ಸೂರ್ಯ ಅಭಿನಯದ ಯಶಸ್ವೀ ತಮಿಳು ಸಿನಿಮಾ ‘ಸೂರರೈ ಪೋಟ್ರು’ ಹಿಂದಿ ರೀಮೇಕ್‌ನಲ್ಲಿ ಅಕ್ಷಯ್‌ ಕುಮಾರ್‌ ನಟಿಸುವುದು ಖಾತ್ರಿಯಾಗಿದೆ. ಮೂಲ ತಮಿಳು ಚಿತ್ರ ನಿರ್ದೇಶಿಸಿದ್ದ ಸುಧಾ ಕೊಂಗರ ಅವರೇ ಹಿಂದಿ ಚಿತ್ರದ ಸಾರಥ್ಯ ವಹಿಸಲಿದ್ದಾರೆ.

ಏರ್‌ ಡೆಕ್ಕನ್‌ ಸ್ಥಾಪಿಸಿದ ಕ್ಯಾಪ್ಟನ್‌ ಜಿ.ಆರ್‌.ಗೋಪಿನಾಥ್‌ ಅವರ ಬದುಕನ್ನು ಆಧರಿಸಿ ತಯಾರಾಗಿದ್ದ ‘ಸೂರರೈ ಪೋಟ್ರು’ ತಮಿಳು ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸುಧಾ ಕೊಂಗರ ನಿರ್ದೇಶನದಲ್ಲಿ ಸೂರ್ಯ ನಟಿಸಿದ್ದ ಸಿನಿಮಾ ಥಿಯೇಟರ್‌ನಲ್ಲಿ ಮಾತ್ರವಲ್ಲದೆ ಓಟಿಟಿಯಲ್ಲೂ ದೊಡ್ಡ ವೀಕ್ಷಕ ಬಳಗವನ್ನು ತಲಪಿತ್ತು. ಈ ಸ್ಫೂರ್ತಿದಾಯಕ ಕತೆ ಹಿಂದಿಯಲ್ಲಿ ತಯಾರಾಗಲಿದೆ ಎಂದು ಘೋಷಿಸಿ ಅದಾಗಲೇ ವರ್ಷವಾಗಿತ್ತು. ಹಿಂದಿ ಅವತರಣಿಕೆಗೆ ಅಜಯ್‌ ದೇವಗನ್‌, ಹೃತಿಕ್‌ ರೋಷನ್‌, ಜಾನ್‌ ಅಬ್ರಹಾಂ, ಅಕ್ಷಯ್‌ ಕುಮಾರ್‌ ಹೆಸರುಗಳು ಕೇಳಿಬಂದಿದ್ದವು. ಇದೀಗ ಹೀರೋ ಆಯ್ಕೆ ಅಂತಿಮವಾಗಿದ್ದು, ಅಕ್ಷಯ್‌ ಕುಮಾರ್‌ ನಟಿಸುವುದು ಖಾತ್ರಿಯಾಗಿದೆ. ಮೂಲ ತಮಿಳು ಸಿನಿಮಾ ನಿರ್ದೇಶಿಸಿದ್ದ ಸುಧಾ ಕೊಂಗರ ಅವರೇ ಹಿಂದಿ ಸಿನಿಮಾದ ಸಾರಥ್ಯ ವಹಿಸಲಿದ್ದಾರೆ. ಸದ್ಯ ಅಕ್ಷಯ್‌ ‘ಸೆಲ್ಫೀ’ ಹಿಂದಿ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಲಂಡನ್‌ನಲ್ಲಿ ಚಿತ್ರಿಸಲಿರುವ ಥ್ರಿಲ್ಲರ್‌ ಸಿನಿಮಾ, ಅಲಿ ಅಬ್ಬಾಸ್‌ ಜಾಫರ್‌ ನಿರ್ದೇಶನದ ಆಕ್ಷನ್‌ – ಕಾಮಿಡಿ, ‘ಗೋರ್ಖಾ’ ಚಿತ್ರಗಳ ನಂತರ ‘ಸೂರರೈ ಪೋಟ್ರು’ ಹಿಂದಿ ರೀಮೇಕ್‌ಗೆ ಬಣ್ಣ ಹಚ್ಚಲಿದ್ದಾರೆ.

Previous articleಟ್ರೈಲರ್‌ | ವೆಬ್‌ ಸರಣಿಯಲ್ಲಿ ಅಜಯ್‌ ದೇವಗನ್‌; ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ ‘ರುದ್ರ’
Next articleಪ್ರೇಕ್ಷಕರ ಭಿನ್ನ ಗ್ರಹಿಕೆಗೆ ನಿಲುಕುವ ವಿಶಿಷ್ಟ ಸೈಕಾಲಾಜಿಕಲ್‌ ಹಾರರ್‌ ‘ಭೂತಕಾಲಂ’

LEAVE A REPLY

Connect with

Please enter your comment!
Please enter your name here