ನಟಿ ಕಂಗನಾ ರನಾವತ್‌ ಅವರು ತಮ್ಮ ಮಣಿಕರ್ಣಿಕಾ ಫಿಲ್ಮ್ಸ್‌ ಬ್ಯಾನರ್‌ನಡಿ ನಿರ್ಮಿಸಿರುವ ಸಿನಿಮಾ ‘ಟಿಕು ವೆಡ್ಸ್‌ ಶೇರು’. ನವಾಜುದ್ದೀನ್‌ ಸಿದ್ದಿಕಿ ಮತ್ತು ಅವನೀತ್‌ ಕೌರ್‌ ನಟಿಸಿರುವ ಪ್ರಾಜೆಕ್ಟ್‌ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಸಾಯಿ ಕಬೀರ್‌ ಶ್ರೀವಾಸ್ತವ್‌ ನಿರ್ದೇಶನದ ಚಿತ್ರವಿದು.

ಕಾಮಿಡಿ – ಡ್ರಾಮಾ ಸಿನಿಮಾ ‘ಟಿಕು ವೆಡ್ಸ್‌ ಶೇರು’ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ನಟಿ ಕಂಗನಾ ರನಾವತ್‌ ತಮ್ಮ ಮಣಿಕರ್ಣಿಕಾ ಬ್ಯಾನರ್‌ನಲ್ಲಿ ನಿರ್ಮಿಸಿರುವ ಈ ಚಿತ್ರವನ್ನು ಸಾಯಿ ಕಬೀರ್‌ ಶ್ರೀವಾಸ್ತವ್‌ ನಿರ್ದೇಶಿಸಿದ್ದಾರೆ. ಕಂಗನಾ ಹೇಳುವಂತೆ, ಇದು ‘quirky story of love and passion’. ನವಾಜುದ್ದೀನ್‌ ಸಿದ್ದಿಕಿ ಮತ್ತು ಅವನೀತ್‌ ಕೌರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಅಮೇಜಾನ್‌ ಪ್ರೈಂನಲ್ಲಿ ನೇರವಾಗಿ ಜೂನ್‌ 23ರಿಂದ ಸ್ಟ್ರೀಮ್‌ ಆಗಲಿದೆ. ‘Tiku aur Sheru leke aa rahe hain apni atrangi love story, jald!’ ಎನ್ನುವ ಸಂದೇಶದೊಂದಿಗೆ ನಟ ನವಾಜುದ್ದೀನ್‌ ಸ್ಟ್ರೀಮಿಂಗ್‌ ಡೇಟ್‌ನೊಂದಿಗಿನ ಸಿನಿಮಾದ ಪೋಸ್ಟರ್‌ ಟ್ವೀಟ್‌ ಮಾಡಿದ್ದಾರೆ.

ಕಳೆದ ವರ್ಷವೇ ಪೂರ್ಣಗೊಂಡಿದ್ದ ಸಿನಿಮಾ ಥಿಯೇಟರ್‌ನಲ್ಲಿ ತೆರೆಕಾಣುತ್ತದೆ ಎನ್ನಲಾಗಿತ್ತು. ಬದಲಾದ ಲೆಕ್ಕಾಚಾರದಲ್ಲಿ ನಿರ್ಮಾಪಕಿ ಕಂಗನಾ ಚಿತ್ರವನ್ನು ನೇರವಾಗಿ OTTಗೆ ತರುತ್ತಿದ್ದಾರೆ. ‘ಇದು ನನ್ನ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಮೊದಲ ಸಿನಿಮಾ. ಚಿತ್ರನಿರ್ಮಾಣದ ಕಷ್ಟ- ಸುಖಗಳನ್ನು ಪ್ರೀತಿಯಿಂದಲೇ ನಿಭಾಯಿಸಿದ್ದೇನೆ. ನಿಜಕ್ಕೂ ಇದು ಸವಾಲು’ ಎಂದಿರುವ ಕಂಗನಾ, ‘Here’s my first production under my own banner… Hold tight for a hilarious joyride filled with love, dreams, and non-stop laughter as Tiku & Sheru chase their ultimate Bollywood dream!’ ಎಂದು ಟ್ವೀಟ್‌ ಮಾಡಿದ್ದಾರೆ.

Previous articleಬಹುಭಾಷಾ ನಟ ಕಝಾನ್‌ ಖಾನ್‌ ಹೃದಯಾಘಾತದಿಂದ ನಿಧನ
Next article‘ಅಗ್ರಸೇನಾ’ ಟ್ರೈಲರ್ | ತಂದೆ – ಮಗನ ಸೆಂಟಿಮೆಂಟ್‌ ಸಿನಿಮಾ ಜೂನ್‌ 23ಕ್ಕೆ ತೆರೆಗೆ

LEAVE A REPLY

Connect with

Please enter your comment!
Please enter your name here