ಶಂಕರ್‌ ಗುರು ನಿರ್ದೇಶನದಲ್ಲಿ ಡಾಲಿ ಧನಂಜಯ ನಟಿಸುತ್ತಿರುವ ‘ಅಣ್ಣ From Mexico’ ಸಿನಿಮಾ ಸೆಟ್ಟೇರಿದೆ. Ayra Films ಸಹಯೋಗದೊಂದಿಗೆ The Rayala Studios ಚಿತ್ರ ನಿರ್ಮಿಸುತ್ತಿದೆ. ವಾಸುಕಿ ವೈಭವ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ಧನಂಜಯ ಮತ್ತು ಶಂಕರ್ ಗುರು ಜೋಡಿಯ ‌’ಅಣ್ಣ From Mexico’ ಸಿನಿಮಾದ ಮುಹೂರ್ತ ನೆರವೇರಿದೆ. Rayala Studiosನ ಪಾಲುದಾರರಾದ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದ್ದು, ನಿರ್ದೇಶಕ ಶಂಕರ್ ಗುರು ತಾಯಿ ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ. ಸ್ನೇಹಿತ ಹಾಗೂ ಹಿತೈಷಿಗಳಾದ ಮೃಣಾಲ್ ಹೆಬ್ಬಾಳ್ಕರ್ ಸಿನಿಮಾದ ಮುಹೂರ್ತಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ. ಧನಂಜಯ್‌ ತಮ್ಮದೇ Daali Pictures ಬ್ಯಾನರ್‌ ಅಡಿ ನಿರ್ಮಿಸಿ, ನಟಿಸಿದ್ದ ‘ಬಡವ ರಾಸ್ಕಲ್’ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಕಥೆ ರಚಿಸಿದ್ದಾರೆ. ಶಂಕರ್ ಗುರು ನಿರ್ದೇಶನದ ಈ ಎರಡನೇ ಸಿನಿಮಾ ಕೌಟುಂಬಿಕ ಮನರಂಜನೆಯ ಕಥಾವಸ್ತು ಹೊಂದಿದೆ.

Ayra Films ಸಹಯೋಗದೊಂದಿಗೆ The Rayala Studios ಬ್ಯಾನರ್‌ ಅಡಿಯಲ್ಲಿ ಸತ್ಯ ರಾಯಲ ಚಿತ್ರ ನಿರ್ಮಿಸುತ್ತಿದ್ದಾರೆ. ಸಿನಿಮಾಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸುತ್ತಿದ್ದು, ಜನವರಿ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ. ಮೆಕ್ಸಿಕೋ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇನ್ನು ಡಾಲಿ ಧನಂಜಯ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದು, ‘ಉತ್ತರಕಾಂಡ’, ‘ಪುಷ್ಪ2’, ‘ಝೀಬ್ರಾ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತಮ್ಮದೇ Daali Pictures ಬ್ಯಾನರ್‌ ಅಡಿ ಹೊಸ ಪ್ರತಿಭೆಗಳಿಗೆ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here