ಹೆಚ್‌ ವಿನೋತ್‌ ನಿರ್ದೇಶನದಲ್ಲಿ ಕಮಲ ಹಾಸನ್‌ ನಟಿಸಲಿರುವ ತಮಿಳು ಸಿನಿಮಾ ‘KH 233’ ಘೋಷಣೆಯಾಗಿದೆ. ಕಮಲ್‌ ಅವರ ರಾಜ್‌ ಕಮಲ್‌ ಫೀಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಲಿದೆ.

ಕಮಲ ಹಾಸನ್‌ ನಟನೆಯ ‘KH 233’ ನೂತನ ತಮಿಳು ಸಿನಿಮಾ ಘೋಷಣೆಯಾಗಿದೆ. ಹೆಚ್‌ ವಿನೋತ್‌ ನಿರ್ದೇಶನದಲ್ಲಿ ತಯಾರಾಗಲಿರುವ ಚಿತ್ರವನ್ನು ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ನಿರ್ಮಿಸಲಿದೆ. ಅಜಿತ್ ಅವರಿಗೆ ಸತತ ಮೂರು ಸಿನಿಮಾ ನಿರ್ದೇಶಿಸಿರುವ ವಿನೋತ್‌ ಈಗ ಕಮಲ್‌ ಚಿತ್ರದ ಪ್ರೀ ಪ್ರೊಡಕ್ಷನ್‌ನಲ್ಲಿದ್ದಾರೆ. ಚಿತ್ರಕ್ಕಾಗಿ ಕಮಲ್‌ ಹಾಸನ್‌ ಅವರು ರೈಫೆಲ್‌ ತರಬೇತಿ ನಡೆಸುತ್ತಿರುವ ವೀಡಿಯೋವೊಂದನ್ನು Raaj Kamal Films International ನಿರ್ಮಾಣ ಸಂಸ್ಥೆ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ‘Guts and Gun. Rise to Rule’ ಎಂಬ ಬರಹವನ್ನು ಆ ವಿಡಿಯೋದ ಕೊನೆಯಲ್ಲಿ ಕಾಣಬಹುದು.

ಇದು RKFI ನಿರ್ಮಾಣದ 52ನೇ ಚಿತ್ರ. ಇನ್ನೂ ಹೆಸರಿಡದ ಈ ಹೊಸ ಯೋಜನೆಯ ಪಾತ್ರವರ್ಗವನ್ನು ಸದ್ಯದಲ್ಲೇ ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಕಮಲ್ ಈಗಾಗಲೇ ‘KH 234’ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದು ವರ್ಷಗಳ ನಂತರ ಮಣಿರತ್ನಂ ಮತ್ತು AR ರೆಹಮಾನ್ ಅವರೊಂದಿಗಿನ ಸಹಯೋಗವಾಗಿದೆ. ಈ ಕಾಂಬಿನೇಶನ್‌ನಲ್ಲಿ ಕಮಲ್‌ ಈ ಹಿಂದೆ ‘ನಾಯಕನ್‌’ ಚಿತ್ರದಲ್ಲಿ ಮಣಿರತ್ನಂ ಅವರೊಂದಿಗೆ, ಮತ್ತು ‘ತೇನಾಲಿ’
ಸಿನಿಮಾದಲ್ಲಿ A R ರೆಹಮಾನ್‌ ಅವರೊಂದಿಗೆ ಕೆಲಸ ಮಾಡಿದ್ದಾರೆ.

Previous article‘ಮಿಷನ್‌ ರಾಣಿಗಂಜ್‌’ ಟೀಸರ್‌ | ಅಕ್ಷಯ್‌ ಕುಮಾರ್‌ ಹಿಂದಿ ಸಿನಿಮಾ ಅಕ್ಟೋಬರ್‌ 6ಕ್ಕೆ
Next articleಅಜಯ್‌ ದೇವಗನ್‌ – ಮಾಧವನ್‌ ಹಿಂದಿ ಸಿನಿಮಾ | ಪ್ರಮುಖ ಪಾತ್ರದಲ್ಲಿ ಜ್ಯೋತಿಕಾ

LEAVE A REPLY

Connect with

Please enter your comment!
Please enter your name here