ಅಜಯ್‌ ದೇವಗನ್‌, ಆರ್‌ ಮಾಧವನ್‌, ಜ್ಯೋತಿಕಾ ನಟನೆಯ ಹಿಂದಿ ಸಿನಿಮಾ ಸೆಟ್ಟೇರಿದೆ. ಸೂಪರ್‌ ನ್ಯಾಚುರಲ್‌ ಥ್ರಿಲ್ಲರ್‌ ಜಾನರ್‌ ಸಿನಿಮಾವನ್ನು ವಿಕಾಶ್‌ ಬೆಹ್ಲ್‌ ನಿರ್ದೇಶಿಸುತ್ತಿದ್ದಾರೆ. ಬಿಡುಗಡೆ ದಿನಾಂಕವೂ ಘೋಷಣೆಯಾಗಿದ್ದು, ಸಿನಿಮಾ ಮುಂದಿನ ವರ್ಷ ಮಾರ್ಚ್‌ 8ರಂದು ತೆರೆಕಾಣಲಿದೆ.

ಅಜಯ್ ದೇವಗನ್ ಮತ್ತು ಆರ್ ಮಾಧವನ್ ಅಭಿನಯಿಸಲಿರುವ ಸೂಪರ್‌ ನ್ಯಾಚುರಲ್‌ ಥ್ರಿಲ್ಲರ್‌ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ವಿಕಾಸ್‌ ಬೆಹ್ಲ್‌ ನಿರ್ದೇಶನದ ಚಿತ್ರ ಮುಂದಿನ ವರ್ಷ ಮಾರ್ಚ್‌ 8ರಂದು ತೆರೆಕಾಣಲಿದೆ. ಚಿತ್ರದಲ್ಲಿ ಜ್ಯೋತಿಕಾ ಅವರಿಗೆ ಪ್ರಮುಖ ಪಾತ್ರವಿದೆ. 25 ವರ್ಷಗಳ ನಂತರ ಈ ಸಿನಿಮಾದ ಮೂಲಕ ಅವರು ಬಾಲಿವುಡ್‌ಗೆ ಮರಳುತ್ತಿದ್ದಾರೆ ಎನ್ನುವುದು ವಿಶೇಷ. ಇವರು ಈ ಹಿಂದೆ ಪ್ರಿಯದರ್ಶನ್ ನಿರ್ದೇಶನದ ‘ಡೋಲಿ ಸಜಾ ಕೆ ರಖ್‌ನಾ’ (1997) ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾವು ಅವರ ಬಾಲಿವುಡ್‌ನ ಮೊದಲ ಚಿತ್ರವೂ ಹೌದು.

‘ಛೆಲ್ಲೋ ದಿವಸ್’, ‘ತಂಬುರೋ’, ‘ಚುಟ್ಟಿ ಜಷೆ ಚಕ್ಕಾ’ ಮತ್ತು ‘ಬೌ ನಾ ವಿಚಾರ್’ನಂತಹ ಗುಜರಾತಿ ಚಿತ್ರಗಳಲ್ಲಿ ಕೆಲಸ ಮಾಡಿದ ನಟಿ ಜಾಂಕಿ ಬೋಡಿವಾಲಾ ಅವರು ಈ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸುತ್ತಿದ್ದಾರೆ. Jio Studios, Ajay Devgan Films ಮತ್ತು Panorama Studios International ಬ್ಯಾನರ್‌ ಅಡಿಯಲ್ಲಿ ಅಜಯ್‌ ದೇವಗನ್, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಅಜಯ್‌ ದೇವಗನ್‌ ಅವರು ಅಭಿಷೇಕ್ ಕಪೂರ್ ಮತ್ತು ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ನಟನೆಯ ಇನ್ನೂ ಹೆಸರಿಡದ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಫೆಬ್ರವರಿ 9, 2024ರಂದು ತೆರೆಕಾಣಲಿದೆ. ಹಾಗೂ ರೋಹಿತ್‌ ಶೆಟ್ಟಿ ಅವರ ‘ಸಿಂಗಂ ಎಗೇನ್‌’ ಚಿತ್ರದಲ್ಲಿ ನಟಿಸಲಿದ್ದಾರೆ.

https://www.instagram.com/p/Cw4QFMhJbfe/?utm_source=ig_web_copy_link

LEAVE A REPLY

Connect with

Please enter your comment!
Please enter your name here