ಗುರುತೇಜ್‌ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಬಡ್ಡೀಸ್‌’ ಚಿತ್ರತಂಡ ವಿಭಿನ್ನ ಪೋಸ್ಟರ್‌ ಬಿಡುಗಡೆ ಮಾಡಿದೆ. ತಮ್ಮ ಸಿನಿಮಾಗೆ ತೆರೆಯ ಹಿಂದೆ ಕೆಲಸ ಮಾಡಿದ ತಂತ್ರಜ್ಞರನ್ನು ಒಂದೆಡೆ ಸೇರಿಸಿ ಫೋಟೊಶೂಟ್‌ ನಡೆಸಿದ್ದಾರೆ.

ಸಾಮಾನ್ಯವಾಗಿ ಸಿನಿಮಾದ ಫಸ್ಟ್‌ಲುಕ್‌, ಪೋಸ್ಟರ್‌, ಟೀಸರ್‌ ಅನ್ನು ಚಿತ್ರರಂಗ ಹಾಗೂ ಇತರೆ ಕ್ಷೇತ್ರಗಳಲ್ಲಿ ದುಡಿದ ಸಾಧಕರಿಂದ ಬಿಡುಗಡೆ ಮಾಡಿಸುವುದು ವಾಡಿಕೆ. ಆದರೆ ‘ಬಡ್ಡೀಸ್’ ಚಿತ್ರದ ಪೋಸ್ಟರನ್ನು ಚಿತ್ರಕ್ಕಾಗಿ ದುಡಿದ ತಂತ್ರಜ್ಞರ ಮೂಲಕ ಬಿಡುಗಡೆ ಮಾಡಿಸಿದ್ದಾರೆ ಈ ಚಿತ್ರದ ನಿರ್ಮಾಪಕಿ ಭಾರತಿ ಶೆಟ್ಟಿ ಹಾಗೂ ನಿರ್ದೇಶಕ ಗುರುತೇಜ್ ಶೆಟ್ಟಿ. ಈ ಪೋಸ್ಟರ್ ಬಿಡುಗಡೆಗಾಗಿ ಎಲ್ಲಾ ತಂತ್ರಜ್ಞರನ್ನು ಒಂದೆಡೆ ಸೇರಿಸಿ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾವಚಿತ್ರಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ನಿರ್ಮಾಪಕಿ ಭಾರತಿ ಶೆಟ್ಟಿ, ನಿರ್ದೇಶಕ ಗುರುತೇಜ್ ಶೆಟ್ಟಿ, ಛಾಯಾಗ್ರಹಣ ಮಾಡಿರುವ ನಿಭಾ ಶೆಟ್ಟಿ, ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ, ಸಾಹಸ ಸಂಯೋಜಕ ಡಿಫರೆಂಟ್ ಡ್ಯಾನಿ, ನೃತ್ಯ ನಿರ್ದೇಶಕ ಧನಂಜಯ, ಸಂಕಲನಕಾರ ಕೆ.ಎಂ.ಪ್ರಕಾಶ್, ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಹಾಗೂ ಡಿಸೈನರ್ ಮಣಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡು‌ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಅಳವಡಿಸಲಾಗುತ್ತಿದ್ದು, ಮೇನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

ಭಾರತಿ ಶೆಟ್ಟಿ ಫಿಲಂಸ್ ಸಂಸ್ಥೆಯ ಮೊದಲ ಚಿತ್ರವಾಗಿ ಕಿರಣ್ ರಾಜ್ ನಟನೆಯ ‘ಬಡ್ಡೀಸ್’ ನಿರ್ಮಾಣವಾಗುತ್ತಿದೆ. ಗುರುತೇಜ್ ಶೆಟ್ಟಿ ಕತೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಮೂರು ಹಾಡುಗಳಿರುವ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ. ಯು.ಎಸ್.ಎ ನಿವಾಸಿ‌ ನಿಭಾ ಶೆಟ್ಟಿ‌ ಈ ಚಿತ್ರದ ಛಾಯಾಗ್ರಾಹಕಿ. ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಕಿರಣ್ ರಾಜ್‌ಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅಭಿನಯಿಸಿದ್ದಾರೆ. ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ್ ಹೆಗಡೆ, ಗಿರೀಶ್ ಜತ್ತಿ, ಲಂಕೇಶ್, ಹೇಮಂತ್, ವಿವೇಕ್ ಮುಂತಾದವರು ‘ಬಡ್ಡೀಸ್’ನಲ್ಲಿ ನಟಿಸಿದ್ದಾರೆ.

ter

LEAVE A REPLY

Connect with

Please enter your comment!
Please enter your name here