ಬ್ಲಾಕ್‌ ಬಸ್ಟರ್‌ ಮರಾಠಿ ಸಿನಿಮಾ ‘ಸೈರಾಟ್‌’ ಖ್ಯಾತಿಯ ನಾಗರಾಜ್‌ ಮಂಜುಳೆ ನಿರ್ದೇಶನದ ಮೊದಲ ಹಿಂದಿ ಸಿನಿಮಾ ‘ಝುಂಡ್‌’ ಮಾರ್ಚ್‌ 11ರಂದು ತೆರೆಕಾಣಲಿದೆ. ಹಿರಿಯ ನಟ ಅಮಿತಾಭ್‌ ಬಚ್ಚನ್‌ ಈ ಚಿತ್ರದಲ್ಲಿ ನಾಗಪುರ ಮೂಲದ ಫುಟ್‌ಬಾಲ್‌ ಕೋಚ್‌ ಪಾತ್ರದಲ್ಲಿ ಅಭಿನಯಿಸಿದ್ದಾರೆ.

‘ಫಾಂಡ್ರಿ’, ‘ಸೈರಾಟ್‌’ ಸಿನಿಮಾಗಳ ನಿರ್ದೇಶಕ ನಾಗರಾಜ್‌ ಮಂಜುಳೆ ಅವರ ನಿರ್ದೇಶನದ ಮೊದಲ ಹಿಂದಿ ಸಿನಿಮಾ ‘ಝುಂಡ್‌’ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಅಮಿತಾಭ್‌ ಬಚ್ಚನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಮಾರ್ಚ್‌ 4ರಂದು ಥಿಯೇಟರ್‌ಗೆ ಬರಲಿದೆ. T-ಸೀರೀಸ್‌, ತಾಂಡವ್‌ ಫಿಲ್ಮ್ಸ್‌ ಎಂಟರ್‌ಟೇನ್‌ಮೆಂಟ್‌ ಮತ್ತು ಆಟ್‌ಪಾಟ್‌ ಬ್ಯಾನರ್‌ನಡಿ ಭೂಷಣ್‌ ಕುಮಾರ್‌, ಕೃಷ್ಣ ಕುಮಾರ್‌, ರಾಜ್‌ ಹಿರೇಮಠ್‌, ನಾಗರಾಜ್‌ ಮಂಜುಳೆ, ಮೀನಾ ಅರೋರಾ, ಗಾರ್ಗಿ ಕುಲಕರ್ಣಿ ನಿರ್ಮಿಸಿರುವ ಸಿನಿಮಾ ತೀರಾ ವಿಳಂಬವಾಗಿ ತೆರೆಕಾಣುತ್ತಿದೆ. ಕೋವಿಡ್‌ನಿಂದಾಗಿ ಸಿನಿಮಾ ಬಿಡುಗಡೆ ವಿಳಂಬವಾದಾಗ OTTಯಲ್ಲಿ ಚಿತ್ರವನ್ನು ರಿಲೀಸ್‌ ಮಾಡಲು ಚಿತ್ರತಂಡ ಆಲೋಚಿಸಿತ್ತು. ಕಾಪಿರೈಟ್‌ಗೆ ಸಂಬಂಧಿಸಿದಂತೆ ತಕರಾರುಗಳು ಆಗಿದ್ದರಿಂದ ಓಟಿಟಿ ಬಿಡುಗಡೆ ಸಾಧ್ಯವಾಗಲಿಲ್ಲ. ಇದೀಗ ಅಂತಿಮವಾಗಿ ಸಿನಿಮಾ ಮಾರ್ಚ್‌ ಆರಂಭದಲ್ಲಿ ಥಿಯೇಟರ್‌ಗೆ ಬರುತ್ತಿದೆ.

ಹಿರಿಯ ನಟ ಅಮಿತಾಭ್‌ ಬಚ್ಚನ್‌ ಚಿತ್ರದಲ್ಲಿ ಸ್ಲಂ ಫುಟ್‌ಬಾಲ್‌ ತಂಡವನ್ನು ಕಟ್ಟುವ ನಾಗಪುರ ಮೂಲದ ಕೋಚ್‌ ವಿಜಯ್‌ ಬರ್ಸೆ ಪಾತ್ರ ನಿರ್ವಹಿಸುತ್ತಿದ್ದಾರೆ. ಬೀದಿ ಮಕ್ಕಳ ಫುಟ್‌ಬಾಲ್‌ ತಂಡ ಕಟ್ಟಿ ಅವರ ಬದುಕಿಗೆ ಸ್ಫೂರ್ತಿ ತುಂಬುವ ತರಬೇತುದಾರನ ಪಾತ್ರವಿದು. ‘Iss toli se muqaabla karne ke liye raho taiyaar! Humari team aa rahi hai’ ಎನ್ನುವ ಒಕ್ಕಣಿಯೊಂದಿಗೆ ಅವರು ‘ಝುಂಡ್‌’ ರಿಲೀಸ್‌ ಪೋಸ್ಟರ್‌ ಟ್ವೀಟ್‌ ಮಾಡಿದ್ದಾರೆ. ಈ ಚಿತ್ರದ ನಂತರ ಬಚ್ಚನ್‌ರ ‘ಬ್ರಹ್ಮಾಸ್ತ್ರ’ ಸಿನಿಮಾ ತೆರೆಕಾಣಲಿದೆ. ರಣಬೀರ್‌ ಕಪೂರ್‌, ಅಲಿಯಾ ಭಟ್‌ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

ಹಳೆಯ ರಿಲೀಸ್‌ ಡೇಟ್‌ನೊಂದಿಗಿನ ಟೀಸರ್‌..

LEAVE A REPLY

Connect with

Please enter your comment!
Please enter your name here