ಗಣೇಶ್‌ ಪರಶುರಾಮ್‌ ನಿರ್ದೇಶನದ ‘ಬ್ಯಾಂಗ್‌’ ಕನ್ನಡ ಸಿನಿಮಾದ ‘ಧಗ ಧಗ’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ನಾಗಾರ್ಜುನ್‌ ಶರ್ಮಾ ರಚನೆಯ ಈ ಗೀತೆಯನ್ನು ಚೇತನ್‌ ಗಂಧರ್ವ ಮತ್ತು ಚಾರ್ವಿ ಮುರಳೀಧರ್‌ ಹಾಡಿದ್ದಾರೆ. ಸಂಗೀತ ರಿತ್ವಿಕ್‌ ಮುರಳೀಧರ್‌ ಅವರದು.

ಬಹುಭಾಷಾ ನಟಿ ಶಾನ್ವಿ ಶ್ರೀವಾತ್ಸವ್‌ ಮತ್ತು ಸಂಗೀತ ಸಂಯೋಜಕ ರಘು ದೀಕ್ಷಿತ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಬ್ಯಾಂಗ್‌’ ಸಿನಿಮಾದ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ನಾಗಾರ್ಜುನ್‌ ಶರ್ಮಾ ರಚನೆಯ ‘ಧಗ ಧಗ’ ಗೀತೆಗೆ ರಿತ್ವಿಕ್‌ ಮುರಳೀಧರ್‌ ಸಂಗೀತ ಸಂಯೋಜನೆ ಇದ್ದು, ಚೇತನ್‌ ಗಂಧರ್ವ ಮತ್ತು ಚಾರ್ವಿ ಮುರಳೀಧರ್‌ ಹಾಡಿದ್ದಾರೆ. ನಿರ್ದೇಶಕ ಗಣೇಶ್‌ ಪರಶುರಾಮ್‌ ಹೇಳುವಂತೆ ಇದೊಂದು ಡಾರ್ಕ್‌ ಕಾಮಿಡಿ ಗ್ಯಾಂಗ್‌ಸ್ಟರ್‌ ಸಿನಿಮಾ. ಶಾನ್ವಿ (ಲಿಯೋನಾ) ಮತ್ತು ರಘು ದೀಕ್ಷಿತ್‌ (ಡಾನ್‌ ಡ್ಯಾಡಿ) ಗ್ಯಾಂಗ್‌ಸ್ಟರ್‌ಗಳಾಗಿ ಕಾಣಿಸಿಕೊಂಡಿದ್ದಾರೆ. ಸಾತ್ವಿಕ್‌, ರಿತ್ವಿಕ್‌ ಮುರಳೀಧರ್‌, ನಾಟ್ಯ ರಂಗ ಇತರೆ ಪ್ರಮುಖ ಕಲಾವಿದರು. ಗಾಯಕ, ಸಂಗೀತ ಸಂಯೋಜಕ ರಘು ದೀಕ್ಷಿತ್‌ ಅವರಿಗೆ ನಟನಾಗಿ ಇದು ಮೊದಲ ಸಿನಿಮಾ.

ಮೂವರು ಸ್ನೇಹಿತರಿಗೆ ತಮ್ಮ ಬಳಿಯ ದುಬಾರಿ ವಸ್ತು ಇರುವ ಬ್ಯಾಗ್‌ ರಕ್ಷಿಸುವ ಹೊಣೆಗಾರಿಕೆ ಹೆಗಲೇರುತ್ತದೆ. ಇದಕ್ಕಾಗಿ ಕ್ರಿಮಿನಲ್‌ಗಳು ಅವರ ಹಿಂದೆ ಬೀಳುತ್ತಾರೆ. ಈ ಬ್ಯಾಗ್‌ ಜೊತೆ ತಮ್ಮನ್ನೂ ರಕ್ಷಿಸಿಕೊಳ್ಳುವಲ್ಲಿ ಸ್ನೇಹಿತರು ಏನೆಲ್ಲಾ ಪಡಿಪಾಟಲು ಪಡುತ್ತಾರೆ ಎನ್ನುವುದು ಚಿತ್ರದ ಕಥಾವಸ್ತು. ಟೀಸರ್‌ ಮೂಲಕ ಗಮನ ಸೆಳೆದಿದ್ದ ಸಿನಿಮಾ ಈಗ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಗೊಳಿಸಿದೆ. ದುಬಾರಿ ವೆಚ್ಚದ ಚಿತ್ರವನ್ನು UK ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದೆ. ಜಹಾಂಗೀರ್‌, ನಾಗೇಂದ್ರ ಷಾ ಚಿತ್ರದ ಇತರೆ ಪ್ರಮುಖ ಕಲಾವಿದರು. ಉದಯ ಲೀಲಾ ಛಾಯಾಗ್ರಹಣ, ವಿಜೇತ್‌ ಚಂದ್ರ ಸಂಕಲನ ಚಿತ್ರಕ್ಕಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪರ ಯೋಜನೆ.

Previous article‘Social Currency’ Netflix ಶೋ | ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಸಾಕ್ಷಿ ಚೋಪ್ರಾ
Next article

LEAVE A REPLY

Connect with

Please enter your comment!
Please enter your name here