ಕೋವಿಡ್‌ ಆತಂಕದಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಮುಂದಕ್ಕೆ ಹಾಕಿದ್ದರೆ ಅಕ್ಷಯ್‌ ಕುಮಾರ್‌ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಫರ್ಹದ್‌ ಸಮ್ಜಿ ನಿರ್ದೇಶನದ ‘ಬಚ್ಚನ್‌ ಪಾಂಡೆ’ ಸಿನಿಮಾ ಮಾರ್ಚ್‌ 18ರಂದು ಥಿಯೇಟರ್‌ಗೆ ಬರಲಿದೆ.

ಕಳೆದ ವರ್ಷ ಕೋವಿಡ್‌ ಸೆಕೆಂಡ್‌ ವೇವ್‌ ನಂತರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ಅಕ್ಷಯ್‌ ಕುಮಾರ್‌ ಅವರ ‘ಬೆಲ್‌ ಬಾಟಮ್‌’. ಈಗಲೂ ಅಕ್ಷಯ್‌ ಕುಮಾರ್‌ ‘ಬಚ್ಚನ್‌ ಪಾಂಡೆ’ ಚಿತ್ರದೊಂದಿಗೆ ಥಿಯೇಟರ್‌ಗೆ ಬರಲು ಸಜ್ಜಾಗಿದ್ದಾರೆ. ಕೋವಿಡ್‌ ಭಯದಿಂದ ‘RRR’, ‘ಜೆರ್ಸಿ’ ಸಿನಿಮಾಗಳ ಬಿಡುಗಡೆ ಪೋಸ್ಟ್‌ಪೋನ್‌ ಆದರೆ ಅಕ್ಷಯ್‌ ಮತ್ತು ಅವರ ತಂಡ ಸಿನಿಮಾ ಬಿಡುಗಡೆಗೆ ಧೈರ್ಯ ಮಾಡಿದೆ. ಅಕ್ಷಯ್‌ ಟ್ವಿಟರ್‌ನಲ್ಲಿ ಚಿತ್ರದ ಎರಡು ನೂತನ ಪೋಸ್ಟರ್‌ಗಳೊಂದಿಗೆ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಫರ್ಹದ್‌ ಸಮ್ಜಿ ನಿರ್ದೇಶನದ ‘ಬಚ್ಚನ್‌ ಪಾಂಡೆ’ ಚಿತ್ರದಲ್ಲಿ ಕೃತಿ ಸನೂನ್‌, ಜಾಕ್ವಲಿನ್‌ ಫರ್ನಾಂಡಿಸ್‌, ಆರ್ಷದ್‌ ವಾರ್ಸಿ, ಪಂಕಜ್‌ ತ್ರಿಪಾಟಿ, ಪ್ರತೀಕ್‌ ಬಬ್ಬರ್‌ ನಟಿಸಿದ್ದಾರೆ.

2021ರಲ್ಲಿ ಅಕ್ಷಯ್‌ರ ‘ಸೂರ್ಯವಂಶಿ’ ಸಿನಿಮಾ ಜನರನ್ನು ಮರಳಿ ಥಿಯೇಟರ್‌ಗೆ ಕರೆತಂದಿತ್ತು. ಬಾಲಿವುಡ್‌ ಹಂಗಾಮಾ ವರದಿಯಂತೆ ಈ ಸಿನಿಮಾ 196 ಕೋಟಿ ರೂಪಾಯಿ ಗಳಿಸಿದೆ. ಇನ್ನು 2022ರಲ್ಲಿ ಅವರ ಹಲವು ಚಿತ್ರಗಳು ತೆರೆಗೆ ಸಿದ್ಧವಾಗುತ್ತಿವೆ. ಅಕ್ಷಯ್‌ ಕುಮಾರ್‌ ಅವರ ಪೃಥ್ವಿರಾಜ್‌, ರಕ್ಷಾಬಂಧನ್‌, ರಾಮ್‌ ಸೇತು, OMG 2, ಗೋರ್ಖಾ ಸಿನಿಮಾಗಳು ತೆರೆಗೆ ಸಾಲುಗಟ್ಟಿವೆ. ಈ ಮೂಲಕ ಬಾಲಿವುಡ್‌ ಸಿನಿಮಾ ಮಾರುಕಟ್ಟೆಗೆ ಅಕ್ಷಯ್‌ ಸಿನಿಮಾಗಳು ಬಲ ತುಂಬಲಿವೆ.

LEAVE A REPLY

Connect with

Please enter your comment!
Please enter your name here