ಆಯುಷ್ಮಾನ್‌ ಖುರಾನಾ ಅಭಿನಯದ ‘ಡ್ರೀಮ್‌’ಗರ್ಲ್‌ 2’ ಹಿಂದಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. 2019ರಲ್ಲಿ ತೆರೆಕಂಡಿದ್ದ ‘ಡ್ರೀಮ್‌ ಗರ್ಲ್‌’ ಚಿತ್ರದ ಸೀಕ್ವೆಲ್‌ ಇದು. ರಾಜ್‌ ಶಾಂಡಿಲ್ಯ ನಿರ್ದೇಶನದ ಸಿನಿಮಾ ಆಗಸ್ಟ್‌ 25ರಂದು ಬಿಡುಗಡೆಯಾಗಲಿದೆ.

ಆಯುಷ್ಮಾನ್‌ ಖುರಾನಾ ಮತ್ತು ಅನನ್ಯಾ ಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಡ್ರೀಮ್‌ ಗರ್ಲ್‌ 2’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಬಾಲಾಜಿ ಮೋಷನ್‌ ಪಿಕ್ಚರ್ಸ್‌ ಬ್ಯಾನರ್‌ನಡಿ ಏಕ್ತಾ ಕಪೂರ್‌ ನಿರ್ಮಿಸಿರುವ ಚಿತ್ರವಿದು. 2019ರಲ್ಲಿ ತೆರೆಕಂಡಿದ್ದ ‘ಡ್ರೀಮ್‌ ಗರ್ಲ್‌’ ಚಿತ್ರದ ಸೀಕ್ವೆಲ್‌. ರಾಜ್ ಶಾಂಡಿಲ್ಯ ನಿರ್ದೇಶನದ ಚಿತ್ರದ ನಾಯಕಿ ಅನನ್ಯಾ ಪಾಂಡೆ. ಇತರೆ ಪ್ರಮುಖ ಪಾತ್ರಗಳಲ್ಲಿ ಪರೇಶ್ ರಾವಲ್, ವಿಜಯ್ ರಾಜ್, ಅಸ್ರಾನಿ, ಅಭಿಷೇಕ್ ಬ್ಯಾನರ್ಜಿ, ಮನ್ಜೋತ್ ಸಿಂಗ್, ಸೀಮಾ ಪಹ್ವಾ ಇದ್ದಾರೆ. ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಜುಲೈ 25ರಂದು ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಲಿದೆ. ಆಗಸ್ಟ್‌ 25ರಂದು ಸಿನಿಮಾ ತೆರೆಕಾಣಲಿದೆ.

Previous articleKRG ಸ್ಟುಡಿಯೋಸ್‌ 6ನೇ ವಾರ್ಷಿಕೋತ್ಸವ | TVF ಜೊತೆ ಕೈಜೋಡಿಸಿದ ಸಂಸ್ಥೆ
Next articleತರ್ಲೆ, ತಾಪತ್ರಯ, ಪೋಲಿತನದ ಹಾಸ್ಟೆಲ್‌ ಹುಡುಗರ ಹೊಸತನದ ಕತೆ

LEAVE A REPLY

Connect with

Please enter your comment!
Please enter your name here