ಜೋಶಿ ನಿರ್ದೇಶನದ ‘ಆಂಟನಿ’ ಮಲಯಾಳಂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಜೋಜು ಜಾರ್ಜ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದೇ ಡಿಸೆಂಬರ್ 1 ರಂದು ಸಿನಿಮಾ ತೆರೆಕಾಣಲಿದೆ.
ಜೋಜು ಜಾರ್ಜ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಆಂಟನಿ’ ಮಲಯಾಳಂ ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜೋಶಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿರುವ ಅವರನ್ ನಗರವು ಕುಖ್ಯಾತ ಕ್ರಿಮಿನಲ್‌ಗಳು ಮತ್ತು ದರೋಡೆಕೋರರಿಂದ ತುಂಬಿದೆ ಎಂದು ಹೇಳುವ ಮೂಲಕ ಟ್ರೇಲರ್ ಆರಂಭವಾಗುತ್ತದೆ. ಅವರಲ್ಲಿ ಅತ್ಯಂತ ಅಪಾಯಕಾರಿಯಾದವನು ಆಂಟನಿಯಾಗಿರುತ್ತಾನೆ. ಇವನು ಸಬ್ ಇನ್ಸ್‌ಪೆಕ್ಟರ್‌ನನ್ನು ಜೀವಂತ ಸುಡುವುದರಿಂದ ಹಿಡಿದು ಹಲವಾರು ಕೊಲೆಗಳನ್ನು ಮಾಡಿರುತ್ತಾನೆ. ಇವನ ಜೊತೆಯಲ್ಲಿ ಫಾದರ್ ಪಾಲ್ ಎಂಬ ಪಾತ್ರದಲ್ಲಿ ಚೆಂಬನ್ ವಿನೋದ್ ಜೋಸ್ ಕಾಣಿಸಿಕೊಂಡಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್ ಕಾಲೇಜು ವಿದ್ಯಾರ್ಥಿನಿ ಮತ್ತು ಬಾಕ್ಸರ್ ಚಾಂಪಿಯನ್ ಆಗಿ ನಟಿಸಿದ್ದು ಅನ್ಯಾಯದ ವಿರುದ್ಧ ಹೋರಾಡುವ ಹೋರಾಟಗಾರ್ತಿಯಾಗಿ ನಟಿಸಿದ್ದಾರೆ.
ಸಿನಿಮಾದಲ್ಲಿ ನೈಲಾ ಉಷಾ, ಆಶಾ ಶರತ್, ವಿಜಯರಾಘವನ್ ಮತ್ತು ಅಪ್ಪನಿ ಶರತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾವನ್ನು Einstin Media ಬ್ಯಾನರ್ ಅಡಿಯಲ್ಲಿ ಐನ್‌ಸ್ಟೀನ್ ಝಾಕ್ ಪಾಲ್ ನಿರ್ಮಿಸಿದ್ದಾರೆ. ರಾಜೇಶ್ ವರ್ಮಾ ಚಿತ್ರಕಥೆ ರಚಿಸಿದ್ದು, ರೆನಡಿವ್ ಛಾಯಾಗ್ರಹಣ, ಶ್ಯಾಮ್ ಶಶಿಧರನ್ ಸಂಕಲನ, ಜೇಕ್ಸ್ ಬಿಜಾಯ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಇದೇ ಡಿಸೆಂಬರ್ 1 ರಂದು ಸಿನಿಮಾ ತೆರೆಕಾಣಲಿದೆ.