ಮ್ಯೂಸಿಕ್‌ ವಿಡಿಯೋ ಚಿತ್ರಿಸುವ ವೇಳೆ ಅಮೆರಿಕದ ಪಾಪ್‌ ಗಾಯಕಿ ಮಿಟಾಗೆ ಹಾವು ಕಚ್ಚಿತ್ತು. ಗಾಯಕಿ ಮಿಟಾ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಿದ್ದಾರೆ.

ಚಿತ್ರೀಕರಣದ ವೇಳೆ ಆಕಸ್ಮಿಕಗಳು ನಡೆಯುತ್ತಿರುತ್ತವೆ. ಬಹಳಷ್ಟು ಬಾರಿ ಇವು ಬೆಳಕಿಗೆ ಬರುವುದಿಲ್ಲ. ಅಮೆರಿಕ ಗಾಯಕಿ ತಮ್ಮ ಮ್ಯೂಸಿಕ್‌ ಆಲ್ಬಂ ಶೂಟಿಂಗ್‌ ಸಂದರ್ಭದ ಹಾವು ಕಡಿತದ ವಿಡಿಯೋವನ್ನು ತಡವಾಗಿ ಶೇರ್‌ ಮಾಡಿದ್ದಾರೆ. ಅವರ ‘ರಾಕ್‌ ನೇಷನ್‌’ ಮ್ಯೂಸಿಕ್‌ ವಿಡಿಯೋ ಚಿತ್ರಿಸಲಾಗುತ್ತಿತ್ತು. ಬ್ಲ್ಯಾಕ್‌ ಲೇಸ್‌ ತೊಟ್ಟ ಗಾಯಕಿ ಕಾರ್ಪೆಟ್‌ ಮೇಲೆ ಮಲಗಿದ್ದರು. ಅವರ ಮೈಮೇಲೆ ಹಾವುಗಳನ್ನು ಬಿಟ್ಟು ಚಿತ್ರಿಸುವುದು ಕಾನ್ಸೆಪ್ಟ್‌. ಈ ಸಂದರ್ಭದಲ್ಲಿ ಹಾವು ಆಕೆಯ ಗಲ್ಲಕ್ಕೆ ಕಚ್ಚಿದೆ. ಕೂಡಲೇ ಅವರು ಕಿರುಚುತ್ತಾ ಹಾವನ್ನು ದೂರ ತಳ್ಳಿದ್ದಾರೆ. ಆದರೆ ಈ ಹಾವಿನ ಕಡಿತದಿಂದ ಅವರಿಗೇನೂ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಈ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದು, “ಮತ್ತೊಮ್ಮೆ ಹೀಗಾಗಬಾರದು” ಎಂದು ಬರೆದಿದ್ದಾರೆ. ಈ ವೀಡಿಯೋ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆಗೊಳಗಾಗಿದೆ.

Previous article‘ಏಜೆಂಟ್‌’ ಅಖಿಲ್‌ ಅಕ್ಕಿನೇನಿ ಮೇಕ್‌ಓವರ್‌; ಇನ್‌ಸ್ಟಾದಲ್ಲಿ ಫೋಟೊ ಶೇರ್‌ ಮಾಡಿದ ನಟ
Next articleಟೀಸರ್‌ | ಮಹೇಶ್‌ ಭಟ್‌ ‘ರಂಜಿ‌ಷ್‌ ಹಿ ಸಹೀ’; Voot Select ವೆಬ್‌ ಸರಣಿ

LEAVE A REPLY

Connect with

Please enter your comment!
Please enter your name here