ನಟ ಅರವಿಂದ್‌ ಸ್ವಾಮಿ, ಭೂಗತ ಪಾತಕಿ ‘ದಾವೂದ್‌’ ಪಾತ್ರದಲ್ಲಿ ನಟಿಸಿರುವ ‘ರೆಂಡಗಂ’ ತಮಿಳು ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಮಲಯಾಳಂ ನಟ ಕುಂಚಾಕ್ಕೊ ಬೋಬನ್‌ ಈ ಚಿತ್ರದೊಂದಿಗೆ ಕಾಲಿವುಡ್‌ ಪ್ರವೇಶಿಸುತ್ತಿದ್ದಾರೆ. ಕನ್ನಡದ ಹಿಟ್‌ ಸಿನಿಮಾ ‘ಮಫ್ತಿ’ ಹೋಲಿಕೆ ಈ ಚಿತ್ರಕ್ಕೆ ಇದ್ದಂತಿದೆ.

ನಟ ಅರವಿಂದ್‌ ಸ್ವಾಮಿ ‘ಸಾಲ್ಟ್‌ ಅಂಡ್‌ ಪೆಪ್ಪರ್‌’ ಲುಕ್‌ನಲ್ಲಿರುವ ‘ರೆಂಡಗಂ’ ತಮಿಳು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಅವರಿಲ್ಲಿ ಭೂಗತ ಪಾತಕಿ ದಾವೂದ್‌ ಪಾತ್ರದಲ್ಲಿದ್ದರೆ, ಮಲಯಾಳಂ ನಟ ಕುಂಚಾಕ್ಕೊ ಬೋಬನ್‌ ಅವರ ಬಲಗೈ ಬಂಟನಾಗಿ ನಟಿಸಿದ್ದಾರೆ. ಈ ಚಿತ್ರದೊಂದಿಗೆ ಕಾಲಿವುಡ್‌ಗೆ ಬೋಬನ್‌ ಪ್ರವೇಶವಾಗುತ್ತಿದೆ. ಶಿವರಾಜಕುಮಾರ್‌ ಮತ್ತು ಮುರಳಿ ನಟಿಸಿರುವ ಕನ್ನಡದ ಹಿಟ್‌ ‘ಮಫ್ತಿ’ ಸಿನಿಮಾದ ಹೋಲಿಕೆ ಈ ಚಿತ್ರಕ್ಕಿದೆ ಎನ್ನುವುದು ವಿಶೇಷ. ಆದರೆ ಆ ಕುರಿತಾಗಿ ಈ ಚಿತ್ರತಂಡ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಅರವಿಂದ ಸ್ವಾಮಿ ಪಾತ್ರಕ್ಕೆ ಮರೆವಿನ ಖಾಯಿಲೆಯ ಟ್ವಿಸ್ಟ್‌ ಇದೆ. ‘ಒಟ್ಟು’ ಶೀರ್ಷಿಕೆಯಡಿ ಸಿನಿಮಾ ಮಲಯಾಳಂನಲ್ಲೂ ಚಿತ್ರೀಕರಣಗೊಂಡಿದ್ದು, ನಟ ಆರ್ಯ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ತಯಾರಾಗಿದೆ. ಫೆಲ್ಲಿನಿ ಟಿ.ಪಿ. ಚಿತ್ರದ ನಿರ್ದೇಶಕ. ಚಿತ್ರದ ಬಿಡುಗಡೆ ದಿನಾಂಕವಿನ್ನೂ ಘೋಷಣೆಯಾಗಿಲ್ಲ. ನಟ ಅರವಿಂದ್‌ ಸ್ವಾಮಿ ಕೊನೆಯ ಬಾರಿ ‘ತಲೈವಿ’ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ – ರಾಜಕಾರಣಿ ಜಯಲಲಿತಾ ಬಯೋಪಿಕ್‌ನಲ್ಲಿ ಅವರು ಲೆಜೆಂಡರಿ ನಟ ಎಂಜಿಆರ್‌ ಪಾತ್ರ ಪೋಷಿಸಿದ್ದರು.

https://youtu.be/xJGWEckUZUQ

LEAVE A REPLY

Connect with

Please enter your comment!
Please enter your name here