ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ ಮತ್ತು ಪೂಜಾ ಹೆಗ್ಡೆ ನಟಿಸಿದ್ದ ‘ಅಲಾ ವೈಕುಂಠಪುರಮುಲು’ ತೆರೆಕಂಡು ಇಂದಿಗೆ ಎರಡು ವರ್ಷ. ನಟ ಅಲ್ಲು ಅರ್ಜುನ್‌ ತಮ್ಮ ಸೂಪರ್‌ಹಿಟ್‌ ಸಿನಿಮಾ ನೆನಪಿಸಿಕೊಂಡಿದ್ದರೆ, ನಟಿ ಪೂಜಾ ಹೆಗ್ಡೆ ಬಿಹೈಂಡ್‌ ದಿ ಸೀನ್ಸ್‌ ವೀಡಿಯೋ ಹಂಚಿಕೊಂಡಿದ್ದಾರೆ.

‘ಅಲಾ ವೈಕುಂಠಪುರಮುಲು’ 2020, ಜನವರಿ 12ರಂದು ಇದೇ ದಿನ ತೆರೆಕಂಡಿತ್ತು. ದೊಡ್ಡ ಯಶಸ್ಸು ಕಂಡಿದ್ದ ಸಿನಿಮಾ ಆ ವರ್ಷದಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಗೆ ಸೇರಿಕೊಂಡಿತ್ತು. ಇಂದು ಎರಡನೇ ವರ್ಷಾಚರಣೆ ಸಂದರ್ಭದಲ್ಲಿ ಚಿತ್ರತಂಡದ ಕಲಾವಿದರು ಹಾಗೂ ತಂತ್ರಜ್ಞರು ಸಿನಿಮಾದ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಚಿತ್ರಕ್ಕೆ ದುಡಿದ ಎಲ್ಲರನ್ನೂ ಸ್ಮರಿಸಿ ಟ್ವೀಟ್‌ ಮಾಡಿರುವ ಹೀರೋ ಅಲ್ಲು ಅರ್ಜುನ್‌, “ಇದೊಂದು ಸಿಹಿ ನೆನಪು. #AVPLಗೆ ಎರಡು ವರ್ಷ. ಇದೊಂದು ಸುಂದರ ಜರ್ನೀ. ಇದನ್ನೊಂದು ಸ್ಪೆಷಲ್‌ ಅನುಭವನ್ನಾಗಿಸಿದ ನಿರ್ದೇಶಕ ತ್ರಿವಿಕ್ರಮ್‌ ಮತ್ತು ದಶಕದ ಮ್ಯೂಸಿಕ್‌ ಆಲ್ಬಂ ಖ್ಯಾತಿಗೆ ಕಾರಣರಾದ ಸಿನಿಮಾದ ಸಂಗೀತ ಸಂಯೋಜಕ ಥಮನ್‌ ಅವರಿಗೆ ಧನ್ಯವಾದ” ಎಂದಿದ್ದಾರೆ.

ಚಿತ್ರದ ನಾಯಕಿ ಪೂಜಾ ಹೆಗ್ಡೆ ಬಿಹೈಂಡ್‌ ದಿ ಸೀನ್ಸ್‌ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್‌ ಪುತ್ರಿ ಆರ್ಹಾ ಜೊತೆಗೆ ಸಿನಿಮಾದ ಹಾಡಿಗೆ ಅವರು ಕುಣಿದಿರುವ ವೀಡಿಯೋ ಇದು. “ಜನರಿಗಾಗಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಸಿನಿಮಾ ಮಾಡಿದಾಗ ಮ್ಯಾಜಿಕ್‌ ಸಂಭವಿಸುತ್ತದೆ. ಈ ಚಿತ್ರತಂಡ ಅಮೇಜಿಂಗ್‌!” ಎಂದು ಪೂಜಾ ಟ್ವೀಟ್‌ ಮಾಡಿದ್ದು, ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಆರ್ಹಾ ಜೊತೆಗಿನ ವೀಡಿಯೋ ಶೇರ್‌ ಮಾಡಿದ್ದಾರೆ.

ಚಿತ್ರದ ಸಂಗೀತ ಸಂಯೋಜಕ ಥಮನ್‌ ಹಾಡಿನ ರೆಕಾರ್ಡಿಂಗ್‌ ಸನ್ನಿವೇಶವೊಂದರ ವೀಡಿಯೋ ತುಣುಕನ್ನು ಟ್ವೀಟ್‌ ಮಾಡಿದ್ದಾರೆ. ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶನದ ಈ ಮ್ಯೂಸಿಕಲ್‌ ಫ್ಯಾಮಿಲಿ ಎಂಟರ್‌ಟೇನರ್‌ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸದ್ಯ ನಟ ಅಲ್ಲು ಅರ್ಜುನ್‌ ಸದ್ಯ ‘ಪುಷ್ಪ’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದು 2021ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ನಟಿ ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್‌’ ತೆಲುಗು – ಹಿಂದಿ ದ್ವಿಭಾಷಾ ಸಿನಿಮಾ ತೆರೆಗೆ ಸಿದ್ಧವಾಗಿದೆ.

https://twitter.com/MusicThaman/status/1481241656771084288

LEAVE A REPLY

Connect with

Please enter your comment!
Please enter your name here