿರಿಯ ನಟ ರಾಮಕೃಷ್ಣ ಅವರಿಗೆ ಇದು 200ನೇ ಸಿನಿಮಾ ಎನ್ನುವುದು ವಿಶೇಷ.

ನಿರ್ದೇಶಕ ಎ ಹರ್ಷ ಅವರ ಸಿನಿಮಾಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿರುವ ಮುರುಗೇಶ್‌ ಅವರಿಗೆ ಸ್ವತಂತ್ರ್ಯ ನಿರ್ದೇಶಕರಾಗಿ ಇದು ಮೊದಲ ಸಿನಿಮಾ. ಅಮರ್‌ ವಿರಾಜ್‌, ಅಗಸ್ತ್ಯ ಬೆಳಗೆರೆ, ರಚನಾ ದಶರಥ್‌ ಮತ್ತು ಭಾರತಿ ಹೆಗಡೆ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಹಿಂದೆ ಚಿತ್ರದ ಎರಡು ಹಾಡುಗಳನ್ನು ಗಾಯಕ ವಿಜಯ ಪ್ರಕಾಶ್‌ ಮತ್ತು ಶಿವರಾಜಕುಮಾರ್‌ ಬಿಡುಗಡೆಗೊಳಿಸಿದ್ದರು. ಜಯರಾಂ ರೆಡ್ಡಿ ನಿರ್ಮಾಣದ ಚಿತ್ರಕ್ಕೆ ಎಂ ಎಸ್‌ ತ್ಯಾಗರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಹಳ್ಳಿ ಮತ್ತು ಸಿಟಿಯ ಎರಡು ಕತೆಗಳನ್ನು ನಿರ್ದೇಶಕರು ಇಲ್ಲಿ ಹೇಳುತ್ತಿದ್ದಾರೆ. ‘ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ. ನಮ್ಮ ಚಿತ್ರದ ಕಂಟೆಂಟ್ ತುಂಬಾ ಸ್ಟ್ರಾಂಗ್ ಆಗಿದೆ. ನಾನು ಸಿಟಿಯ ಭಾಗದಲ್ಲಿ ಬರುತ್ತೇನೆ’ ಎನ್ನುತ್ತಾರೆ ಚಿತ್ರದ ಹೀರೋ ಅವರ್‌ ವಿರಾಜ್‌. ಆರ್‌ ಪಿ ರೆಡ್ಡಿ ಛಾಯಾಗ್ರಹಣ ಚಿತ್ರಕ್ಕಿದೆ. ಜೂನ್‌ 23ರಂದು ಸಿನಿಮಾ ತೆರೆಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here