ತರುಣ್‌ ಸುಧೀರ್‌ ನಿರ್ದೇಶನದಲ್ಲಿ ದರ್ಶನ್‌ ನಟಿಸಿರುವ ಬಹುನಿರೀಕ್ಷಿತ ‘ಕಾಟೇರ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರದ ಮೂಲಕ ಆರಾಧನಾ ನಾಯಕಿಯಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಇದೇ ಡಿಸೆಂಬರ್‌ 29ಕ್ಕೆ ಸಿನಿಮಾ ತೆರೆಕಾಣಲಿದೆ.

ದರ್ಶನ್‌, ಆರಾಧನಾ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ‘ಕಾಟೇರ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಲನಚಿತ್ರವನ್ನು ತರುಣ್ ಸುಧೀರ್ ನಿರ್ದೆಶಿಸಿದ್ದಾರೆ. ‘ಕಾಟೇರ’ ದರ್ಶನ್ ಅವರ ಈ ವರ್ಷದ ಎರಡನೇ ಚಿತ್ರ. ವರ್ಷದ ಆರಂಭದಲ್ಲಿ ವಿ ಹರಿಕೃಷ್ಣ ನಿರ್ದೇಶನದ ‘ಕ್ರಾಂತಿ’ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಚಿತ್ರ ಜನವರಿ 26ರಂದು ತೆರೆಗೆ ಬಂದಿತ್ತು. ಮಾಲಾಶ್ರೀ ಮತ್ತು ನಿರ್ಮಾಪಕ ರಾಮು ಅವರ ಪುತ್ರಿ ಆರಾಧನಾ ರಾಮ್ ನಾಯಕಿಯಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಜಗಪತಿ ಬಾಬು, ಅವಿನಾಶ್ ಮತ್ತು ಶೃತಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.

https://youtu.be/L1KYlnMRtqc

ಚಿತ್ರದಲ್ಲಿ ದರ್ಶನ್, ಜಮೀನ್ದಾರನ ವಿರುದ್ಧ ಸೆಡ್ಡು ಹೊಡೆಯುವ ಅಕ್ಕಸಾಲಿಗನಾಗಿ ನಟಿಸಿದ್ದಾರೆ. ಈ ಚಿತ್ರವು 1970ರ ದಶಕದ ಗ್ರಾಮೀಣ ಕರ್ನಾಟಕದ ಕಥಾಹಂದರ. ತರುಣ್ – ದರ್ಶನ್ ಅವರ ಎರಡನೇ ಸಹಯೋಗದಲ್ಲಿ ‘ಕಾಟೇರ’ ಮೂಡಿಬಂದಿದೆ. ಇವರಿಬ್ಬರು ಈ ಹಿಂದೆ ‘ರಾಬರ್ಟ್‌’ ಚಿತ್ರದಲ್ಲಿ ಜೊತೆಯಾಗಿದ್ದರು. ಇದು 2021ರ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತ್ತು. ‘ಕಾಟೇರ’ ದರ್ಶನ್ ಅವರ 56ನೇ ಚಿತ್ರ. Rockline Entertainments Pvt. Ltd ಬ್ಯಾನರ್‌ ಅಡಿ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿರುವ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ, ಸುಧಾಕರ್‌ ಎಸ್‌ ರಾಜ್‌ ಛಾಯಾಗ್ರಹಣ, ಕೆ ಎಮ್‌ ಪ್ರಕಾಶ್‌ ಸಂಕಲನವಿದೆ. ಇದೇ ಡಿಸೆಂಬರ್‌ 29ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here