ಮಿಥುನ್‌ ಚಕ್ರವರ್ತಿ, ಶ್ರುತಿ ಹಾಸನ್‌, ಅರ್ಜನ್‌ ಬಾಜ್ವಾ ಅಭಿನಯದ ‘ಬೆಸ್ಟ್‌ ಸೆಲ್ಲರ್‌’ ಸೈಕಾಲಾಜಿಕಲ್‌ ಥ್ರಿಲ್ಲರ್‌ ಸರಣಿಯ ಟ್ರೈಲರ್‌ ಬಿಡುಗಡೆಯಾಗಿದೆ. ಮುಕುಲ್‌ ಅಭಯಂಕರ್‌ ನಿರ್ದೇಶನದ ಸರಣಿ ಫೆಬ್ರವರಿ 18ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಕುತೂಹಲಕಾರಿ ಪಾತ್ರಗಳು, ನಿರೀಕ್ಷಿಸದ ತಿರುವು, ರೋಚಕ ನಿರೂಪಣೆಯೊಂದಿಗಿನ ‘ಬೆಸ್ಟ್‌ ಸೆಲ್ಲರ್‌’ ಸರಣಿಯ ಟ್ರೈಲರ್‌ ಗಮನ ಸೆಳೆಯುತ್ತದೆ. ‘new-age nail-biting thriller’ ಎಂದು ಅಮೇಜಾನ್‌ ಪ್ರೈಮ್‌ ಈ ಸರಣಿಯನ್ನು ಕರೆದಿದೆ. ಜನಪ್ರಿಯ ಕಾದಂಬರಿಕಾರ (ಅರ್ಜುನ್‌ ಬಾಜ್ವಾ) ತನ್ನ ಮುಂದಿನ ಕಾದಂಬರಿಗಾಗಿ ವಸ್ತು ಹುಡುಕುತ್ತಿರುತ್ತಾನೆ. ಈ ಸಂದರ್ಭದಲ್ಲಿ ಆತನಿಗೆ ತನ್ನ ಅಭಿಮಾನಿ (ಶ್ರುತಿ ಹಾಸನ್‌) ಎದುರಾಗುತ್ತಾಳೆ. ಆಕೆಯ ನಿರ್ಲಕ್ಷ್ಯಿತ ಬಾಲ್ಯ, ಸಂಕಷ್ಟದ ಬದುಕೇ ಅವನ ಮುಂದಿನ ಕಾದಂಬರಿಗೆ ವಸ್ತು ಆಗುತ್ತದೆ. ಕಾದಂಬರಿ ಬರೆಯಲು ಶುರುವಾಗುತ್ತಿದ್ದಂತೆ ಅಲ್ಲಿನ ಪಾತ್ರಗಳು ಹಾಗೂ ನಿಜ ಬದುಕಿನ ವ್ಯಕ್ತಿಗಳ ಮಧ್ಯೆ ಸಂಬಂಧಗಳು ಏರ್ಪಡುತ್ತವೆ. ಈ ಸಂದರ್ಭದ ಆಗುಹೋಗುಗಳು ಸರಣಿಯ ಕಥಾವಸ್ತು ಎನ್ನುವುದು ಟ್ರೈಲರ್‌ನಿಂದ ತಿಳಿದುಬರುತ್ತದೆ.

ಮುಕುಲ್‌ ಅಭಯಂಕರ್‌ ನಿರ್ದೇಶನದ ‘ಬೆಸ್ಟ್‌ ಸೆಲ್ಲರ್‌’ ಅಮೇಜಾನ್‌ ಪ್ರೈಮ್‌ ವೀಡಿಯೋದಲ್ಲಿ ಫೆ.18ರಿಂದ ಸ್ಟ್ರೀಮ್‌ ಆಗಲಿದೆ. ಮಿಥುನ್‌ ಚಕ್ರವರ್ತಿ, ಶ್ರುತಿ ಹಾಸನ್‌, ಅರ್ಜನ್‌ ಬಾಜ್ವಾ, ಗೌಹರ್‌ ಖಾನ್‌, ಸತ್ಯಜಿತ್‌ ದುಬೆ, ಸೋನಾಲಿ ಕುಲಕರ್ಣಿ ಅಭಿನಯಿಸಿರುವ ಸರಣಿಗೆ ಅನ್ವಿತಾ ದತ್ತಾ ಮತ್ತು ಅಲ್ತಿಯಾ ಕೌಶಾಲ್‌ ಚಿತ್ರಕಥೆ ರಚಿಸಿದ್ದಾರೆ. ಸರಣಿ ನಿರ್ಮಿಸುತ್ತಿರುವ ಆಲ್ಕೆಮಿ ಪ್ರೊಡಕ್ಷನ್ಸ್‌ LLP ಸಿಇಓ ಸಿದ್ದಾರ್ಥ್‌ ಮಲ್ಹೋತ್ರಾ, ”ಬಹಳಷ್ಟು ಶ್ರಮವಹಿಸಿ ಈ ಸೈಕಾಲಾಜಿಕಲ್‌ ಥ್ರಿಲ್ಲರ್‌ ಕತೆ ಹೆಣೆದಿದ್ದೇವೆ. ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರ ನೇತೃತ್ವದಲ್ಲಿ ಚಿತ್ರಕಥೆಗೆ ಮತ್ತಷ್ಟು ಮೆರುಗು ಸಿಗಲಿದೆ” ಎನ್ನುತ್ತಾರೆ. ಅಮೇಜಾನ್‌ ಪ್ರೈಮ್‌ ವೀಡಿಯೋ ಇಂಡಿಯಾದ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌, “ಮನುಷ್ಯರ ಸಂಕೀರ್ಣ ವ್ಯಕ್ತಿತ್ವಗಳನ್ನು ಈ ಸರಣಿ ಅನಾವರಣಗೊಳಿಸಲಿದೆ. ವೀಕ್ಷಕರು ಇಲ್ಲಿನ ಪಾತ್ರಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಿದ್ದಾರೆ” ಎಂದಿದ್ದಾರೆ.

Previous article‘ಮಹಾಭಾರತ’ ಕಿರುತೆರೆ ಸರಣಿ ಖ್ಯಾತಿಯ ಪ್ರವೀಣ್‌ ಕುಮಾರ್‌ ಸೋಬ್ತಿ ನಿಧನ
Next articleಆಸ್ಕರ್‌ ನಾಮಿನೇಷನ್ಸ್‌ 2022; ಬಾರತದ ‘ರೈಟಿಂಗ್‌ ವಿಥ್‌ ಫೈರ್‌’ ಡಾಕ್ಯುಮೆಂಟರಿ ಆಯ್ಕೆ

LEAVE A REPLY

Connect with

Please enter your comment!
Please enter your name here