ಅಮೇಜಾನ್‌ ಪ್ರೈಮ್‌ OTT ಗಾಗಿ ತಯಾರಾಗಿರುವ ‘ಚೋರಿ’ ಹಿಂದಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ವಿಶಾಲ್ ಫುರಿಯಾ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ನುಸ್ರತ್‌ ಭರೂಚಾ ನಟಿಸಿದ್ದಾರೆ. ಪ್ರೈಮ್‌ನಲ್ಲಿ ನವೆಂಬರ್‌ 26ರಿಂದ ಸಿನಿಮಾ ಸ್ಟ್ರೀಮ್ ಆಗಲಿದೆ.

ನಟಿ ನುಸ್ರತ್‌ ಭರೂಚಾ ತಾವು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಚೋರಿ’ ಹಾರರ್‌ ಹಿಂದಿ ಸಿನಿಮಾದ ಟೀಸರ್‌ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, “ಭಯವನ್ನು ನಿಮ್ಮ ಹೊಸ ಸಂಗಾತಿಯನ್ನಾಗಿ ನೋಡಲು ಸಜ್ಜಾಗಿ. ಅಮೇಜಾನ್ ಪ್ರೈಮ್‌ನಲ್ಲಿ ನವೆಂಬರ್‌ 26ಕ್ಕೆ ನಿಮ್ಮ ಮುಂದೆ ‘ಚೋರಿ’ ಬರುತ್ತಿದೆ” ಎಂದು ಬರೆದಿದ್ದಾರೆ. ಟೀಸರ್‌ನಲ್ಲಿ ಸಾಕಷ್ಟು ಭಯ ಪಡಿಸುವ ಸನ್ನಿವೇಶಗಳಿದ್ದು, ಸಿನಿಮಾದ ಹಾರರ್‌ ಕಾನ್ಸೆಪ್ಟ್‌ಗೆ ಇಂಬು ನೀಡುವಂತಿವೆ. ಹೊಸ ಜಾಗಕ್ಕೆ ಹೊಂದಿಕೊಳ್ಳಲು ಯತ್ನಿಸುವ ನಾಯಕಿ ಸಾಕ್ಷಿಗೆ (ನುಸ್ರತ್‌) ಜೀವಿಸಿಲ್ಲದ ಇಲ್ಲವೇ ಇಹಲೋಕ ತ್ಯಜಿಸಿ ವರ್ಷಗಳೇ ಆದ ಆತ್ಮಗಳು ಎದುರಾಗಿ ಭಯಪಡಿಸುತ್ತವೆ.


ಟೀ ಸೀರೀಸ್‌ನ ಭೂಷಣ್ ಕುಮಾರ್‌, ವಿಕ್ರಮ್ ಮಲ್ಹೊತ್ರಾ ಮತ್ತು ಜಾಕ್ ಡೇವಿಸ್‌ ನಿರ್ಮಿಸಿರುವ ಚಿತ್ರವನ್ನು ವಿಶಾಲ್ ಫುರಿಯಾ ನಿರ್ದೇಶಿಸಿದ್ದಾರೆ. ಸಿನಿಮಾದ ಅಫಿಷಿಯಲ್‌ ಸಿನಾಪ್ಸಿಸ್ ಹೀಗಿದೆ – “ಇದು ಆಧುನಿಕ ದುನಿಯಾದ ಯುವ ದಂಪತಿ ಸಾಕ್ಷಿ ಮತ್ತು ಹೇಮಂತ್‌ ಕತೆ. ಸಾಕ್ಷಿ ಎಂಟು ತಿಂಗಳ ಗರ್ಭಿಣಿ. ಕುಟುಂಬದವರ ನಿರ್ಲಕ್ಷ್ಯಕ್ಕೆ ತುತ್ತಾದ ಈ ಜೋಡಿ ಅವರ ಕಣ್ಣಿಗೆ ಬೀಳದಿರಲು ನಗರ ಬಿಟ್ಟು ದೂರದ ಗ್ರಾಮವೊಂದರ ದಟ್ಟ ಕಬ್ಬಿನ ಗದ್ದೆಯ ಮಧ್ಯೆಯ ಒಂದು ಮನೆಯಲ್ಲಿ ವಾಸ ಮಾಡಲು ಬರುತ್ತಾರೆ. ವಯಸ್ಸಾದ ದಂಪತಿಗಳಿರುವ ಈ ಮನೆಯಲ್ಲಿ ಊಹೆಗೆ ನಿಲುಕದ ಘಟನೆಗಳು ಜರುಗುತ್ತವೆ. ಜಗತ್ತಿನಲ್ಲಿ ಅಸ್ತಿತ್ವವೇ ಇರದ ಅಥವಾ ಯಾವಾಗಲೋ ಜಗತ್ತಿನಿಂದ ದೂರವಾಗಿರುವ ವ್ಯಕ್ತಿಗಳು ಸಾಕ್ಷಿಗೆ ಕಾಣಿಸತೊಡಗುತ್ತಾರೆ. ಆ ‘ಡಾರ್ಕ್‌ ಸೀಕ್ರೇಟ್‌’ ಸುತ್ತ ಹೆಣೆಯಲ್ಪಟ್ಟಿರುವ ಕತೆ ‘ಚೋರಿ’”

Previous articleಕೋರ್ಟ್ ಕಟಕಟೆಯಲ್ಲಿ ನಿಂತ ನಿರ್ದೇಶಕ ಸಿಂಪಲ್ ಸುನಿ; ಇದು ‘ಸಖತ್’ ಐಡಿಯಾ
Next articleಟೀಸರ್ | ಪೊಲೀಸ್ ಆಫೀಸರ್‌ ರವೀನಾ ಟಂಡನ್; ಡಿಸೆಂಬರ್ 10ರಿಂದ ನೆಟ್‌ಫ್ಲಿಕ್ಸ್‌’ನಲ್ಲಿ ‘ಅರಣ್ಯಕ್’

LEAVE A REPLY

Connect with

Please enter your comment!
Please enter your name here