ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್‌ ಸರ್ಜಾ ತಾರಾಪುತ್ರಿ ಐಶ್ವರ್ಯ ಅರ್ಜುನ್‌ ಮತ್ತು ನಟ ಉಮಾಪತಿ ಅವರ ನಿಶ್ಚಿತಾರ್ಥ ನೆರವೇರಿದೆ. ಇವರ ವಿವಾಹ ಮಹೋತ್ಸವ 2024ರ ಏಪ್ರಿಲ್‌ನಲ್ಲಿ ನೆರವೇರಲಿದೆ.

ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಅವರ ನಿಶ್ಚಿತಾರ್ಥ ನಟ ಉಮಾಪತಿ ಅವರೊಂದಿಗೆ ನೆರವೇರಿದೆ.‌ ಚೆನ್ನೈನಲ್ಲಿ ಅರ್ಜುನ್ ಸರ್ಜಾ ನಿರ್ಮಿಸಿರುವ ಆಂಜನೇಯನ ದೇವಸ್ಥಾನದಲ್ಲಿರುವ ಸಿತಾರಾಮರ ಸನ್ನಿಧಾನದಲ್ಲಿ ಐಶ್ವರ್ಯ ಹಾಗೂ ಉಮಾಪತಿ ಉಂಗುರ ಬದಲಾವಣೆ ಮಾಡಿಕೊಂಡರು. ಕುಟುಂಬದ ಸದಸ್ಯರು, ಅರ್ಜುನ್ ಸರ್ಜಾ ಆಪ್ತರಾದ ನಟ ವಿಶಾಲ್ ಸೇರಿದಂತೆ ಹಲವರುಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.

ಐಶ್ವರ್ಯ ಅವರು ಈಗಾಗಲೇ ನಟಿಯಾಗಿ ಜನಪ್ರಿಯರಾಗಿದ್ದು, ಉಮಾಪತಿ ಅವರು ಕೆಲವು ಚಿತ್ರಗಳಲ್ಲಿ ನಾಯಕನಟನಾಗಿ ನಟಿಸಿದ್ದಾರೆ. ಚಿತ್ರವೊಂದನ್ನು ನಿರ್ದೇಶನ ಕೂಡ ಮಾಡಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಉಮಾಪತಿ ಅವರ ತಂದೆ ತಂಬಿ ರಾಮಯ್ಯ ಹೆಸರಾಂತ ಹಾಸ್ಯನಟರಾಗಿ ಜನಮನ್ನಣೆ ಪಡೆದಿದ್ದಾರೆ. ಉಮಾಪತಿ ಅವರಿಗೆ ಮನೀಶ್ ಮಲ್ಹೋತ್ರ ಹಾಗೂ ಐಶ್ವರ್ಯ ಅವರಿಗೆ ಜಯಂತಿ ರೆಡ್ಡಿ ವಸ್ತ್ರವಿನ್ಯಾಸ ಮಾಡಿದ್ದರು. ಆಕರ್ಷಕವಾಗಿದ್ದ ರೂಬಿ ಹರಳಿನ ಬಂಗಾರದ ನಿಶ್ಚಿತಾರ್ಥದ ಉಂಗುರಗಳನ್ನು ಜೈಪುರದಿಂದ ತರಿಸಲಾಗಿತ್ತು. 2024ರ ಏಪ್ರಿಲ್ ತಿಂಗಳಲ್ಲಿ ಐಶ್ವರ್ಯ ಹಾಗೂ ಉಮಾಪತಿ ಅವರ ವಿವಾಹ ಮಹೋತ್ಸವ ನೆರವೇರಲಿದೆ ಎಂದು ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ.

LEAVE A REPLY

Connect with

Please enter your comment!
Please enter your name here