ತನಗೆ ಕ್ರೂರವಾಗಿರುವ ಜಗತ್ತನ್ನು ಎದುರಿಸಲಾಗದೆ ಸೋನಿಯಾ ಜೀವನ ಕೊನೆಗಳಿಸಲು ನಿರ್ಧಾರಿಸಿದಾಗ ತಾಯಿ ಅವಳನ್ನು ಹುಡುಕಿ ಮನೆಗೆ ಕರೆತರುತ್ತಾರೆ. ನಂತರ ಅವಳ ಜೀವನದಲ್ಲಿ ಆಳವಾದ ಬದಲಾವಣೆಯಾಗಿ ಎಲ್ಲವನ್ನು ಸಕರಾತ್ಮಕವಾಗಿ ನೋಡಲು ಶುರುಮಾಡುತ್ತಾಳೆ. 16ನೇ Biffes ಸ್ಪರ್ಧಾ ವಿಭಾಗದಲ್ಲಿದ್ದ ಮನೋಹರ್ ಕೆ ನಿರ್ದೇಶನದ ‘ಮಿಕ್ಕ ಬಣ್ಣದ ಹಕ್ಕಿ’ ಅತ್ಯುತ್ತಮ ಕನ್ನಡ ಸಿನಿಮಾ ಗೌರವಕ್ಕೆ ಪಾತ್ರವಾಗಿದೆ. ಚಿತ್ರನಿರ್ದೇಶಕ ಪೃಥ್ವಿ ಕೊಣನೂರು ಅವರ ನಿರ್ಮಾಣದ ಚಿತ್ರವಿದು.
ಸೋನಿಯಾ ಹೈ ಸ್ಕೂಲ್‌ನಲ್ಲಿ ಓದುತ್ತಿದ್ದು, ಅಲ್ಬಿನಿಸಂನಿಂದಾಗಿ ವಿಭಿನ್ನವಾಗಿ ಕಾಣಿಸುವ ಕಾರಣಕ್ಕೆ ಪರಿಚಿತರು, ಸ್ನೇಹಿತರಿಂದ ತಾರತಮ್ಯಕ್ಕೆ ಒಳಗಾಗಿ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾಳೆ. ತಂದೆ ಮದ್ಯ ವ್ಯಸನಿ. ಮಗಳ ಮೇಲೆ ಕಾಳಜಿ ವಹಿಸುವುದಿಲ್ಲ. ತಾಯಿ ಪ್ರೀತಿ ತೋರಿದರೂ ಅಸಹಾಯಕರಾಗಿದ್ದಾರೆ. ತನಗೆ ಕ್ರೂರವಾಗಿರುವ ಜಗತ್ತನ್ನು ಎದುರಿಸಲಾಗದೆ ಸೋನಿಯಾ ಜೀವನ ಕೊನೆಗಳಿಸಲು ನಿರ್ಧಾರಿಸಿದಾಗ ತಾಯಿ ಅವಳನ್ನು ಹುಡುಕಿ ಮನೆಗೆ ಕರೆತರುತ್ತಾರೆ. ನಂತರ ಅವಳ ಜೀವನದಲ್ಲಿ ಆಳವಾದ ಬದಲಾವಣೆಯಾಗಿ ಎಲ್ಲವನ್ನು ಸಕರಾತ್ಮಕವಾಗಿ ನೋಡಲು ಶುರುಮಾಡುತ್ತಾಳೆ. ತನ್ನ ನೋವನ್ನು ನಗುವಾಗಿ ಪರಿವರ್ತಿಸಿಕೊಳ್ಳಲು ಹಾಸ್ಯದ ಪ್ರತಿಭೆಯನ್ನು ಬೆಳಸಿಕೊಂಡು ಎಲ್ಲರನ್ನು ನಗಿಸಲು ಪ್ರಯತ್ನಿಸಿ ಅದು ಸಾಧ್ಯವಾಗದಿದ್ದರು, ತನ್ನ ನ್ಯೂನತೆಗಳನ್ನು ಮೀರಿ ಜಗತ್ತನ್ನು ಎದುರಿಸುವ ಮನಸ್ಥೈರ್ಯ ಕಂಡುಕೊಳ್ಳುತ್ತಾಳೆ.
2016ರಲ್ಲಿ ಪ್ರಶಸ್ತಿ ಗೆದ್ದುಕೊಂಡ ‘ರೈಲ್ವೇ ಚಿಲ್ಡ್ರನ್’ ಸಿನಿಮಾದ ಹೀರೋ ಮನೋಹರ್ ಗೊತ್ತಲ್ಲ? ಅದೇ ಹುಡುಗನ ಚೊಚ್ಚಲ ನಿರ್ದೇಶನದ ಸಿನಿಮಾ ಇದು. ಮೇಲೆ ಹೇಳಿದಂತೆ Albinismನಿಂದ ವಿಭಿನ್ನವಾಗಿ ಕಾಣುವ ಹುಡುಗಿಯೊಬ್ಬಳ ಆತ್ಮಕಥೆ ಈ ಸಿನಿಮಾ. ಸಿನಿಮಾದ ಮೊದಲಾರ್ಧ ಆಕೆ ಸಮಾಜದಿಂದ ಅವಹೇಳನಕ್ಕೊಳಗಾಗುವ ಬಗ್ಗೆ ಹೇಳಿದರೂ ದ್ವಿತಿಯಾರ್ಧದಲ್ಲಿ ಆಕೆ ಆ ಪರಿಸ್ಥಿತಿಯನ್ನು ವಿಭಿನ್ನವಾಗಿ ಗೆಲ್ಲುವ ಬಗ್ಗೆ ತೆಗೆಯಲಾಗಿದೆ. ವೈಯಕ್ತಿಕವಾಗಿ ಆ ಭಾಗಗಳೆಲ್ಲ ಸಮಾಜ ಹೇಗೆ ಬದಲಾಗಬೇಕಿತ್ತು ಅನ್ನುವುದನ್ನು ತೋರಿಸಬೇಕಿತ್ತು ಅನ್ನಿಸಿದರೂ ನಂತರ ಇದೊಂದು ಆತ್ಮಕಥೆಯ ಸಿನಿಮಾ ರೂಪ ಅಂತ ತಿಳಿದ ಮೇಲೆ accept ಮಾಡಿಕೊಂಡೆ.
Manoharಗೆ ನಿರ್ದೇಶನದ ಕೌಶಲ್ಯ ಕೈಹಿಡಿದಿದೆ. ಜೊತೆಗೆ ಚಿತ್ರನಿರ್ದೇಸಕ ಪೃಥ್ವಿ ಕೊಣನೂರು ಅವರ ಮಾರ್ಗದರ್ಶನವಿದೆ. ಪೃಥ್ವಿಯವರೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆ ಕೂಡ. ಮನೋಹರ್ one-linerಗಳಲ್ಲಿ ಪ್ರೇಕ್ಷಕರನ್ನು ಹುಚ್ಚಾಪಟ್ಟೆ ನಗಿಸುವುದನ್ನು ನೋಡಿದರೆ ಆರಾಮಾಗಿ ಹಾಸ್ಯದ ಸಿನಿಮಾಗಳನ್ನು ತೆಗೆಯಬಹುದು ಅಂತ ಅನ್ನಿಸಿತು. ಚಿತ್ರದ ಮುಖ್ಯ ಪಾತ್ರದಲ್ಲಿ ಜಯಶ್ರೀ, ಮಹಾದೇವ ಹಡಪದ, ಗಾಯತ್ರಿ ಹೆಗ್ಗೋಡು, ರೇಖಾ ಕೂಡ್ಲಿಗಿ ಸೇರಿದಂತೆ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಈ ಸಿನಿಮಾ ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ಕನ್ನಡ ಚಿತ್ರ’ ಪ್ರಶಸ್ತಿಗೆ ಭಾಜನವಾಯಿತು.