13ನೇ IFFM ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಟ ಪುರಸ್ಕಾರಗಳು ’83’ ಹಿಂದಿ ಚಿತ್ರಕ್ಕೆ ಸಂದಿವೆ. ‘Mumbai Diaries 26/11’ ಅತ್ಯುತ್ತಮ ಸರಣಿಯಾಗಿ ಆಯ್ಕೆಯಾಗಿದ್ದರೆ, ಇದೇ ಸರಣಿಯ ಉತ್ತಮ ನಟನೆಗೆ ಮೋಹಿತ್‌ ರೈನಾ ಪ್ರಶಸ್ತಿ ಪಡೆದಿದ್ದಾರೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಫಿಲ್ಮ್‌ ಫೆಸ್ಟಿವಲ್‌ ನಡೆಯುತ್ತಿದ್ದು, ಅಲ್ಲಿ ಭಾರತದ ಅತ್ಯುತ್ತಮ ಸಿನಿಮಾ, ವೆಬ್‌ ಸರಣಿಗಳು ಪ್ರದರ್ಶನಗೊಳ್ಳುತ್ತಿವೆ. ಫೆಸ್ಟಿವಲ್‌ನ ಬಹುಮುಖ್ಯ ಅಂಗವಾಗಿ ಪ್ರಶಸ್ತಿ ಸಮಾರಂಭ ಆಯೋಜನೆಗೊಳ್ಳುತ್ತದೆ. ಈ ಬಾರಿಯ 13ನೇ ಪ್ರಶಸ್ತಿ ಸಮಾರಂಭ ನಡೆದಿದ್ದು, ರಣವೀರ್‌ ಸಿಂಗ್‌ ’83’ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪುರಸ್ಕಾರ ಪಡೆದಿದ್ದಾರೆ. ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆದ ‘Mumbai Diaries 26/11’ ಅತ್ಯುತ್ತಮ ಸರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಜನಪ್ರಿಯ ಟೀವಿ ನಿರೂಪಕ ರಿತ್ವಿಕ್‌ ಧಂಜಿಯಾನಿ ನಿರೂಪಣೆಯಲ್ಲಿ ಪ್ರಶಸ್ತಿ ಸಮಾರಂಭ ನಡೆಯಿತು.

IFFM ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ : ಅತ್ಯುತ್ತಮ ಸಿನಿಮಾ – 83, ಅತ್ಯುತ್ತಮ ನಿರ್ದೇಶನ – ಶೂಜಿತ್‌ ಸರ್ಕಾರ್‌ (ಸರ್ದಾರ್‌ ಉಧಾಮ್‌) ಮತ್ತು ಅಪರ್ಣಾ ಸೇನ್‌ (The Rapist), ಅತ್ಯುತ್ತಮ ನಟ – ರಣವೀರ್‌ ಸಿಂಗ್‌ (83), ಅತ್ಯುತ್ತಮ ನಟಿ – ಶೆಫಾಲಿ ಷಾ (ಜಲ್ಸಾ), ಅತ್ಯುತ್ತಮ ಸರಣಿ – Mumbai Diaries 26/11, ಅತ್ಯುತ್ತಮ ನಟ (ವೆಬ್‌ ಸರಣಿ) – ಮೋಹಿತ್‌ ರೈನಾ (Mumbai Diaries 26/11), ಅತ್ಯುತ್ತಮ ನಟಿ (ವೆಬ್‌ ಸರಣಿ) – ಸಾಕ್ಷಿ ತನ್ವಾರ್‌ (ಮಾಯಿ), ಅತ್ಯುತ್ತಮ Indie ಫಿಲ್ಮ್‌ – ಜಗ್ಗಿ, ಅತ್ಯುತ್ತಮ ಸಿನಿಮಾ (Subcontinent) – Joyland, ಜೀವಮಾನ ಸಾಧನೆ ಪುರಸ್ಕಾರ – ಕಪಿಲ್‌ ದೇವ್‌, Disruptor in Cienma Award – ವಾಣಿ ಕಪೂರ್‌ (ಚಂಡೀಘರ್‌ ಕರೆ ಆಶಿಕಿ), Equality in Cinema Award – ಜಲ್ಸಾ, Leadership in Cinema Award – ಅಭಿಷೇಕ್‌ ಬಚ್ಚನ್‌

LEAVE A REPLY

Connect with

Please enter your comment!
Please enter your name here