ಸೌರಭ್‌ ಶುಕ್ಲಾ ನಿರ್ದೇಶನದ ‘ಡ್ರೈ ಡೇ’ ಹಿಂದಿ ಸಿನಿಮಾ ಅಮೇಜಾನ್‌ ಪ್ರೈಂ ವೀಡಿಯೋದಲ್ಲಿ ಡಿಸೆಂಬರ್‌ 22ರಿಂದ ಸ್ಟ್ರೀಮ್‌ ಆಗಲಿದೆ. ಜಿತೇಂದ್ರ ಕುಮಾರ್‌, ಶ್ರೀಯಾ ಪಿಲ್ಗಾಂವ್ಕರ್, ಅನೂ ಕಪೂರ್ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಜಿತೇಂದ್ರ ಕುಮಾರ್‌, ಶ್ರೀಯಾ ಪಿಲ್ಗಾಂವ್ಕರ್ ಮತ್ತು ಅನೂ ಕಪೂರ್ ಮುಖ್ಯಭೂಮಿಕೆಯಲ್ಲಿರುವ ‘ಡ್ರೈ ಡೇ’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಹಾಸ್ಯ ಚಲನಚಿತ್ರವನ್ನು ಸೌರಭ್ ಶುಕ್ಲಾ ಬರೆದು ನಿರ್ದೇಶಿಸಿದ್ದಾರೆ. ಉತ್ತರ ಭಾರತದ ಪಟ್ಟಣವಾದ ಜಗೋಧರ್‌ನಲ್ಲಿ ಸ್ಥಾಪಿಸಲಾದ ಮುನ್ಸಿಪಲ್‌ನ ಕಾರ್ಪೊರೇಟರ್ ಆಗುವ ಆಸೆಯುಳ್ಳ ಮದ್ಯವ್ಯಸನಿ ಗನ್ನು (ಜಿತೇಂದ್ರ ಕುಮಾರ್) ಸುತ್ತ ಇಡೀ ಚಿತ್ರಕಥೆ ಸುತ್ತುತ್ತದೆ. ಅವನ ಹೆಂಡತಿ ಶ್ರಿಯಾ ಪಿಲ್ಗಾಂವ್ಕರ್ ಗಂಡನ ಕುಡಿತವನ್ನು ಬಿಡಿಸಲು ತಮ್ಮ ಮಗುವನ್ನು ಗರ್ಭಪಾತ ಮಾಡುವುದಾಗಿ ಬೆದರಿಕೆ ಹಾಕುತ್ತಾಳೆ. ಇದಾದ ನಂತರ ಗನ್ನು ತಾನೇ ಕುಡುಕನಾಗಿದ್ದರೂ ಸಹ ತನ್ನ ಪಟ್ಟಣದಲ್ಲಿ ಮದ್ಯಪಾನವನ್ನು ನಿಷೇಧಿಸಲು ಪ್ರತಿಭಟನೆಯನ್ನು ನಡೆಸುತ್ತಾನೆ.

ಜಗೋಧರ್‌ನಲ್ಲಿ ಚುನಾವಣಾ ಕಾರ್ಯಗಳು ನಡೆಯುತ್ತಿರುತ್ತವೆ. ಗನ್ನು ಸಹ ಚುನಾವಣೆಗೆ ಸ್ಪರ್ಧಿಸಲು ಅನುವು ಮಾಡಿಕೊಳ್ಳುತ್ತಿರುತ್ತಾನೆ. ಚಿತ್ರದಲ್ಲಿ ಮೋಸಗಾರ ರಾಜಕಾರಣಿಯಾಗಿ ಅನೂ ಕಪೂರ್ ನಟಿಸಿದ್ದಾರೆ. ಈ ಚಿತ್ರವನ್ನು An Emmay Entertainment Production ಬ್ಯಾನರ್‌ ಅಡಿಯಲ್ಲಿ ಮೋನಿಶಾ ಅಡ್ವಾಣಿ, ಮಧು ಭೋಜ್ವಾನಿ ಮತ್ತು ನಿಖಿಲ್ ಅಡ್ವಾಣಿ ನಿರ್ಮಿಸಿದ್ದಾರೆ. ಸಿನಿಮಾ Amazon Prime Videoದಲ್ಲಿ ಇದೇ ಡಿಸೆಂಬರ್ 22ರಿಂದ ಮೂಲ ಹಿಂದಿ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

LEAVE A REPLY

Connect with

Please enter your comment!
Please enter your name here