ನೆಟ್‌ಫ್ಲಿಕ್ಸ್‌ ಹೊಸ ಸೀರೀಸ್‌ ‘ಅರಣ್ಯಕ್‌’ ಟೀಸರ್ ಬಿಡುಗಡೆಯಾಗಿದೆ. ಈ ಮರ್ಡರ್ ಮಿಸ್ಟರಿಯಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್‌ ಪೊಲೀಸರ್ ಅಧಿಕಾರಿ ‘ಕಸ್ತೂರಿ’ಯಾಗಿ ನಟಿಸಿದ್ದಾರೆ. ಡಿಸೆಂಬರ್‌ 10ರಿಂದ ಸೀರೀಸ್ ಸ್ಟ್ರೀಮ್ ಆಗಲಿದೆ.

ಬಾಲಿವುಡ್‌ ನಟಿ ರವೀನಾ ಟಂಡನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ನೆಟ್‌ಫ್ಲಿಕ್ಸ್‌ನ ‘ಅರಣ್ಯಕ್‌’ ವೆಬ್‌ ಸರಣಿ ಟೀಸರ್ ಬಿಡುಗಡೆಯಾಗಿದೆ. ಇಲ್ಲಿ ಅವರು ಪೊಲೀಸ್ ಅಧಿಕಾರಿ ‘ಕಸ್ತೂರಿ’ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೋಹರವಾಗಿ ಕಾಣುವ ಹಿಲ್‌ಸ್ಟೇಷನ್‌, ಮತ್ತೊಂದೆಡೆ ಡೆಡ್ಲೀ ಪ್ರದೇಶವೂ ಹೌದು. ಅಲ್ಲಿನ ಪ್ರವಾಸಿ ಮಂದಿರದಲ್ಲಿ ತಂಗುವ ವಿದೇಶಿ ಪ್ರವಾಸಿಗರು ಕಣ್ಮರೆಯಾಗುವ ರಹಸ್ಯ ಭೇದಿಸುವ ಹೊಣೆ ಪೊಲೀಸ್ ಅಧಿಕಾರಿ ಕಸ್ತೂರಿ ಹೆಗಲಿಗೇರುತ್ತಿದೆ. ಪೊಲೀಸ್ ಆಫೀಸರ್ ಅಂಗದ್‌ ನೆರವಿನೊಂದಿಗೆ ದುಷ್ಟರನ್ನು ಮಟ್ಟಹಾಕುವ ವಿಶೇಷ ಪಾತ್ರದಲ್ಲಿ ರವೀನಾ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ಹೆಚ್ಚೇನೂ ಕತೆ ರಿವೀಲ್ ಆಗುವುದಿಲ್ಲ. ಅಶುತೋಷ್ ರಾಣಾ ಸರಣಿಯ ಖಳಪಾತ್ರದಲ್ಲಿ ನಟಿಸಿರುವ ಸೂಚನೆ ಸಿಗುತ್ತದೆ. “ಕಸ್ತೂರಿ ಪಾತ್ರ ತುಂಬಾ ಸ್ಪೆಷಲ್ ಆಗಿದೆ. ಆಕೆ ಪುರುಷರಿಗೆ ಸರಿಸಮನಾಗಿ ಹೋರಾಟ ನಡೆಸುತ್ತಾಳೆ ಎಂದೇನಲ್ಲ. ಆದರೆ ಎಲ್ಲರಿಗಿಂತ ಹೆಚ್ಚು ಚಾಣಾಕ್ಷತನದ ಅಧಿಕಾರಿ ಎನ್ನುವ ಕಾರಣಕ್ಕೆ ಪಾತ್ರದ ಬಗ್ಗೆ ಪ್ರೀತಿ ಮೂಡಿತು” ಎನ್ನುತ್ತಾರೆ ನಟಿ ರವೀನಾ. ಡಿಸೆಂಬರ್‌ 10ರಿಂದ ಸರಣಿ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here