ಬಾಲಿವುಡ್‌ನ ಪ್ರತಿಭಾನ್ವಿತ ತಾರೆ ಆಲಿಯಾ ಭಟ್‌. ತಮ್ಮ ನಟನೆಯಿಂದಲೇ ಅಭಿಮಾನಿಗಳ ಮನಸ್ಸುಗಳಲ್ಲಿ ಪ್ರತ್ಯೇಕ ಸ್ಥಾನ ಪಡೆದುಕೊಂಡಿರುವ ನಟಿ. ಸಾಮಾಜಿಕ ಜಾಲತಾಣದಲ್ಲಿರುವ ಖಾತೆಗಳಲ್ಲೂ ಇವರಿಗೆ ಹಿಂಬಾಲಕರ ದೊಡ್ಡ ಬಳಗವೇ ಇದೆ. ಇಂತಹ ನಟಿ ಈಗ 2024ರ ಸಾಲಿನ ಟೈಮ್ಸ್​ನ ನೂರು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಟೈಮ್ಸ್‌ ಮ್ಯಾಗಜಿನ್‌ ಪ್ರತಿ ವರ್ಷದಂತೆ ಈ ಸಲವೂ ಜಾಗತಿಕ 100 ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದೆ. 2024ರ ಸಾಲಿನ ಟೈಮ್ಸ್​ನ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಬಿ-ಟೌನ್‌ ನಟಿ ಆಲಿಯಾ ಭಟ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆಲಿಯಾ ಭಟ್‌, ನಟ- ನಿರ್ದೇಶಕ ದೇವ್ ಪಟೇಲ್ ಸೇರಿದಂತೆ ಒಟ್ಟು 15 ಕಲಾವಿದರ ಹೆಸರು ಈ ಪಟ್ಟಿಯಲ್ಲಿದೆ. ಉಳಿದಂತೆ ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಮತ್ತು ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಆಲಿಯಾ ಭಟ್‌ ಕಳೆದ ವರ್ಷ ಅಂದರೆ 2023ರಲ್ಲಿ ‘ಹಾರ್ಟ್‌ ಆಫ್‌ ಸ್ಟೋನ್‌’ ಸಿನಿಮಾ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆಗ ಆಲಿಯಾಗೆ ಆಕ್ಷನ್‌ ಕಟ್‌ ಹೇಳಿದ್ದ ನಿರ್ದೇಶಕ ಟಾಪ್‌ ಹಾರ್ಪರ್‌ ಮ್ಯಾಗಜಿನ್‌ನಲ್ಲಿ ಆಲಿಯಾ ಬಗ್ಗೆ ಬರೆದುಕೊಂಡಿದ್ದಾರೆ. ಆಲಿಯಾ ಭಟ್​ ಅಸಾಧಾರಣ ಪ್ರತಿಭೆ ಹಾಗೂ ನಿಜವಾದ ಇಂಟರ್‌ನ್ಯಾಷನಲ್‌ ಸ್ಟಾರ್‌. ತಮ್ಮ ನಟನೆಯಿಂದಲೇ ಗಮನ ಸೆಳೆದಿರುವ ಆಲಿಯಾ, ದಶಕದಿಂದ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅದ್ಭುತವಾಗಿ ತೊಡಗಿಸಿಕೊಂಡಿದ್ದಾರೆ. ನಟಿಯಲ್ಲದೆ, ಓರ್ವ ವ್ಯಕ್ತಿಯಾಗಿಯೂ ಆಲಿಯಾ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ನಟಿಯ ಹೊರತಾಗಿ ಯಶಸ್ವಿ ಉದ್ಯಮಿ. ಕ್ರಿಯಾತ್ಮಕವಾಗಿ ರಿಸ್ಕ್‌ ತೆಗ್ದುಕೊಳ್ಳಲು ಸಿದ್ಧರಿರುತ್ತಾರೆ. ಯಾರೇ ಐಡಿಯಾ ಕೊಟ್ಟರೂ ಅದನ್ನು ತೆಗೆದುಕೊಳ್ಳಲು ಸಿದ್ಧರಿರುತ್ತಾರೆ. ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನಗುತ್ತಾ ತಮಾಷೆ ಮಾಡುತ್ತ ಇರುವ ಗುಣ ಅವರದ್ದು ಎಂದು ಹೊಗಳಿದ್ದಾರೆ. ಹಾಲಿವುಡ್‌ ನಿರ್ದೇಶಕ ಬರೆದಿರುವ ಪೋಸ್ಟ್‌ ಅನ್ನು ಹಂಚಿಕೊಂಡಿರುವ ಆಲಿಯಾ, ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಸಿನಿಮಾ ವಿಷಯಕ್ಕೆ ಬಂದರೆ, ‘ಡಾರ್ಲಿಂಗ್ಸ್‌’ ಹಾಗೂ ‘ಬ್ರಹ್ಮಾಸ್ತ್ರ2’ ಚಿತ್ರಗಳು ಆಲಿಯಾ ಕೈಲಿವೆ.

LEAVE A REPLY

Connect with

Please enter your comment!
Please enter your name here