ಪ್ರಶಾಂತ್‌ ನೀಲ್‌ ಕತೆ, ಡಾ ಸೂರಿ ನಿರ್ದೇಶನದ ‘ಬಘೀರ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶ್ರೀಮುರಳಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರುಕ್ಮಿಣಿ ವಸಂತ್‌ ಅವರಿಗೆ ಜೋಡಿಯಾಗಿದ್ದಾರೆ. Hombale films ಬ್ಯಾನರ್‌ ಚಿತ್ರವನ್ನು ನಿರ್ಮಿಸುತ್ತಿದೆ.

ಶ್ರೀಮುರಳಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಬಘೀರ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾಗೆ ಪ್ರಶಾಂತ್‌ ನೀಲ್‌ ಕತೆ, ಚಿತ್ರಕಥೆ ಬರೆದಿದ್ದು, ಡಾ ಸೂರಿ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದು, ಪ್ರಕಾಶ್ ರಾಜ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಟೀಸರ್‌ನಲ್ಲಿ ಶ್ರೀಮುರಳಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಆಕ್ಷನ್‌ ಥ್ರಿಲ್ಲರ್‌ ಆಗಿದ್ದು,
ಟೀಸರ್‌ನಲ್ಲಿ ಯಾವುದೇ ಡೈಲಾಗ್‌ಗಳಿಲ್ಲದೇ ಸಂಪೂರ್ಣ ಸಾಹಸ ದೃಶ್ಯಗಳನ್ನು ತೋರಿಸಲಾಗಿದೆ. ಶ್ರೀಮುರಳಿ ‘ಬಘೀರ’ನಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘು, ಅಚ್ಯುತ್‌ ಕುಮಾರ್, ಗರುಡ ರಾಮ್‌ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾವನ್ನು ‘ಕೆಜಿಎಫ್’, ‘ಕಾಂತಾರ’, ‘ಸಲಾರ್‌’ ಸಿನಿಮಾಗಳ ಖ್ಯಾತಿಯ Hombale Films ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಚಲನಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ, ಎ ಜೆ ಶೆಟ್ಟಿ ಛಾಯಾಗ್ರಹಣ, ಪ್ರಣವ್ ಶ್ರೀ ಪ್ರಸಾದ್ ಸಂಕಲನವಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಸಿನಿಮಾ 2024ರಲ್ಲಿ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here