ಮುಂಬೈ ಮೂಲದ ಮಾಡೆಲ್ – ನಟಿ ಅಲೀನಾ ರೈ ಕೇವಲ ಬಾಹ್ಯ ಸೌಂದರ್ಯವನ್ನು ಆಧರಿಸಿ ಇತರರ ಬಗ್ಗೆ  ನಿರ್ಣಯಗಳನ್ನು ತೆಗೆದುಕೊಳ್ಳಬಾರದು ಎಂದಿದ್ದಾರೆ.

ರೂಪದರ್ಶಿ, ನಟಿ ಅಲೀನಾ ರೈ ಸೋಷಿಯಲ್ ಮೀಡಿಯಾ ಸ್ಟಾರ್‌! ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಗಟ್ಟಲೆ ಫಾಲೋವರ್ಸ್ ಹೊಂದಿದ್ದಾರೆ. ಮುಂಬೈ ಮೂಲದ ಅಲೀನಾ ರೈಯನ್ನು ಇದಕ್ಕಿಂತಲೂ ಚೆನ್ನಾಗಿ ವಿವರಿಸಬೇಕೆಂದರೆ ಅದು, ಈಕೆಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರೊಂದಿಗೆ ಇರುವ ಹೋಲಿಕೆ. ಇದೇ ಕಾರಣಕ್ಕೆ ಹಿಂದೆ ವೈರಲ್ ಆಗಿದ್ದ ರೈ, ಇತ್ತೀಚೆಗೆ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾರೆ. ಆದರೆ, ತನ್ನನ್ನು ಕೇವಲ ಕತ್ರಿನಾ ಕೈಫ್ ಅವರಂತೆ ಕಾಣುತ್ತೇನೆ ಎಂಬ ಕಾರಣಕ್ಕೆ ಇಷ್ಟಪಡುವ ಅಥವಾ ಟೀಕೆ ಮಾಡುವ ಜನರ ಬಗ್ಗೆ ಅಲೀನಾ ಅವರಿಗೆ ಅಸಮಾಧಾನವಿದೆ.

“ಈ ಯಾವುದೇ ಸಾಮ್ಯತೆಗೆ ನಾನು ಕಾರಣ ಅಲ್ಲ.  ನಾವಿಬ್ಬರೂ ನಮ್ಮದೇ ಆದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು. ಸ್ವಲ್ಪ ಸಮಯದ ನಂತರ ಜನರು ಅದನ್ನು ಗೌರವಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಆಕೆ  ಅಭಿಪ್ರಾಯಪಟ್ಟಿದ್ದಾರೆ. “ಸೆಲೆಬ್ರಿಟಿಗಳ ಅಪಿಯರೆನ್ಸ್ ತನ್ನದೇ ಆದ ಸಾಧಕ -ಬಾಧಕಗಳನ್ನು ಹೊಂದಿದ್ದರೂ, ಇದಕ್ಕಾಗಿ ಡೊಪ್ಪೆಲ್‌ ಗ್ಯಾಂಗರ್ ಎಂಬ ಪದ ಬಳಕೆ ನನಗೆ ಅಷ್ಟಾಗಿ ಸರಿ ಎನಿಸುತ್ತಿಲ್ಲ. ಹೀಗೆ  ವ್ಯಾಖ್ಯಾನಿಸುವುದು ತಪ್ಪು” ಎಂದಿದ್ದಾರೆ ಅಲೀನಾ. “ಡೊಪ್ಪೆಲ್‌ ಗ್ಯಾಂಗರ್ ಎಂಬ ಈ ಪದದಿಂದ ನನಗೆ ತುಂಬಾ ಅನಾನುಕೂಲವಾಗಿದೆ ಮತ್ತು ನಮ್ಮ ದೃಷ್ಠಿಕೋನ ಬದಲಾಗಬೇಕು. ಕೇವಲ ಸೌಂದರ್ಯ ನಮ್ಮ ವ್ಯಕ್ತಿತ್ವನ್ನು ನಿರ್ಣಯಿಸಬಾರದು. ನಾವೆಲ್ಲರೂ ವ್ಯಕ್ತಿಗತವಾಗಿ ಈ ಸಮಾಜಕ್ಕೆ ಏನನ್ನಾದರೂ ನೀಡಲು ಇಲ್ಲಿದ್ದೇವೆಯೇ ಹೊರತು ಕೇವಲ ನಮ್ಮ ಸೌಂದರ್ಯದಿಂದ ಅಲ್ಲ” ಎಂದು ರೈ ಹೇಳುತ್ತಾರೆ. ಅಲೀನಾ ರೈ ಅವರು ರಾಪರ್ ಬಾದ್‌ಶಾ ಅವರ ‘ಕಮಾಲ್ ಹೈ’ ಹಾಡಿನ ಮ್ಯೂಸಿಕ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. “ನಾನು ಮನರಂಜನಾ ಉದ್ಯಮವನ್ನು ಪ್ರೀತಿಸುತ್ತೇನೆ ಮತ್ತು ಕ್ಯಾಮರಾ ಮುಂದೆ ಇರುವುದು ನನ್ನ ಸಂತೋಷ, ನನ್ನ ವಿಶ್ರಾಂತಿ ಮತ್ತು ನನ್ನದೇ ಆದ ರೀತಿಯಲ್ಲಿ ಅದು ಫನ್ ಕೂಡ. ಹಾಗಾಗಿ ನನ್ನ ವ್ಯಕ್ತಿತ್ವವನ್ನು ಮನರಂಜನೆ ಮೂಲಕ ತೋರಿಸುತ್ತೇನೆ ಎನ್ನುತ್ತಾರೆ ಅಲೀನಾ ರೈ.

LEAVE A REPLY

Connect with

Please enter your comment!
Please enter your name here