ಅಮೇಜಾನ್ ಪ್ರೈಮ್‌ನಲ್ಲಿ ಅಕ್ಟೋಬರ್‌ 29ರಿಂದ ‘ಮರಡೋನಾ: ಬ್ಲೆಸ್ಡ್ ಡ್ರೀಮ್‌’ ಸರಣಿ ಸ್ಟ್ರೀಮ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮರಡೋನಾ ಗೌರವಾರ್ಥ ಫುಟ್‌ಬಾಲ್‌ ಪಂದ್ಯದಲ್ಲಿ ರಣಬೀರ್ ಕಪೂರ್, ಅಹಾನ್ ಶೆಟ್ಟಿ, ಶೂಜಿತ್ ಸರ್ಕಾರ್ ಮತ್ತಿತರರು ಪಾಲ್ಗೊಂಡಿದ್ದರು.

ಜಾಗತಿಕ ಫುಟ್‌ಬಾಲ್‌ನ ಮೇರು ಪ್ರತಿಭೆ ಡಿಗೊ ಮರಡೋನಾ ಬದುಕು, ಸಾಧನೆಯ ‘ಮರಡೋನಾ: ಬ್ಲೆಸ್ಡ್ ಡ್ರೀಮ್‌’ ಸರಣಿ ಅಕ್ಟೋಬರ್‌ 29ರಿಂದ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮರಡೋನಾಗೆ ಗೌರವ ಸೂಚಿಸಲು ಮುಂಬಯಿಯಲ್ಲಿ ಸೆಲೆಬ್ರಿಟಿ ಫುಟ್‌ಬಾಲ್‌ ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಬಾಲಿವುಡ್‌ ತಾರೆಯರಾದ ರಣಬೀರ್ ಕಪೂರ್‌, ಅಹಾನ್ ಶೆಟ್ಟಿ, ಮೀಜಾನ್ ಜಾಫ್ರಿ, ಜಿಮ್‌ ಸರ್ಭ್‌, ವಿವಿಯಾನ್ ಸೇನಾ, ಅಭಿಮನ್ಯು ದಾಸಾನಿ ಸೇರಿದಂತೆ ಹಲವರು ಆಟಗಾರರಾಗಿ ಭಾಗವಹಿಸಿದ್ದರು.

‘ಮರಡೋನಾ: ಬ್ಲೆಸ್ಡ್ ಡ್ರೀಮ್ಸ್‌’ ಸರಣಿಯ ಮೊದಲ ಸೀಸನ್‌ನಲ್ಲಿ ಹತ್ತು ಮತ್ತು ಎರಡನೇ ಸೀಸನ್‌ ಹತ್ತು ಎಪಿಸೋಡ್‌ಗಳು ಸ್ಟ್ರೀಮ್ ಆಗಲಿವೆ. ಸರಣಿಯಲ್ಲಿ ಮರಡೋನಾ ಬಾಲ್ಯ, ಯೌವ್ವನ, ಡ್ರಗ್ಸ್‌ ಪ್ರಕರಣ, ಗರ್ಲ್‌ಫ್ರೆಂಡ್‌ ಆರೋಪ, ‘ಹ್ಯಾಂಡ್‌ ಆಫ್‌ ಗಾಡ್‌’ ವಿವಾದ ಸೇರಿದಂತೆ ಹಲವು ಸಂಗತಿಗಳು ಪ್ರಸ್ತಾಪವಾಗಲಿವೆ. ಜುವಾನ್‌ ಪಲೊಮಿನೊ ಮತ್ತು ನಿಕೋಲಸ್‌ ಗೋಲ್ಡ್‌ಸ್ಮಿಡ್ತ್‌ ಮರಡೋನಾ ಬಾಲ್ಯ ಮತ್ತು ಯೌವ್ವನದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಐದು ಪ್ರಾದೇಶಿಕ ಭಾಷೆಗಳಲ್ಲಿ ಸರಣಿ ಸ್ಟ್ರೀಮ್‌ ಆಗುತ್ತಿದ್ದು, ಮರಡೋನಾರ ಭಾರತೀಯ ಅಭಿಮಾನಿಗಳು ಸರಣಿಯನ್ನು ಇಷ್ಟಪಟ್ಟಿದ್ದಾರೆ.

LEAVE A REPLY

Connect with

Please enter your comment!
Please enter your name here