2019ರಲ್ಲಿ ಕಾರ್ಯಾಚರಣೆ ಆರಂಭಿಸಿದ Disney+ ಅಕ್ಟೋಬರ್‌ 2021ರ ಹೊತ್ತಿಗೆ 118.1 ಮಿಲಿಯನ್‌ ಬಳಕೆದಾರರನ್ನು ಹೊಂದಿತ್ತು. ಈಗ ಜಗತ್ತಿನ ಇನ್ನೂ 42 ದೇಶಗಳನ್ನು ತಲುಪುವ ಗುರಿಯೊಂದಿಗೆ ಮುನ್ನುಗ್ಗುತ್ತಿದೆ.

ದಿ ವಾಲ್ಟ್‌ ಡಿಸ್ನೀ ಕಂಪನಿಯ ಸ್ಟ್ರೀಮಿಂಗ್‌ ಕಂಪನಿ Disney+ 2022ರ ಬೇಸಿಗೆಯ ಹೊತ್ತಿಗೆ ಕಾರ್ಯಾಚರಣೆ ವಿಸ್ತರಣೆಯೊಂದಿಗೆ ಜಗತ್ತಿನ ಇನ್ನೂ 42 ದೇಶಗಳನ್ನು ತಲುಪುವ ಗುರಿ ಹೊಂದಿದೆ. ‘ದಿ ವೆರೈಟಿ’ ವರದಿಯನ್ವಯ Disney+ ಯೂರೋಪ್‌, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದೇಶಗಳಲ್ಲಿ ತನ್ನ ಜಾಲ ವಿಸ್ತರಿಸಲಿದೆ. 2019ರಲ್ಲಿ ಲಾಂಚ್‌ ಆದ Disney+ ಅತಿ ವೇಗದಲ್ಲಿ ಜಗತ್ತಿನ ಮುಂಚೂಣಿ ಸ್ಟ್ರೀಮಿಂಗ್‌ ಕಂಪನಿಗಳ ಸಾಲಿಗೆ ಸೇರ್ಪಡೆಗೊಂಡಿತು. 2021ರ ಅಕ್ಟೋಬರ್‌ಗೆ 118.1 ಮಿಲಿಯನ್‌ ಬಳಕೆದಾರರನ್ನು ಹೊಂದಿತ್ತು ಎನ್ನುವ ಅಂಕಿ-ಅಂಶ ಸಿಗುತ್ತದೆ.

ಸ್ಟ್ರೀಮಿಂಗ್‌ ಮಾರುಕಟ್ಟೆಯಲ್ಲಿ 221.08 ಮಿಲಿಯನ್‌ ಬಳಕೆದಾರರೊಂದಿಗೆ ನೆಟ್‌ಫ್ಲಿಕ್ಸ್‌ ಮತ್ತು 175 ಮಿಲಿಯನ್‌ ಬಳಕೆದಾರರೊಂದಿಗೆ ಅಮೇಜಾನ್‌ ಮೊದಲೆರೆಡು ಸ್ಥಾನಗಳಲ್ಲಿವೆ. ಚೀನಾದ ಸ್ಟ್ರೀಮಿಂಗ್‌ ಸರ್ವೀಸಸ್‌ಗಳಾದ ಟ್ಯಾನ್ಸೆಂಟ್‌ ವೀಡಿಯೋ ಮತ್ತು iQIYI ನಂತರದ ಸ್ಥಾನಗಳಲ್ಲಿವೆ. Disney+ 5ನೇ ಸ್ಥಾನದಲ್ಲಿದೆ. ಡಿಸ್ನೀ ಸಂಸ್ಥೆಯ ಈ ಸ್ಟ್ರೀಮಿಂಗ್‌ ಕಂಪನಿ ಉತ್ಕೃಷ್ಟ ಮತ್ತು ವೈವಿಧ್ಯಮಯ ಕಂಟೆಂಟ್‌ ಹೊಂದಿದೆ. ಡಿಸ್ನೀ ಅನಿಮೇಷನ್‌, ನ್ಯಾಷನಲ್‌ ಜಿಯಾಗ್ರಫಿಕ್‌, ಸ್ಟಾರ್‌ವಾರ್ಸ್‌, ಮಾರ್ವೆಲ್‌, ಪಿಕ್ಸರ್‌ ಮತ್ತಿತರೆ ಫಾಂಚೈಸಸ್‌ ಮತ್ತು ಸ್ಟುಡಿಯೋಗಳೊಂದಿಗೆ ಗುರುತಿಸಿಕೊಂಡಿದೆ. ಭಾರತದಲ್ಲಿ Disney+ ಕಂಟೆಂಟ್‌ Disney+Hotstar ಮೂಲಕ ತಲುಪುತ್ತಿದೆ. Disney+Hotstar ಕಳೆದ ಏಪ್ರಿಲ್‌ನಲ್ಲಿ ಲಾಂಚ್‌ ಆಗಿತ್ತು. HBO ಮತ್ತು Showtime ಕಂಟೆಟ್‌ ಅನ್ನೂ ಭಾರತದಲ್ಲಿ ಹಾಟ್‌ಸ್ಟಾರ್‌ ಡಿಸ್ಟ್ರಿಬ್ಯೂಟ್‌ ಮಾಡುತ್ತಿದೆ.

LEAVE A REPLY

Connect with

Please enter your comment!
Please enter your name here