‘ಜವಾನ್‌’ ಹಿಂದಿ ಸಿನಿಮಾ ದಾಖಲೆಯ ವಹಿವಾಟು ನಡೆಸಿದೆ. ಬಿಡುಗಡೆಯಾದ ಎರಡನೇ ದಿನಕ್ಕೆ ಚಿತ್ರದ ಜಾಗತಿಕ ವಹಿವಾಟು 200 ಕೋಟಿ ರೂಪಾಯಿ ಎನ್ನುವುದು ಒಂದು ದಾಖಲೆ. ಭಾರತದಲ್ಲಿ ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್‌ (53 ಕೊಟಿ ರೂ.) ಮಾಡಿದ ಚಿತ್ರಗಳ ಸಾಲಿನಲ್ಲಿ ‘ಜವಾನ್‌’ ಮೊದಲನೇ ಸ್ಥಾನದಲ್ಲಿದೆ.

ಶಾರುಖ್ ಖಾನ್‌ ‘ಜವಾನ್‌’ ಹಿಂದಿ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಈ ಹಿಂದಿನ ದಾಖಲೆಗಳನ್ನು ಮುರಿದಿದೆ. ಎರಡನೇ ದಿನಕ್ಕೆ ಜಾಗತಿಕವಾಗಿ 200 ಕೋಟಿ ವಹಿವಾಟು ನಡೆಸಿದೆ. ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಓಪನಿಂಗ್ ಇದು. ಅಟ್ಲೀ ನಿರ್ದೇಶನದ ಈ ಸಿನಿಮಾ ತನ್ನ ನಿವ್ವಳ ದೇಶೀಯ ಸಂಗ್ರಹದ ಮೂಲಕ ಮತ್ತೊಂದು ಬೃಹತ್ ಮೊತ್ತವನ್ನು ದಾಖಲೆಗೆ ಸೇರಿಸಿದೆ. Industry Tracker Sacnilk ಪ್ರಕಾರ ಚಿತ್ರವು ಭಾರತದಲ್ಲಿ ರೂ 53 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಚಿತ್ರಗಳ ಸಾಲಿನಲ್ಲಿ ‘ಜವಾನ್‌’ ಮೊದಲನೇ ಸ್ಥಾನದಲ್ಲಿದೆ.

ಈ ವರ್ಷದ ಅರಂಭದಲ್ಲಿ ತೆರೆ ಕಂಡಿದ್ದ ‘ಪಠಾಣ್‌’ 50 ಕೋಟಿ ಗಳಿಸಿತ್ತು. ಅದು ಇದುವರೆಗಿನ ಮೊದಲ ದಿನದ ಅತೀ ಹೆಚ್ಚು ಗಳಿಕೆ. ಇದೀಗ ತಮ್ಮ ದಾಖಲೆಯನ್ನು ತಾವೇ ಬ್ರೇಕ್‌ ಮಾಡಿದ್ದಾರೆ SRK. ಚಿತ್ರದಲ್ಲಿ ವಿಜಯ್‌ ಸೇತುಪತಿ, ನಯನತಾರಾ, ದೀಪಿಕಾ ಪಡುಕೋಣೆ, ಸಂಜಯ್‌ ದತ್‌, ಪ್ರಿಯಾಮಣಿ, ಯೋಗಿ ಬಾಬು, ಸಾನ್ಯಾ ಮಲ್ಹೋತ್ರಾ, ಸುನಿಲ್‌ ಗ್ರೋವರ್‌, ರಿದ್ಧಿ ಡೋಗ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. Red Chillies Entertainment ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ನಿ‌ರ್ಮಿಸಿದ್ದು, ಅನಿರುದ್ದ್‌ ರವಿಚಂದರ್‌ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here