ಚಿತ್ರತಂಡದ ಯೋಜನೆಯಂತೆ ಸುನಿ ನಿರ್ದೇಶನದ ‘ಸಖತ್‌’ ಸಿನಿಮಾ ನವೆಂಬರ್‌ 12ಕ್ಕೆ ತೆರೆಕಾಣಬೇಕಿತ್ತು. ನಟ ಪುನೀತ್‌ ಅಗಲಿಕೆಯ ಹಿನ್ನೆಲೆಯಲ್ಲಿ ಸಿನಿಮಾ ಮುಂದೂಡಲ್ಪಟ್ಟಿದ್ದು, 26ರಿಂದ ಸಿನಿಮಾ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಸಿಗಲಿದೆ.

ಇತ್ತೀಚಿನ ದಿನಗಳಲ್ಲಿ ಟ್ರೈಲರ್‌ನಿಂದಲೇ ಸುದ್ದಿ ಮಾಡಿದ ಚಿತ್ರಗಳ ಪೈಕಿ ‘ಸಖತ್‌’ ಮುಂಚೂಣಿಯಲ್ಲಿದೆ. ನಿರ್ದೇಶಕ ಸುನಿ ಅವರ ಚಿತ್ರಗಳು ತಮ್ಮದೇ ಆದ ವಿಶಿಷ್ಟ ಕತೆ, ಸಂಭಾಷಣೆ ಮತ್ತು ನಿರೂಪಣೆಯಿಂದ ಗಮನ ಸೆಳೆಯುತ್ತವೆ. ಗಣೇಶ್ ನಟನೆಯ ‘ಸಖತ್‌’ ಸಿನಿಮಾದಲ್ಲೂ ಈ ಗುಣವಿದೆ ಎನ್ನುವುದಕ್ಕೆ ಟ್ರೈಲರ್‌ ಸಾಕ್ಷ್ಯ ಒದಗಿಸಿತ್ತು. ಟ್ರೈಲರ್ ವೀಕ್ಷಿಸಿದ ಸಿನಿಪ್ರಿಯರು ಸಿನಿಮಾವನ್ನು ಎದುರು ನೋಡುತ್ತಿದ್ದರು. ನವೆಂಬರ್‌ 12ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡವೂ ಹೇಳಿಕೊಂಡಿತ್ತು. ಆದರೆ ನಟ ಪುನೀತ್ ಅಕಾಲಿಕ ಅಗಲಿಕೆಯಿಂದಾಗಿ ಚಿತ್ರೋದ್ಯಮ ಮಂಕಾಗಿದೆ. ಜನರು ಕೂಡ ಥಿಯೇಟರ್‌ನಿಂದ ಕೊಂಚ ವಿಮುಖರಾಗಿದ್ದಾರೆ. ಅಲ್ಲದೆ ಚಿತ್ರತಂಡವೂ ಕೂಡ ನಟನ ಅಗಲಿಕೆಯಿಂದ ಬೇಸರದಲ್ಲಿದೆ. ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದು, 26ಕ್ಕೆ ಥಿಯೇಟರ್‌ಗೆ ಬರಲು ನಿಶ್ಚಯಿಸಿದ್ದಾರೆ.

‘ಸಖತ್‌’ ಸಿನಿಮಾದಲ್ಲಿ ಮಳೆ ಹುಡುಗ ಗಣೇಶ್ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಗಣೇಶ್‌ಗೆ ಜೋಡಿಯಾಗಿ ಬೊಗಸೆ ಕಣ್ಗಳ ಚೆಲುವೆ ನಿಶ್ವಿಕಾ ನಾಯ್ಡು ಬಣ್ಣ ಹಚ್ಚಿದ್ದಾರೆ. ಇದೊಂದು ಕಾಮಿಡಿ ಕಂ ಕ್ರೈಮ್ ಥಿಲ್ಲರ್  ಶೈಲಿಯ ಸಿನಿಮಾ. ಟಿವಿ ರಿಯಾಲಿಟಿ ಶೋ, ಮರ್ಡರ್ ಹಾಗೂ ಕೋರ್ಟ್ ಕೇಸ್ ಸುತ್ತ ಇಡೀ ಸಿನಿಮಾವನ್ನು ಎಣೆಯಲಾಗಿದೆ. ಕೆ.ವಿ.ಎನ್ ಪ್ರೊಡಕ್ಷನ್ ಬ್ಯಾನರ್‌ನಡಿ ತಯಾರಾಗಿರುವ ‘ಸಖತ್’ ಸಿನಿಮಾಕ್ಕೆ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ವರ್ಕ್, ಶಾಂತ ಕುಮಾರ್ ಸಂಕಲನ, ಜ್ಯೂಡಾ ಸ್ಯಾಂಡಿ ಸಂಗೀತ ಸಿನಿಮಾಕ್ಕಿದೆ.

LEAVE A REPLY

Connect with

Please enter your comment!
Please enter your name here