ಮನೀಶ್‌ ಶರ್ಮಾ ನಿರ್ದೇಶನದ ‘ಟೈಗರ್ ‌3’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಇಮ್ರಾನ್‌ ಹಶ್ಮಿ ಮುಖ್ಯ ಪಾತ್ರಗಳಲ್ಲಿರುವ ಸಿನಿಮಾದ ಟ್ರೇಲರ್‌ ಆಕ್ಷನ್‌ ತುಣುಕುಗಳಿಂದ ಗಮನ ಸೆಳೆಯುತ್ತದೆ. ಇದೇ ನವೆಂಬರ್‌ 12ರಂದು ಸಿನಿಮಾ ತೆರೆಕಾಣಲಿದೆ.

ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್‌ ಹಶ್ಮಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಟೈಗರ್‌ 3’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಹೈ-ಆಕ್ಟೇನ್-ಆಕ್ಷನ್ ಡ್ರಾಮಾವನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ. ಟ್ರೇಲರ್‌ನಲ್ಲಿ ಸಲ್ಮಾನ್‌ ಖಾನ್ ಅವರು RAW (The Research and Analysis Wing) ‘ಟೈಗರ್ ಸಿಂಗ್ ರಾಥೋಡ್’ ಆಗಿ ಪಾತ್ರ ನಿರ್ವಹಿಸಿದ್ದಾರೆ. ಮಗನನ್ನು ಗಾಢವಾಗಿ ಪ್ರೀತಿಸುವ ತಂದೆಯಾಗಿ ಅವರ ಪಾತ್ರಕ್ಕೆ ಎಮೋಷನಲ್‌ ಟಚ್‌ ಕೂಡ ಇದೆ. ಕತ್ರಿನಾ ಕೈಫ್ ಅವರು ಸಲ್ಮಾನ್‌ ಖಾನ್‌ ಪತ್ನಿ ಹಾಗೂ ಮಾಜಿ ISI ಗೂಢಚಾರ ಅಧಿಕಾರಿ ‘ಜೋಯಾ’ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಅವರ ‘ಜಬ್ ತಕ್ ಟೈಗರ್ ಮಾರಾ ನಹೀ, ತಬ್ ತಕ್ ಟೈಗರ್ ಹಾರಾ ನಹೀ’ ಎಂಬ ಸಂಭಾಷಣೆ ಗಮನ ಸೆಳೆಯುತ್ತದೆ. ದೇಶಕ್ಕಾಗಿ ಕುಟುಂಬವನ್ನೇ ಮುಡಿಪಾಗಿಟ್ಟು ಪತಿ, ಪತ್ನಿ ಹೋರಾಡುವ ಕಥಾಹಂದರ ಚಿತ್ರದ್ದು. ಖಳನಾಯಕನಾಗಿ ಇಮ್ರಾನ್ ಹಶ್ಮಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ‘ಏಕ್ ಥಾ ಟೈಗರ್’ (2012) ಮತ್ತು ‘ಟೈಗರ್ ಜಿಂದಾ ಹೈ’ (2017) ಚಿತ್ರಗಳ ಸೀಕ್ವೆಲ್‌. ಈ ಚಲನಚಿತ್ರವನ್ನು Yash Raj Films ಬ್ಯಾನರ್‌ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ. ಪ್ರೀತಮ್‌ ಸಂಗೀತ ಸಂಯೋಜಿಸಿದ್ದು, ಇರ್ಷಾದ್ ಕಾಮಿಲ್, ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ಚಿತ್ರವು ನವೆಂಬರ್ 12, 2023 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here