ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್‌ ಮತ್ತು ರಾಧಿಕಾ ಆಪ್ಟೆ ‘ಅಕ್ಕ’ ಹಿಂದಿ ಸರಣಿಯಲ್ಲಿ ನಟಿಸಲಿದ್ದಾರೆ. YRF ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ಈ ಸರಣಿಯನ್ನು ಧರ್ಮರಾಜ್‌ ಶೆಟ್ಟಿ ನಿರ್ದೇಶಿಸಲಿದ್ದಾರೆ.

YRF Entertainment ನಿರ್ಮಾಣದ ‘ಅಕ್ಕ’ ಹಿಂದಿ ಥ್ರಿಲ್ಲರ್‌ ಸರಣಿಯಲ್ಲಿ ಕೀರ್ತಿ ಸುರೇಶ್ ಮತ್ತು ರಾಧಿಕಾ ಆಪ್ಟೆ ಜೊತೆಯಾಗಿ ನಟಿಸಲಿದ್ದಾರೆ. ಧರ್ಮರಾಜ್ ಶೆಟ್ಟಿ ಈ ಸರಣಿಯನ್ನು ಬರೆದು ನಿರ್ದೇಶಿಸುತ್ತಿದ್ದಾರೆ. ಈ ಯೋಜನೆಯ ಕುರಿತು ಶೀಘ್ರದಲ್ಲೇ ತಯಾರಕರಿಂದ ಅಧಿಕೃತ ಮಾಹಿತಿ ಹೊರಬರಲಿದೆ. ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಅಭಿನಯದ ‘ಮೇರಿ ಕ್ರಿಸ್‌ಮಸ್‌’ ಚಿತ್ರದಲ್ಲಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದಾರೆ. ಇದರ ಜೊತೆಗೆ ‘ಸಿಸ್ಟಮ್ ಮಿಡ್‌ನೈಟ್‌’ ಎಂಬ ಹಾಲಿವುಡ್‌ ಚಲನಚಿತ್ರದಲ್ಲಿ ಇವರು ನಟಿಸುತ್ತಿದ್ದು, ಅಮೇರಿಕನ್ ಚಲನಚಿತ್ರದ ಭಾಗವಾಗಿದ್ದಾರೆ. ಕೀರ್ತಿ ಸುರೇಶ್ ಅವರು ‘ಸೈರನ್’, ‘ರಘು ಥಾಥಾ’, ‘ರಿವಾಲ್ವರ್ ರೀಟಾ’, ‘ಕನ್ನಿವೇದಿ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಜವಾನ್’ ನಿರ್ದೇಶಕ ಅಟ್ಲಿ ರಚನೆಯ ವರುಣ್ ಧವನ್ ಪ್ರಮುಖ ಪಾತ್ರದಲ್ಲಿರುವ ಹೆಸರಿಡದ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

YRF ನಿರ್ಮಾಣದ ಮೊದಲ ಸರಣಿ ‘ದಿ ರೈಲ್ವೇ ಮೆನ್‌’ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. Netflixನಲ್ಲಿ ಪ್ರಸಾರವಾಗುತ್ತಿರುವ ಈ ಸರಣಿಯು 1984ರ ಭೋಪಾಲ್ ಅನಿಲ ದುರಂತವನ್ನು ಆಧಾರಿಸಿದೆ. ಸರಣಿಯಲ್ಲಿ ಆರ್ ಮಾಧವನ್, Kay Kay ಮೆನನ್, ದಿವ್ಯೆಂದು ಶರ್ಮಾ ಮತ್ತು ಬಾಬಿಲ್ ಖಾನ್ ನಟಿಸಿದ್ದಾರೆ. YRF ನಿರ್ಮಾಣದ ಮುಂದಿನ ಸರಣಿಗೆ ‘ಮಂಡಲ ಮರ್ಡರ್ಸ್’ ಎಂದು ಶೀರ್ಷಿಕೆ ನಿಗಧಿಯಾಗಿದ್ದು, ವಾಣಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ. ವೈಭವ್ ರಾಜ್ ಗುಪ್ತಾ, ಸುರ್ವೀನ್ ಚಾವ್ಲಾ ಮತ್ತು ಜಮೀಲ್ ಖಾನ್ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. YRF ನಿರ್ಮಾಣ ಸಂಸ್ಥೆಯ ‘ಟೈಗರ್‌ 3’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸಿದೆ.

LEAVE A REPLY

Connect with

Please enter your comment!
Please enter your name here