ಶಕುನ್‌ ಬಾತ್ರಾ ನಿರ್ದೇಶನದ ಮಾಡ್ರನ್‌ ರಿಲೇಷನ್‌ಶಿಪ್‌ ಕುರಿತ ರೊಮ್ಯಾಂಟಿಕ್‌ – ಡ್ರಾಮಾ ‘ಗೆಹ್ರಾಯಿಯಾ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ದೀಪಿಕಾ ಪಡುಕೋಣೆ, ಸಿದ್ಧಾಂತ್‌ ಚತುರ್ವೇದಿ, ಅನನ್ಯಾ ಪಾಂಡೆ ಮತ್ತು ಧೈರ್ಯಾ ಕಾರ್ವಾ ನಟನೆಯ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಫೆಬ್ರವರಿ 11ರಿಂದ ಸ್ಟ್ರೀಮ್‌ ಆಗಲಿದೆ.

‘ಅಲಿಶಾ’ ಪಾತ್ರ ನಿರ್ವಹಿಸುತ್ತಿರುವ ದೀಪಿಕಾ ಪಡುಕೋಣೆ, ನಟ ಧೈರ್ಯ ಪಾತ್ರದ ಜೊತೆ ರಿಲೇಷನ್‌ಶಿಪ್‌ನಲ್ಲಿರುತ್ತಾಳೆ. ಅಲಿಶಾ ಕಸಿನ್‌ ಟಿಯಾ (ಅನನ್ಯಾ ಪಾಂಡೆ) ಮತ್ತು ಝೈನ್‌ (ಸಿದ್ಧಾಂತ್‌ ಚತುರ್ವೇದಿ) ಪ್ರೇಮಿಗಳು. ಅಲಿಶಾ ಮತ್ತು ಝೈನ್‌ ಪರಸ್ಪರರಲ್ಲಿ ಅನುರಕ್ತರಾಗುತ್ತಿದ್ದಂತೆ ಸಂಬಂಧಗಳು ಹದಗೆಡುತ್ತವೆ. ಮಾಡ್ರನ್‌ ಡೇ ರಿಲೇಷನ್‌ಶಿಪ್‌ ಕುರಿತ ಈ ರೊಮ್ಯಾಂಟಿಕ್‌ ಡ್ರಾಮಾದ ಟ್ರೈಲರ್‌ ಬಿಡುಗಡೆಯಾಗಿದೆ. ವಿಶಿಷ್ಟ ಸೌಂಡ್‌ಟ್ರ್ಯಾಕ್‌ ಮತ್ತು ಆಕರ್ಷಕ ವಿಶ್ಯುಯಲ್ಸ್‌ಗಳೊಂದಿಗೆ ಟ್ರೈಲರ್‌ ಈ ಇಂಟೆನ್ಸ್‌ ರಿಲೇಷನ್‌ಶಿಪ್‌ ಡ್ರಾಮಾ ಬಗ್ಗೆ ನಿರೀಕ್ಷೆ ಹೆಚ್ಚಿಸುತ್ತದೆ. ಈ ತಿಂಗಳಲ್ಲೇ ಸ್ಟ್ರೀಮ್‌ ಅಗಬೇಕಿದ್ದ ಸಿನಿಮಾ ಫೆಬ್ರವರಿ 11ಕ್ಕೆ ಮುಂದೂಡಲ್ಪಟ್ಟಿತು. ಪ್ರೈಮ್‌ ವೀಡಿಯೋದಲ್ಲಿ ಸ್ಟ್ರೀಮ್‌ ಅಗುತ್ತಿರುವ ಧರ್ಮ ಪ್ರೊಡಕ್ಷನ್ಸ್‌ನ ಎರಡನೇ ಪ್ರಮುಖ ಚಿತ್ರವಿದು. ಕಳೆದ ವರ್ಷ ಧರ್ಮ ಪ್ರೊಡಕ್ಷನ್ಸ್‌ನ ‘ಶೇರ್‌ಶಾಹ್‌’ ಸ್ಟ್ರೀಮ್‌ ಆಗಿತ್ತು.

ಧರ್ಮ ಪ್ರೊಡಕ್ಷನ್ಸ್‌ ಜೊತೆ ನಿರ್ದೇಶಕ ಶಕುನ್‌ ಬಾತ್ರಾ ಅವರ ಮೂರನೇ ಚಿತ್ರವಿದು. ಹಿಂದೆ ಅವರು ಈ ಸಂಸ್ಥೆಗಾಗಿ ‘ಏಕ್‌ ಮೈ ಔರ್‌ ಏಕ್‌ ತು’ ಮತ್ತು ‘ಕಪೂರ್‌ ಅಂಡ್‌ ಸನ್ಸ್‌’ ಚಿತ್ರಗಳನ್ನು ನಿರ್ದೇಶಿಸಿದ್ದರು. ಇನ್ನು ನಟಿ ದೀಪಿಕಾ ಇತ್ತೀಚೆಗೆ ’83’ ಚಿತ್ರದಲ್ಲಿ ರೋಮಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕ್ರಿಕೆಟರ್‌ ಕಪಿಲ್‌ ದೇವ್‌ ಪತ್ನಿಯ ಪಾತ್ರವಿದು. ಸಿನಿಮಾದಲ್ಲಿ ಅವರು ತಮ್ಮ ನಿಜಜೀವನದ ಪತಿ ರಣವೀರ್‌ ಸಿಂಗ್‌ ಜೊತೆಯಾಗಿ ನಟಿಸಿದ್ದರು. ಇದೇ ಚಿತ್ರದಲ್ಲಿ ನಟ ಧೈರ್ಯ ಅವರು ಕ್ರಿಕೆಟರ್‌ ರವಿಶಾಸ್ತ್ರಿ ಪಾತ್ರ ನಿರ್ವಹಿಸಿದ್ದರು. ಕರಣ್‌ ಜೋಹರ್‌ ನಿರ್ಮಾಣದ ‘ಸ್ಟೂಡೆಂಟ್‌ ಆಫ್‌ ದಿ ಯಿಯರ್‌ 2’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅನನ್ಯಾ ಪಾಂಡೆ ‘ಗೆಹ್ರಾಯಿಯಾ’ ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲೊಬ್ಬರು. ನಾಸಿರುದ್ದೀನ್‌ ಷಾ, ರಜತ್‌ ಕಪೂರ್‌ ಚಿತ್ರದ ಇತರೆ ಕಲಾವಿದರು.

LEAVE A REPLY

Connect with

Please enter your comment!
Please enter your name here