ಅಮಿತ್‌ ರೈ ನಿರ್ದೇಶನದ ‘OMG 2’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಅಕ್ಷಯ್‌ ಕುಮಾರ್‌ ಚಿತ್ರದಲ್ಲಿ ಶಿವನ ಧೂತನಾಗಿ ಕಾಣಿಸಿಕೊಂಡಿದ್ದಾರೆ. ಪಂಕಜ್‌ ತ್ರಿಪಾಠಿ, ಯಾಮಿ ಗೌತಮ್‌ ಪ್ರಮುಖ ಪಾತ್ರಗಳಲ್ಲಿರುವ ನಟಿಸಿರುವ ಸಿನಿಮಾ 11ರಂದು ತೆರೆಕಾಣಲಿದೆ.

ನಟ ಅಕ್ಷಯ್ ಕುಮಾರ್ ನಟಿಸಿರುವ ‘ಓ ಮೈ ಗಾಡ್ 2’ (OMG 2) ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದು 2012ರ ‘OMG’ ಚಿತ್ರದ ಮುಂದುವರಿದ ಭಾಗ. ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ಶಿವನ ಧೂತನಾಗಿ ಅಕ್ಷಯ್‌ ಕುಮಾರ್‌ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಮನುಷ್ಯನೊಬ್ಬ ತನ್ನ ಮಗನ ಶಿಕ್ಷಣದ ಹಕ್ಕಿಗಾಗಿ ಹೋರಾಡುವ ಕಥಾಹಂದರ. ಈ ಪಾತ್ರವನ್ನು ಪಂಕಜ್‌ ತ್ರಿಪಾಠಿ ನಿರ್ವಹಿಸಿದ್ದಾರೆ. ಅಶ್ಲೀಲ ಕೃತ್ಯಕ್ಕಾಗಿ ಶಾಲೆಯಿಂದ ಹೊರಹಾಕಲ್ಪಟ್ಟ ಮಗನ ಶಿಕ್ಷಣದ ಹಕ್ಕಿಗಾಗಿ ಹೋರಾಡುವ ಕಾಂತಿ ಶರಣ್‌ ಮುದ್ಗಲ್‌ನ (ಪಂಕಜ್ ತ್ರಿಪಾಠಿ) ಸಹಾಯಕ್ಕೆ ತನ್ನ ಸಂದೇಶವಾಹಕರಲ್ಲಿ ಒಬ್ಬರನ್ನು ಕಳುಹಿಸುವಂತೆ ಶಿವನು ತನ್ನ ನಿಷ್ಠಾವಂತ ನಂದಿಯನ್ನು ಕೇಳುವುದರೊಂದಿಗೆ ಟ್ರೈಲರ್‌ ಆರಂಭವಾಗುತ್ತದೆ.

ಕಾಂತಿ ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ್ದಾನೆ. ಆದರೆ ಅವನು ಪ್ರತಿವಾದಿ ಮತ್ತು ಆರೋಪಿ ಎರಡೂ ಆಗಿದ್ದಾನೆ. ಯಾಮಿ ಗೌತಮ್‌ ವಕೀಲರಾಗಿ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ತೊಂದರೆಗಳಿಂದ ಕಾಪಾಡುತ್ತಾ ಶಿವನ ಸಂದೇಶವಾಹಕ (ಅಕ್ಷಯ್‌ ಕುಮಾರ್), ಕಾಂತಿಗೆ ಸರಿಯಾದ ದಾರಿ ತೋರಿಸುತ್ತಾನೆ. ಈ ಚಿತ್ರವನ್ನು ಅಮಿತ್ ರೈ ನಿರ್ದೇಶಿಸಿದ್ದು, ಅಕ್ಷಯ್ ಕುಮಾರ್ ಅವರ ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್‌ ಅಡಿಯಲ್ಲಿ ನಿರ್ಮಾಣವಾಗಿದೆ. ರಮಾನಂದ್ ಸಾಗರ್‌ ಅವರ ‘ರಾಮಾಯಣ’ದಲ್ಲಿ ರಾಮನ ಪಾತ್ರ ವಹಿಸಿದ್ದ ಹಿರಿಯ ನಟ ಅರುಣ್ ಗೋವಿಲ್ ಅವರು ಚಿತ್ರದಲ್ಲಿ ಭಗವಂತ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 11ರಂದು ಸಿನಿಮಾ ತೆರೆಕಾಣಲಿದೆ.

Previous article‘ಘೂಮರ್‌’ ಟ್ರೈಲರ್‌ | ಬಾಲ್ಕಿ ನಿರ್ದೇಶನದ ಕ್ರೀಡಾ ಸಿನಿಮಾ ಆಗಸ್ಟ್‌ 11ಕ್ಕೆ
Next article‘ಗನ್ಸ್‌ ಅಂಡ್‌ ಗುಲಾಬ್ಸ್‌’ ಟ್ರೈಲರ್‌ | Netflix ಸರಣಿ ಆಗಸ್ಟ್‌ 18ರಿಂದ

LEAVE A REPLY

Connect with

Please enter your comment!
Please enter your name here