ತನಗೆ ಸಿಕ್ಕಿದ ಪಾಸ್‌ ಅನ್ನು ಕಿಸೆಯಲ್ಲಿಟ್ಟುಕೊಂಡು ಹೋಗುತ್ತಿದ್ದ ಪ್ರತಾಪ್ ಅವರನ್ನು ವಿನಯ್‌, ‘ಹೆಂಗಿರತ್ತೆ ನೋಡೋಣ ತೋರಿಸು’ ಎಂದು ಕೇಳಿದ್ದಾರೆ. ಆದರೆ ಪ್ರತಾಪ್ ಪಾಸ್‌ ಅನ್ನು ವಿನಯ್‌ ಕೈಗೆ ಕೊಟ್ಟಿಲ್ಲ. ಮಾತಿಗೆ ಮಾತು ಬೆಳೆದಿದೆ.

ಬಿಗ್‌ಬಾಸ್‌ ಮನೆಯ ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚನಿಂದ ಸ್ಫೂರ್ತಿ ಪಡೆದ ಪ್ರತಾಪ್‌ ಭರ್ಜರಿ ಫಾರ್ಮ್‌ನಲ್ಲಿದ್ದರೆ, ಕಾರ್ತಿಕ್‌ ಅಂತೂ ಬಲಪ್ರಯೋಗಕ್ಕೂ ಮುಂದಾಗಿದ್ದಾರೆ. ವಿನಯ್‌ ಹಿಂದಿನ ಟೋನ್‌ನಲ್ಲಿ ಹಾಕಿದ ಆವಾಜ್‌ಗೆ ಪ್ರತಾಪ್ ಕ್ಯಾರೇ ಅಂದಿಲ್ಲ. ಮೂರನೇ ವಾರ ಹಿಂದಿನ ವಾರಗಳಷ್ಟು ಕಾಮ್ ಆಗಿರುವುದಿಲ್ಲ ಎಂಬುದರ ಸೂಚನೆಯನ್ನು JioCinema ಬಿಡುಗಡೆ ಮಾಡಿರುವ ದಿನದ ಮೊದಲ ಪ್ರೊಮೋದಲ್ಲಿ ಢಾಳಾಗಿಯೇ ಕಾಣಿಸಿದೆ.

ಬೆಳಿಗ್ಗೆಯ ಸಿಹಿನಿದ್ದೆಯಲ್ಲಿದ್ದ ಸದಸ್ಯರಿಗೆ ಬಿಗ್‌ಬಾಸ್‌ ಧ್ವನಿ ಎಚ್ಚರಿಕೆಯ ಕರೆಗಂಟೆಯ ಹಾಗೆ ಮೊಳಗಿದೆ. ‘ಈ ವಾರ ಎಲ್ಲರಿಗೂ ನಾಮಿನೇಷನ್ ಮಾಡುವ ಅವಕಾಶ ಇರುವುದಿಲ್ಲ. ಬಲೂನ್‌ಗಳನ್ನು ಒಡೆದು ಅದರಲ್ಲಿರುವ ನಾಮಿನೇಷನ್ ಪಾಸ್‌ಗಳನ್ನು ಹುಡುಕಬೇಕು’ ಎಂದು ಬಿಗ್‌ಬಾಸ್ ಆದೇಶಿಸಿದ್ದಾರೆ. ತಕ್ಷಣವೇ ಮನೆಯ ಸದಸ್ಯರೆಲ್ಲರೂ ಬಲೂನ್‌ಗಳನ್ನು ತುಂಬಿರುವ ಜಾಗಕ್ಕೆ ಹೋಗಿ ಬಲೂನ್‌ಗಳನ್ನು ಒಡೆದೊಡೆದು ನೋಡಲು ಶುರುಮಾಡಿದ್ದಾರೆ. ಕೊನೆಗೂ ನಾಮಿನೇಷನ್ ಪಾಸ್ ಸಿಕ್ಕಿದ್ದು ಡ್ರೋಣ್ ಪ್ರತಾಪ್‌ಗೆ!

ತನಗೆ ಸಿಕ್ಕಿದ ಪಾಸ್‌ ಅನ್ನು ಕಿಸೆಯಲ್ಲಿಟ್ಟುಕೊಂಡು ಹೋಗುತ್ತಿದ್ದ ಪ್ರತಾಪ್ ಅವರನ್ನು ವಿನಯ್‌, ‘ಹೆಂಗಿರತ್ತೆ ನೋಡೋಣ ತೋರಿಸು’ ಎಂದು ಕೇಳಿದ್ದಾರೆ. ಆದರೆ ಪ್ರತಾಪ್ ಪಾಸ್‌ ಅನ್ನು ವಿನಯ್‌ ಕೈಗೆ ಕೊಟ್ಟಿಲ್ಲ. ಮಾತಿಗೆ ಮಾತು ಬೆಳೆದಿದೆ. ಮುಂದಿನ ದೃಶ್ಯದಲ್ಲಿ ಕಾರ್ತಿಕ್, ಸ್ನೇಹಿತ್ ಎಲ್ಲರೂ ಪ್ರತಾಪ್‌ ಮೈಮೇಲೆ ಮುಗಿಬಿದ್ದುಅವರಿಂದ ಪಾಸ್ ಕಸಿಯಲು ಯತ್ನಿಸುತ್ತಿರುವ ದೃಶ್ಯವಿದೆ. ಎಲ್ಲರ ನಡುವೆ ಸಿಲುಕಿ ಒದ್ದಾಡುತ್ತಿರುವ ಪ್ರತಾಪ್‌ ಕಿರುಚಾಡುತ್ತಿದ್ದಾರೆ. ಈ ಡ್ರಾಮಾ ಕ್ಯಾಮೆರಾದಲ್ಲಿ ಸೆರೆಯಾಗಿದೆ.

LEAVE A REPLY

Connect with

Please enter your comment!
Please enter your name here