ಬಾಲಿವುಡ್ ನಟ ಜಿಮ್ಮಿ ಶೆರ್ಗಿಲ್‌ ನಟಿಸಿರುವ ‘ಯುವರ ಹಾನರ್‌’ ಸೀಸನ್‌ 2ನ ಟೀಸರ್ ಬಿಡುಗಡೆಯಾಗಿದೆ. ಗುಲ್ಶನ್ ಗ್ರೋವರ್‌, ಜೀಶನ್ ಖಾದ್ರಿ, ಮಹೀ ಗಿಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸೀರೀಸ್‌ Sony LIVನಲ್ಲಿ ಸ್ಟ್ರೀಮ್ ಆಗಲಿದೆ.

ನಟ ಜಿಮ್ಮಿ ಶೆರ್ಗಿಲ್ ಜಡ್ಜ್‌ ಪಾತ್ರದಲ್ಲಿ ನಟಿಸಿರುವ ‘ಯುವರ್ ಹಾನರ್‌’ ಸರಣಿಯ ಎರಡನೇ ಸೀಸನ್‌ಗೆ ವೇದಿಕೆ ಸಜ್ಜಾಗಿದೆ. ಜಡ್ಜ್‌ ಭಿಶನ್ ಖೋಸ್ಲಾ (ಜಿಮ್ಮಿ ಶೆರ್ಗಿಲ್‌) ತನ್ನ ಮಗನ ಉಳಿವಿಗಾಗಿ ಹೋರಾಟ ನಡೆಸುವ ಕತೆಯಿದು. ಎರಡನೇ ಸೀಸನ್‌ ಟೀಸರ್ ಬಿಡುಗಡೆಯಾಗಿದ್ದು, ಇದು ಮೊದಲನೇ ಸೀಸನ್‌ನ ಮುಂದುವರಿದ ಭಾಗದಂತಿದೆ. ಬಾಲಿವುಡ್‌ ತಾರೆಯರಾದ ಗುಲ್ಶನ್ ಗ್ರೋವರ್‌, ಮಹೀ ಗಿಲ್‌, ಜೀಶನ್ ಖಾದ್ರಿ ಈ ಸೀಸನ್‌ನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. “ತನ್ನ ಜಗತ್ತನ್ನು ಕಾಪಾಡಿಕೊಳ್ಳಲು ಈತ ಜಗತ್ತನ್ನು ಎದುರಿಸಿ ನಿಂತಿದ್ದಾನೆ” ಎಂದು Sony LIV ಟೀಸರ್‌ನೊಂದಿಗೆ ಟ್ವೀಟ್ ಮಾಡಿದೆ. 2020ರಲ್ಲಿ ‘ಯುವರ್ ಹಾನರ್‌’ ಮೊದಲನೇ ಸೀಸನ್‌ Sony LIV ನಲ್ಲಿ ಪ್ರಸಾರವಾಗಿತ್ತು. ಆಗ ಡಿಜಿಟಲ್ ಕಂಟೆಂಟ್ ಕುರಿತು ಮಾತನಾಡಿದ್ದ ಜಿಮ್ಮ ಶೆರ್ಗಿಲ್‌, “ಡಿಜಿಟಲ್‌ ಮೀಡಿಯಮ್‌ ಭಿನ್ನ ಕಂಟೆಂಟ್‌ಗೆ ಹೊಸ ಹಾದಿ ಹಾಕಿಕೊಟ್ಟಿದೆ. ಮೊನ್ನೆ ಮೊನ್ನೆಯವರೆಗೂ ಅಲ್ಲಿ ಸೆನ್ಸಾರ್ ಇಲ್ಲದ ಅಶ್ಲೀಲ, ಕ್ರೌರ್ಯವನ್ನು ವೈಭವೀಕರಿಸುವ  ಮಸಾಲಾ ಕಂಟೆಂಟ್‌ ಪ್ರಸಾರವಾಗುತ್ತಿತ್ತು. ಈಗ ಜನರು ಕೂಡ ಅವುಗಳಿಂದ ದೂರ ಉಳಿದು ಕತೆ ಮುಖ್ಯ ಎಂದು ಮಾತನಾಡುತ್ತಿದ್ದಾರೆ” ಎಂದಿದ್ದರು.

LEAVE A REPLY

Connect with

Please enter your comment!
Please enter your name here