ರಾಹುಲ್‌ ಸದಾಶಿವನ್‌ ನಿರ್ದೇಶನದ ‘ಭ್ರಮಯುಗಂ’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮಮ್ಮೂಟಿ, ಅರ್ಜುನ್‌ ಅಶೋಕನ್‌, ಅಮಲ್ಡಾ ಲಿಜ್‌, ಸಿದ್ದಾರ್ಥ್‌ ಭರತನ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಮ್ಮೂಟಿ ಅಭಿನಯದ ‘ಭ್ರಮಯುಗಂ’ ಮಲಯಾಳಂ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರವನ್ನು ರಾಹುಲ್ ಸದಾಶಿವನ್ ನಿರ್ದೇಶಿಸಿದ್ದಾರೆ. ಕಪ್ಪು- ಬಿಳುಪು ಟೀಸರ್, ಅರ್ಜುನ್ ಅಶೋಕನ್ ಹಳೆಯ ಮನೆಯೊಂದರೊಳಗೆ ಪ್ರವೇಶಿಸುವ ಮೂಲಕ ಪ್ರಾರಂಭವಾಗುತ್ತದೆ. ಆಗ ಸಂಪೂರ್ಣ ಕತ್ತಲೆ ಆವರಿಸಿದಂತಾಗಿ ವಿಲಕ್ಷಣವಾದ ನಗು ಕೇಳಿಸುತ್ತದೆ. ಟೀಸರ್‌ ಕೊನೆಯಲ್ಲಿ ಮಮ್ಮೂಟಿ ದೀಪವನ್ನು ಊದಿ ವಿಚಿತ್ರವಾಗಿ ನಗು ಬೀರಿದ್ದಾರೆ. ಚಿತ್ರವನ್ನು ರಾಮಚಂದ್ರ ಚಕ್ರವರ್ತಿ ಮತ್ತು ಎಸ್ ಶಶಿಕಾಂತ್ ನಿರ್ಮಿಸಿದ್ದಾರೆ. ಟಿಡಿ ರಾಮಕೃಷ್ಣನ್ ಸಂಭಾಷಣೆ ಬರೆದಿದ್ದು, ಶೆಹನಾದ್ ಜಲಾಲ್ ಛಾಯಾಗ್ರಹಣವಿದೆ. ಕ್ರಿಸ್ಟೋ ಕ್ಸೇವಿಯರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ರಾಹುಲ್ ಸದಾಶಿವನ್ ಅವರು ಈ ಹಿಂದೆ ಶೇನ್ ನಿಗಮ್ ಮತ್ತು ರೇವತಿ ಅಭಿನಯದ ಹಾರರ್ ಥ್ರಿಲ್ಲರ್ ‘ಭೂತಕಾಲಂ’ ಚಿತ್ರವನ್ನು ನಿರ್ದೇಶಿಸಿದ್ದರು. ‘The Age of Madness’ ಎಂಬ ಅಡಿಬರಹ ಹೊಂದಿರುವ ‘ಭ್ರಮಯುಗಂ’ ಚಿತ್ರದಲ್ಲಿ ನಟ – ನಿರ್ದೇಶಕ ಸಿದ್ಧಾರ್ಥ್ ಭರತನ್ ಮತ್ತು ಕಮ್ಮಟ್ಟಿಪಾಡಂ ನಟಿ ಅಮಲ್ಡಾ ಲಿಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಮೂಲ ಮಲಯಾಳಂ ಸೇರಿದಂತೆ ತಮಿಳು, ತೆಲುಗು, ಕನ್ನಡ
ಮತ್ತು ಹಿಂದಿ ಭಾಷೆಗಳಲ್ಲಿ ಫೆಬ್ರವರಿ 5ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here