ರೈತರ ಬವಣೆಯ ಕುರಿತ ಸಾಮಾಜಿಕ ಕಳಕಳಿಯ ಸಿನಿಮಾ ‘ಬಿಸಿಲು ಕುದುರೆ’ ಐವತ್ತು ದಿನಗಳ ಪ್ರದರ್ಶನ ಕಂಡಿದೆ. ಚಿತ್ರಸಾಹಿತಿ ಹೃದಯಶಿವ ನಿರ್ದೇಶನದ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಸಂಪತ್‌ ಮೈತ್ರೇಯ ನಟಿಸಿದ್ದಾರೆ.

‘ಅರುಣ್ಯದಂಚಿನಲ್ಲಿ ತುಂಡುಭೂಮಿ ಹೊಂದಿರುವ ರೈತನ ಬವಣೆಯ ಕುರಿತಾದ ಈ ಚಿತ್ರವನ್ನು ಜನರು ನೋಡಿ ಮೆಚ್ಚಿದ್ದಾರೆ. ನಮ್ಮ ಚಿತ್ರ ಒಂದೇ ಚಿತ್ರಮಂದಿರದಲ್ಲಿ ಐವತ್ತು ದಿನ ಪೂರೈಸಿಲ್ಲ. ರಾಜ್ಯದ ವಿವಿಧ ಕಡೆ ಬಿಡುಗಡೆಯಾಗಿ ಪ್ರದರ್ಶನ ಕಂಡು ಈಗ ಐವತ್ತು ದಿನ ಪೂರೈಸಿದೆ. ಸದ್ಯದಲ್ಲೇ ಸಿನಿಮಾ ಓಟಿಟಿಯಲ್ಲೂ ಬರಲಿದೆ’ ಎಂದು ಸಿನಿಮಾ ವೀಕ್ಷಿಸಿದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತಾರೆ ನಿರ್ದೇಶಕ ಹೃದಯಶಿವ. ಸದ್ಯದಲ್ಲೇ ಅವರ ನಿರ್ದೇಶನದಲ್ಲಿ ಎರಡು ಸಿನಿಮಾಗಳು ಘೋಷಣೆಯಾಗಲಿವೆ. ಇದರಲ್ಲಿ ಒಂದು ಭಾರೀ ಬಜೆಟ್‌ನ ಚಿತ್ರವಾಗಿರಲಿದೆ ಎನ್ನುತ್ತಾರವರು.

ಚಿತ್ರದ ಪ್ರಮುಖ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿರುವ ಸಂಪತ್‌ ಮೈತ್ರೇಯ, ‘ರೈತರ ಕುರಿತಾದ ಕತೆ, ಸಿನಿಮಾಗಳು ಬರುವುದೇ ಅಪರೂಪ. ಇಂತಹ ಸಂದರ್ಭದಲ್ಲಿ ಐವತ್ತು ದಿನಗಳ ಪ್ರದರ್ಶನ ನಮ್ಮಲ್ಲಿ ವಿಶ್ವಾಸ ಮೂಡಿಸುತ್ತದೆ. ನಾನು ಚಿತ್ರದ ಕುರಿತು ಬಿಡುಗಡೆ ಪೂರ್ವದಲ್ಲೇ ಸಾಕಷ್ಟು ಮಾತನಾಡಿದ್ದೇನೆ. ಈಗ ಐವತ್ತನೇ ದಿನದ ಸಂತೋಷವನ್ನು ಸಂಭ್ರಮಿಸುತ್ತಿದ್ದೇನೆ’ ಎನ್ನುತ್ತಾರೆ. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಸುನೀತಾ, ಕರಿಸುಬ್ಬು, ವಿಕ್ಚರಿ ವಾಸು ನಟಿಸಿದ್ದಾರೆ. ಹಿಂದೂಸ್ತಾನಿ ಸಂಗೀತದಲ್ಲಿ ಪರಿಣತಿ ಪಡೆದಿರುವ ಇಮ್ಲಿಯಾಜ್‌ ಸುಲ್ತಾನ್‌, ನಾಗಾರ್ಜುನ ಛಾಯಾಗ್ರಹಣ, ಕೆಂಪರಾಜ್‌ ಸಂಕಲನ ಚಿತ್ರಕ್ಕಿದೆ. ಹೃದಯ ಶಿವ ಚಿತ್ರತಂಡದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

LEAVE A REPLY

Connect with

Please enter your comment!
Please enter your name here