94ನೇ ಅಕಾಡೆಮಿ ಪ್ರಶಸ್ತಿಗೆ ಭಾರತದ ‘ರೈಟಿಂಗ್‌ ವಿಥ್‌ ಫೈರ್‌’ ಡಾಕ್ಯುಮೆಂಟರಿ ಸಿನಿಮಾ ಅಂತಿಮ ನಾಮನಿರ್ದೇಶನ ಪಟ್ಟಿಗೆ ಸೇರ್ಪಡೆಯಾಗಿದೆ. ಇದರ ಹೊರತಾಗಿ ಅತ್ಯುತ್ತಮ ಡಾಕ್ಯುಮೆಂಟರಿ ಕೆಟಗರಿಯಲ್ಲಿರುವ ಇತರೆ ಪ್ರಯೋಗಗಳೆಂದರೆ ಆಸ್ಕೆನ್ಸನ್‌, ಅಟ್ಟಿಕಾ, ಫ್ಲೀ ಮತ್ತು ಸಮ್ಮರ್‌ ಆಫ್‌ ದಿ ಸೋಲ್‌.

ದಿಲ್ಲಿ ಮೂಲದ ರಿತು ಥಾಮಸ್‌ ಮತ್ತು ಸುಷ್ಮಿತ್‌ ಘೋಷ್‌ ನಿರ್ದೇಶನದ ಡಾಕ್ಯುಮೆಂಟರಿ ಸಿನಿಮಾ ‘ರೈಟಿಂಗ್‌ ವಿಥ್‌ ಫೈರ್‌’ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ಕಳೆದ ವರ್ಷ ಜನವರಿಯಲ್ಲಿ ಸನ್‌ಡ್ಯಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸ್ಪೆಷಲ್‌ ಜ್ಯೂರಿ ಅವಾರ್ಡ್‌ ಮತ್ತು ಆಡಿಯನ್ಸ್‌ ಅವಾರ್ಡ್‌ ಪಡೆದಾಗಿನಿಂದ ಈ ಸಾಕ್ಷ್ಯಚಿತ್ರ ಸುದ್ದಿಯಲ್ಲಿದೆ. ಅಲ್ಲಿಂದ ಮುಂದೆ ಈ ಡಾಕ್ಯುಮೆಂಟರಿ ಇಪ್ಪತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ದಲಿತ ಮಹಿಳೆಯರೇ ನಡೆಸುವ ‘ಖಬರ್‌ ಲಹರಿಯಾ’ ಗ್ರಾಮೀಣ ದಿನಪತ್ರಿಕೆ ಕುರಿತ ಸಾಕ್ಷ್ಯಚಿತ್ರವಿದು.

‘ದಿ ವಾಶಿಂಗ್ಟನ್‌ ಪೋಸ್ಟ್‌’ ಪತ್ರಿಕೆ ಡಾಕ್ಯುಮೆಂಟರಿಯನ್ನು “The most inspiring journalism movie – maybe ever” ಎನ್ನುವ ಒಕ್ಕಣಿಯೊಂದಿಗೆ ಟ್ಯಾಗ್‌ ಮಾಡಿತ್ತು. ಆಸ್ಕೆನ್ಸನ್‌, ಅಟ್ಟಿಕಾ, ಫ್ಲೀ ಮತ್ತು ಸಮ್ಮರ್‌ ಆಫ್‌ ದಿ ಸೋಲ್‌ ನಾಮನಿರ್ದೇಶನಗೊಂಡಿರುವ ಇತರೆ ಡಾಕ್ಯುಮೆಂಟರಿಗಳು. ‘ರೈಟಿಂಗ್‌ ವಿಥ್‌ ಫೈರ್‌’ ಸಾಕ್ಷ್ಯಚಿತ್ರ ಅಕಾಡೆಮಿ ಗೌರವ ತರಲಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಆಶಿಸಿ ಸಂದೇಶಗಳನ್ನು ಹಾಕಿದ್ದಾರೆ.

LEAVE A REPLY

Connect with

Please enter your comment!
Please enter your name here