ಕನ್ನಡದ ಚಿತ್ರನಿರ್ಮಾಣ, ವಿತರಕ ಸಂಸ್ಥೆ KRG ಸ್ಟುಡಿಯೋಸ್‌ ದಕ್ಷಿಣ ಭಾರತದ TVF ಮೋಷನ್‌ ಪಿಕ್ಚರ್ಸ್‌ನೊಂದಿಗೆ ಕೈಜೋಡಿಸಿದೆ. KRG ಆರನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ನೂತನ ಸಹಯೋಗಕ್ಕೆ ಮುಂದಾಗಿದೆ.

ಕನ್ನಡದ ಪ್ರಮುಖ ಚಿತ್ರನಿರ್ಮಾಣ ಸಂಸ್ಥೆಗಳಲ್ಲೊಂದಾದ KRG ಸ್ಟುಡಿಯೋಸ್‌ಗೆ ಈಗ 6ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ. ಈ ಸಂದರ್ಭದಲ್ಲಿ KRGಯವರು ದಕ್ಷಿಣ ಭಾರತದ ಹೆಸರಾಂತ ಚಿತ್ರನಿರ್ಮಾಣ ಸಂಸ್ಥೆ TVF ಮೋಷನ್‌ ಪಿಕ್ಚರ್ಸ್‌ನೊಂದಿಗೆ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ಎರಡೂ ಚಿತ್ರನಿರ್ಮಾಣ ಸಂಸ್ಥೆಗಳು ಜೊತೆಗೂಡಿ ಸಿನಿಮಾ ನಿರ್ಮಿಸಲಿವೆ. KRG ಸ್ಟುಡಿಯೋಸ್‌ನ ಕಾರ್ತೀಕ್‌ ಗೌಡ ಈ ಬಗ್ಗೆ ಮಾತನಾಡಿ, ‘6 ವರ್ಷಗಳ ಹಿಂದೆ ನಾವು ಸಂಸ್ಥೆ ಆರಂಭಿಸಿದ್ದೆವು. ಕನ್ನಡ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಅರ್ಥಪೂರ್ಣ ಸಿನಿಮಾಗಳನ್ನು ನಿರ್ಮಿಸಿದ್ದೇವೆ. TVFನೊಂದಿಗಿನ ನಮ್ಮ ಸಹಯೋಗದಿಂದ ಮತ್ತಷ್ಟು ಉತ್ತಮ ಹಾಗೂ ಸದಭಿರುಚಿಯ ಸಿನಿಮಾಗಳು ತಯಾರಾಗಲಿವೆ’ ಎನ್ನುತ್ತಾರೆ.

TVF ಸಂಸ್ಥೆ ಸಂಸ್ಫಾಪಕ ಅರುಣಭ್‌ ಕುಮಾರ್‌ ಅವರು ಈ ಸಹಯೋಗದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ. ‘ವೈವಿಧ್ಯಮಯ ಕತೆಗಳನ್ನು ತೆರೆಗೆ ತರುವ ಉದ್ದೇಶದಿಂದ KRG ಜೊತೆ ಕೈಜೋಡಿಸಿದ್ದೇವೆ. ಅವರೊಂದಿಗೆ ಪಾಲುದಾರರಾಗಲು ಹೆಮ್ಮೆಯಾಗುತ್ತದೆ. ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಒಳ್ಳೆಯ ಚಿತ್ರಗಳನ್ನು ನಿರ್ಮಿಸಲು ಪ್ರಯತ್ನಿಸುತ್ತೇವೆ’ ಎನ್ನುತ್ತಾರೆ ಅರುಣಭ್‌. ಹತ್ತು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ TVF ಸಿದ್ಧಮಾದರಿಯ ಚಿತ್ರಗಳ ಮಾದರಿಯನ್ನು ಮುರಿದು ವಿಭಿನ್ನ ಚಿತ್ರಗಳನ್ನು ಮಾಡಿದೆ. KRG ಸ್ಟುಡಿಯೋಸ್‌ ಕಾರ್ತೀಕ್‌ ಗೌಡ ಮತ್ತು ಯೋಗಿ ಜಿ ರಾಜ್‌ ಜೊತೆಗೂಡಿ ಹುಟ್ಟುಹಾಕಿರುವ ಸಂಸ್ಥೆ. ರತ್ನನ್‌ ಪ್ರಪಂಚ, ಗುರುದೇವ್‌ ಹೊಯ್ಸಳ ಸೇರಿದಂತೆ ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ಅವರು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.

Previous articleಅನಿರುದ್ಧ್‌ ನೂತನ ಸಿನಿಮಾ | ವಿಷ್ಣು ಸ್ಮಾರಕದಲ್ಲಿ ಭಾರತಿ ವಿಷ್ಣುವರ್ಧನ್‌ರಿಂದ ಚಾಲನೆ
Next article‘ಡ್ರೀಮ್‌ ಗರ್ಲ್‌ 2’ ಟ್ರೈಲರ್‌ | ಆಯುಷ್ಮಾನ್‌ ಖುರಾನಾ ನಟನೆಯ ಹಿಂದಿ ಸಿನಿಮಾ

LEAVE A REPLY

Connect with

Please enter your comment!
Please enter your name here