ಕರಣ್‌ ಜೋಹರ್‌ ನಿರ್ಮಾಣದಲ್ಲಿ ಅಕ್ಷಯ್‌ ಕುಮಾರ್‌ ಮತ್ತು ಇಮ್ರಾನ್‌ ಹಶ್ಮಿ ನಟನೆಯ ‘ಸೆಲ್ಫಿʼ ಹಿಂದಿ ಸಿನಿಮಾ ಸೆಟ್ಟೇರಿದೆ. ಇದು ಯಶಸ್ವೀ ಮಲಯಾಳಂ ಸಿನಿಮಾ ‘ಡ್ರೈವಿಂಗ್‌ ಲೈಸೆನ್ಸ್‌’ ರಿಮೇಕ್‌. ಅಕ್ಷಯ್‌, ಇಮ್ರಾನ್‌, ಕರಣ್‌ ಜೋಹರ್‌ ಸೊಷಿಯಲ್‌ ಮೀಡಿಯಾದಲ್ಲಿ ಚಿತ್ರದ ಟೀಸರ್‌ ಹಂಚಿಕೊಂಡಿದ್ದಾರೆ.

ಪೃಥ್ವಿರಾಜ್‌ ಸುಕುಮಾರನ್‌ ಮತ್ತು ಸೂರಜ್‌ ವೆಂಜರಮೂಡು ನಟನೆಯ ‘ಡ್ರೈವಿಂಗ್‌ ಲೈಸೆನ್ಸ್‌’ ಮಲಯಾಳಂ ಸಿನಿಮಾ ಹಿಂದಿಗೆ ರೀಮೇಕಾಗುತ್ತಿದೆ. ಕರಣ್‌ ಜೋಹರ್‌ ನಿರ್ಮಾಣದ ಚಿತ್ರವನ್ನು ‘ಜುಗ್‌ ಜುಗ್‌ ಜೀಯೊ’ ಸಿನಿಮಾ ಖ್ಯಾತಿಯ ರಾಜ್‌ ಮೆಹ್ತಾ ನಿರ್ದೇಶಿಸಲಿದ್ಧಾರೆ. ಹಿಂದಿ ಅವತರಣಿಕೆಯಲ್ಲಿ ಅಕ್ಷಯ್‌ ಕುಮಾರ್‌ ಮತ್ತು ಇಮ್ರಾನ್‌ ಹಶ್ಮಿ ಪಾತ್ರ ನಿರ್ವಹಿಸುತ್ತಿದ್ದು, ಸೆಲ್ಫೀ ಫೋಟೊ ಮತ್ತು ಟೀಸರ್‌ನೊಂದಿಗೆ ಅವರು ಸಿನಿಮಾ ಕುರಿತ ಮಾಹಿತಿ ಹಂಚಿಕೊಂಡಿದ್ಧಾರೆ. ಹಿನ್ನೆಲೆಯಲ್ಲಿ ಪರ್ವತಗಳಿರುವ ವಿಶಾಲ ಪ್ರದೇಶದಲ್ಲಿ ಅಕ್ಷಯ್‌ ಮತ್ತು ಹಶ್ಮಿ ಸೆಲ್ಫಿಗೆ ಪೋಸು ಕೊಡುವ ಫೋಟೊ ಇದು. “Found myself the perfect #Selfiee partner! Hey @karanjohar, have we slayed this selfie game or what?😉 @therealemraan” ಎನ್ನುವ ಸಂದೇಶದೊಂದಿಗೆ ಅಕ್ಷಯ್‌ ಫೋಟೊ ಹಂಚಿಕೊಂಡಿದ್ದಾರೆ.

‘ಸೆಲ್ಫಿ’ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು ಇದೇ ವರ್ಷ ಸಿನಿಮಾ ತೆರೆಗೆ ಬರಲಿದೆ. ಇನ್ನು ನಟ ಅಕ್ಷಯ್‌ ಅಭಿನಯದ ‘ಅತ್ರಂಗಿ ರೇ’ ಮೊನ್ನೆ ನೇರವಾಗಿ OTTಗೆ ಬಿಡುಗಡೆಯಾಗಿತ್ತು. ಆನಂದ್‌ ರಾಯ್‌ ನಿರ್ದೇಶನದ ಚಿತ್ರದ ಇತರೆ ಪಾತ್ರಗಳಲ್ಲಿ ಧನುಷ್‌ ಮತ್ತು ಸಾರಾ ಅಲಿ ಖಾನ್‌ ನಟಿಸಿದ್ದಾರೆ. ಅಕ್ಷಯ್‌ರ ‘ಬಚ್ಚನ್‌ ಪಾಂಡೆ’, ‘ರಾಮ್‌ ಸೇತು’, ‘ರಕ್ಷಾ ಬಂದನ್‌’ ಚಿತ್ರೀಕರಣದಲ್ಲಿವೆ. ಸದ್ಯದಲ್ಲೇ ಅವರ ‘ಪೃಥ್ವಿರಾಜ್‌’ ತೆರೆಗೆ ಬರಲಿದೆ. ಅಮಿತಾಭ್‌ ಬಚ್ಚನ್‌ ಜೊತೆಗೆ ‘ಚೆಹ್ರೆʼ ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಇಮ್ರಾನ್‌ ಹಶ್ಮಿ ಸದ್ಯ ‘ಟೈಗರ್‌ 3’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here