ನಟ ಪುನೀತ್‌ ರಾಜಕುಮಾರ್ ಅಗಲಿಕೆಯ ನಂತರದ ಟ್ವಿಟರ್‌ ಟ್ರೆಂಡ್‌ ಇದು. ಸ್ಯಾಂಡಲ್‌ವುಡ್‌ನ ಸ್ಟಾರ್‌ ಹೀರೋಗಳ ಅಭಿಮಾನಿಗಳು, ಸ್ಟಾರ್‌ವಾರ್ ಕೊನೆಗೊಳ್ಳಲಿ ಎನ್ನುವ ಆಶಯದೊಂದಿಗೆ ಹೀರೋಗಳ ಫೋಟೊಗಳನ್ನು ಕೊಲ್ಯಾಜ್‌ ಮಾಡಿ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ.

ನಟ ಪುನೀತ್ ರಾಜಕುಮಾರ್ ಅಕಾಲಿಕ ಅಗಲಿಕೆಯ ನೋವು ಕನ್ನಡ ಚಿತ್ರರಂಗವನ್ನು ಬಾಧಿಸುತ್ತಲೇ ಇದೆ. ಸ್ಯಾಂಡಲ್‌ವುಡ್‌ನ ಎಲ್ಲಾ ಸ್ಟಾರ್ ಹೀರೋಗಳ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. “ಪುನೀತ್‌ ಕನ್ನಡ ಚಿತ್ರರಂಗದ ಆಸ್ತಿಯಾಗಿದ್ದರು. ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಚಿತ್ರರಂಗದ ಎಲ್ಲಾ ಹೀರೋಗಳೂ ಅವರ ನಿಧನಕ್ಕೆ ಕಣ್ಣೀರು ಹಾಕಿದ್ದಾರೆ. ಪುನೀತ್ ಆಶಯದಂತೆ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್ ಕೊನೆಯಾಗಲಿ. ಎಲ್ಲಾ ನಾಯಕನಟರೂ ಒಗ್ಗಟ್ಟಿನಿಂದ ಸಿನಿಮಾ ಮಾಡುತ್ತಾ ಉದ್ಯಮವನ್ನು ಎತ್ತರಕ್ಕೆ ಬೆಳೆಸಲಿ” ಎನ್ನುವ ಒಕ್ಕಣಿಯೊಂದಿಗೆ ಸ್ಯಾಂಡಲ್‌ವುಡ್‌ ಅಭಿಮಾನಿಗಳು ಟ್ವಿಟರ್ ಮತ್ತು ಎಫ್ಬಿಯಲ್ಲಿ ಸಂದೇಶ ಹಾಕತೊಡಗಿದರು. ಕನ್ನಡದ ಎಲ್ಲಾ ಹೀರೋಗಳ ಫೋಟೋ ಕೊಲ್ಯಾಜ್‌ ಜೊತೆ ಕನ್ನಡ ಭಾವುಟವೂ ಸೇರಿಕೊಂಡಿತು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಂಥದ್ದೊಂದು ಆಶಯ ನಿನ್ನೆಯಿಂದ ಟ್ವಿಟರ್ ಟ್ರೆಂಡ್ ಆಗುತ್ತಿದೆ.

ಪ್ರಮುಖವಾಗಿ ದರ್ಶನ್‌ ಮತ್ತು ಸುದೀಪ್‌ ಎಲ್ಲಾ ವೈಮನಸ್ಸು ಮರೆತು ಮಾತನಾಡಲಿ, ಒಟ್ಟಿಗೆ ಸಿನಿಮಾ ಮಾಡಲಿ ಎನ್ನುವ ಆಶಯ ಇಲ್ಲಿತ್ತು. ಅತಿ ಹೆಚ್ಚು ಟ್ವೀಟ್‌ಗಳು ಬಂದಿದ್ದು ದರ್ಶನ್‌ ಅಭಿಮಾನಿಗಳಿಂದ. ಉಳಿದಂತೆ ಪುನೀತ್‌ ರಾಜಕುಮಾರ್, ಶಿವರಾಜಕುಮಾರ್, ಸುದೀಪ್‌, ಯಶ್‌ ಮತ್ತು ಗಣೇಶ್ ಅಭಿಮಾನಿಗಳು ಈ ಟ್ವಿಟರ್ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ. ‘ಇನ್ನು ಮುಂದೆ ಇತರೆ ಹೀರೋಗಳನ್ನು ನಾವು ಟ್ರಾಲ್ ಮಾಡುವುದಿಲ್ಲ” ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಹಿರಿಯ ನಟ ಜಗ್ಗೇಶ್ ಈ ಆಶಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ, “ಇಂಥದ್ದೊಂದು ಆಶಯ ಈಡೇರಲಿ’ ಎನ್ನುವ ಅರ್ಥದ ಒಕ್ಕಣಿಯೊಂದಿಗೆ ಟ್ವೀಟ್ ಮಾಡಿದ್ದರು. ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವರು ಸೋಷಿಯಲ್ ಮೀಡಿಯಾದಲ್ಲಿ ಈ ಟ್ರೆಂಡ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಸುಂದರ ಆಶಯ ಈಡೇರಿದರೆ ಅಗಲಿದ ಪುನೀತ್‌ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಕೆಲವು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

Previous article‘ಮೈಸೂರು’ನಲ್ಲೊಂದು ಲವ್‌ಸ್ಟೋರಿ; ಕನ್ನಡ, ಒಡಿಸ್ಸಾ, ಬೆಂಗಾಲಿಯಲ್ಲಿ ತಯಾರಾಗಿದೆ ಸಿನಿಮಾ
Next articleಟ್ರೈಲರ್ | ಆಂಟಿಹೀರೋ ಜೇರಡ್‌ ಲೆಟೊ; ಡೇನಿಯಲ್‌ ಎಸ್ಪಿನೋಸಾ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here