ಲೋಕೇಶ್‌ ಕನಗರಾಜ್‌ ನಿರ್ದೇಶನದಲ್ಲಿ ವಿಜಯ್‌ ನಟಿಸಿರುವ ‘ಲಿಯೋ’ ಬಹುನಿರೀಕ್ಷಿತ ತಮಿಳು ಸಿನಿಮಾ. ಚಿತ್ರದ ಕನ್ನಡ ಅವತರಣಿಕೆಯೂ ತೆರೆಕಾಣಲಿದೆ. ಇದಕ್ಕೆ ಪೂರ್ವತಯಾರಿ ಎನ್ನುವಂತೆ ಚಿತ್ರತಂಡ ‘ಲಿಯೋ’ ಕನ್ನಡ ಪೋಸ್ಟರ್‌ ರಿಲೀಸ್‌ ಆಗಿದೆ.

ವಿಜಯ್‌ ಅಭಿನಯದ ಬಹುನಿರೀಕ್ಷಿತ ‘ಲಿಯೋ’ ತಮಿಳು ಸಿನಿಮಾ ಕನ್ನಡ ಅವತರಣಿಕೆಯಲ್ಲೂ ತೆರೆಗೆ ಬರಲಿದೆ. ಗಣೇಶನ ಹಬ್ಬದ ಸಂದರ್ಭದಲ್ಲಿ ಚಿತ್ರತಂಡ ‘ಲಿಯೋ’ ಕನ್ನಡ ಪೋಸ್ಟರ್‌ ಬಿಡುಗಡೆಗೊಳಿಸಿದೆ. ಹಲವು ಬ್ಲಾಕ್​ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ಲೋಕೇಶ್ ಕನಗರಾಜ್ ನಿರ್ದೇಶನದ ಚಿತ್ರವಿದು. ಚಿತ್ರವನ್ನು ಕನ್ನಡದಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆದಿದೆ. ಇದಕ್ಕೆ ಪೂರ್ವತಯಾರಿ ಎನ್ನುವಂತೆ ಚಿತ್ರತಂಡ ಕನ್ನಡ ಪೋಸ್ಟರ್‌ ಡಿಸೈನ್‌ ಮಾಡಿ ಪ್ರೊಮೋಷನ್‌ಗೆ ಚಾಲನೆ ನೀಡಿದೆ.

‘ಲಿಯೋ’ ಅಕ್ಟೋಬರ್ 19ರಂದು ಮೂಲ ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. ತ್ರಿಶಾ, ಸಂಜಯ್ ದತ್, ಗೌತಮ್ ಮೆನನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಮ್ಯಾಥ್ಯೂ ಥಾಮಸ್, ಪ್ರಿಯಾ ಆನಂದ್, ಸ್ಯಾಂಡಿ, ಜನನಿ, ಅಭಿರಾಮಿ ವೆಂಕಟಾಚಲಂ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗೆ ಅನಿರುದ್ಧ ರವಿಚಂದರ್‌ ಸಂಗೀತ ಸಂಯೋಜಿಸಿದ್ದು, ಮನೋಜ್ ಪರಮಹಂಸ ಛಾಯಾಗ್ರಹಣ, ಫಿಲೋಮಿನ್ ರಾಜ್ ಸಂಕಲನವಿದೆ. 7 Screen Studio ಮತ್ತು The Route ಬ್ಯಾನರ್‌ನಡಿ ಸಿನಿಮಾ ನಿರ್ಮಾಣವಾಗಿದೆ. ಅಕ್ಟೋಬರ್‌ 19ರಂದು ಶಿವರಾಜಕುಮಾರ್‌ ಅಭಿನಯದ ‘ಘೋಸ್ಟ್‌’ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.

LEAVE A REPLY

Connect with

Please enter your comment!
Please enter your name here